ಹಾಸಿಗೆಯಲ್ಲಿ ಮಗು ಮೂತ್ರ ಮಾಡಿದ್ದಕ್ಕೆ ಕಂದಮ್ಮನ ಗುಪ್ತಾಂಗವನ್ನೇ ಸುಟ್ಟ ಮಲತಾಯಿ

Spread the love

ಮಗು ಮಲಗಿದ್ದಾಗ ಹಾಸಿಗೆಯಲ್ಲಿ ಮೂತ್ರ ಮಾಡಿತು ಎಂಬ ಕಾರಣಕ್ಕೆ ಮಲತಾಯಿಯೊಬ್ಬಳು ಮಗುವಿನ ಗುಪ್ತಾಂಗವನ್ನು ಸುಟ್ಟು ವಿಕೃತಿ ಮೆರೆದಿರುವ ಅಮಾನುಷ ಘಟನೆ ಕೇರಳದಲ್ಲಿ ನಡೆದಿದೆ.

ಒಂದೇ ಒಂದು ಪುಟ್ಟ ತಪ್ಪಿಗೆ ಯಾಕಿಷ್ಟು ಕ್ರೂರ ಶಿಕ್ಷೆ?

ಕಳೆದ ವಾರ ಪುಟ್ಟ ಬಾಲಕಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾಳೆ. ಇದರಿಂದ ಮಗುವಿನ ಮೇಲೆ ಕೋಪಗೊಂಡ ಮಲತಾಯಿ ಮಾಡಬಾರದ ಕೆಲಸ ಮಾಡಿದ್ದಾಳೆ. ಕಬ್ಬಿಣದ ಸೌಟನ್ನು ಬೆಂಕಿಯಲ್ಲಿ ಕಾಯಿಸಿ 5 ವರ್ಷದ ಪುಟ್ಟ ಬಾಲಕಿಯ ಗುಪ್ತಾಂಗಕ್ಕೆ ಬರೆ ಹಾಕಿ ಕ್ರೌರ್ಯ ಮೆರೆದಿದ್ದಾಳೆ. ಈ ಘಟನೆಯನ್ನ ಯಾರ ಬಳಿಯೂ ಹೇಳಿಕೊಳ್ಳಲಾಗದೇ ಆ ಪುಟ್ಟ ಮಗು ನರಕಯಾತನೆ ಅನುಭವಿಸಿದೆ.

ಅಂಗನವಾಡಿಯಲ್ಲಿ ಮಗು ಕುಳಿತುಕೊಳ್ಳಲು ಕಷ್ಟಪಡುವುದನ್ನ ಗಮನಿಸಿದ ಅಂಗನವಾಡಿ ಶಿಕ್ಷಕಿ ಮಗುವಿನ ಬಳಿ ಏನಾಯಿತು ಎಂದು ಕೇಳಿದ್ದಾರೆ. ಆಗ ಮಗು ತನಗಾದ ನೋವಿನ ಬಗ್ಗೆ ಹೇಳಿದ್ದು, ತಕ್ಷಣವೇ ಅಂಗನವಾಡಿ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ, ಅಂಗನವಾಡಿ ಶಿಕ್ಷಕಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ರಾಕ್ಷಸಿ ಕೃತ್ಯ ಎಸಗಿದ ತಾಯಿಯನ್ನ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದ್ಯ ಮಗು ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಯಲ್ಲಿದೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಬಾಲಕಿಯ ತಂದೆ ನೇಪಾಳದ ಪ್ರಜೆಯಾಗಿದ್ದು, ಬಿಹಾರ ಮೂಲದ ಮಹಿಳೆಯನ್ನ ಎರಡನೇ ಮದುವೆಯಾಗಿದ್ದ ಎಂದು ತಿಳಿದು ಬಂದಿದೆ. ಇನ್ನು, ಇದಕ್ಕೂ ಮುಂಚೆ ಕೂಡ ಮಲತಾಯಿ ಇದೇ ರೀತಿ ಹಲ್ಲೆ ಮಾಡಿದ್ದಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಕೂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

WhatsApp Group Join Now

Spread the love

Leave a Reply