ಹಣ ಕೇಳಿ ಹಿಂಸೆ ಕೊಟ್ಟ ಬೀದಿ ಕಾಮಣ್ಣ.. ಬೆಂಗಳೂರಿನ ಹೆಣ್ಣು ಮಕ್ಕಳೇ ಹುಷಾರ್..!

Spread the love

ಬೆಂಗಳೂರಲ್ಲಿ  ಬೀದಿ ಕಾಮಣ್ಣರ ಕಾಟ ಹೆಚ್ಚಾಗಿದ್ದು, ಹೆಣ್ಣು ಮಕ್ಕಳು ಹೆದರಿ ಓಡಾಡೋ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರಿನ ವೈಟೀಲ್ಡ್ ಬಸ್‌ ಸ್ಟ್ಯಾಂಡ್‌ನಲ್ಲಿ ಯುವತಿಯ ಜತೆ ಕಾಮಿಷ್ಟನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ.ಹಣ ಕೊಟ್ಟು ಸಹಾಯ ಮಾಡಿದ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾನೆ.

ಯುವತಿಯೊಬ್ಬಳ ಬಳಿ ಬಂದು ನಾನು ಮೆಜೆಸ್ಟಿಕ್‌ಗೆ ಹೋಗಬೇಕು 100 ರೂ. ಕೊಡಿ ಎಂದು ಸಹಾಯ ಕೋರಿದ್ದಾನೆ.ಹಣ ಕೊಟ್ಟ ಬಳಿಕ ಬಲವಂತವಾಗಿ ಮೈಮುಟ್ಟಿ, ಹಗ್ ಮಾಡು ಎಂದು ಹಿಂಸೆ ಕೊಟ್ಟಿದ್ದಾನೆ. ಯುವತಿ ಆತನ ಕಷ್ಟಕ್ಕೆ ಕರಗಿ ಹಣ ಕೊಟ್ಟ ಬಳಿಕ ರೋಡ್ ರೋಮಿಯೋ ಅಸಲಿ ಬಣ್ಣ ಗೊತ್ತಾಗಿದೆ.

ಯುವತಿಯ ವೈಯಕ್ತಿಕ ಮಾಹಿತಿಯನ್ನು ಕೆದಕಿ ಆಸಾಮಿ ತೊಂದರೆ ನೀಡಿದ್ದಾನೆ. ಫೋನ್ ನಂಬರ್ ಕೊಡುವಂತೆ ಪೀಡಿಸಿದ್ದಾನೆ. 10 ನಿಮಿಷಗಳ ಕಾಲ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹುಚ್ಚಾಟ ತೋರಿದ್ದಾನೆ.

ಅನಾಮಿಕ ತೋರಿದ ಹಿಂಸೆ ತಾಳಲಾರದೇ ಯುವತಿ ವೀಡಿಯೋ ರೆಕಾರ್ಡ್ ಮಾಡಿದ್ದಾಳೆ. ಯುವತಿ ಕಿರುಚಾಡಿದ ಬಳಿಕ ಹೆದರಿದ ಪುಂಡ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಸದ್ಯ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಯುವತಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

WhatsApp Group Join Now

Spread the love

Leave a Reply