2ನೇ ಮದುವೆ ಆದರೆ 7 ವರ್ಷದ ಜೈಲು, ಕೋರ್ಟ್ ಆದೇಶ | Special Marriage Act

Spread the love

ಇನ್ಮುಂದೆ ಎರಡನೇ ಮದುವೆ ಆದರೆ ಏಳು ವರ್ಷದ ತನಕ ಜೈಲು ಶಿಕ್ಷೆ ಆಗಲಿದೆ. ಈ ಹೊಸ ಮಸೂದೆ ಅಡಿಯಲ್ಲಿ ಬಹುಪತಿತ್ವ ಸಾಬೀತಾದಲ್ಲಿ ಅಪರಾಧಿಗೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಸಾಮಾಜಿಕ ಸುಧಾರಣೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನ ಇಲ್ಲಿನ ಸರ್ಕಾರ ನೀಡಿದೆ.

ಬಹುಪತಿತ್ವ ಪದ್ಧತಿಯನ್ನ ಸಂಪೂರ್ಣವಾಗಿ ನಿಷೇಧ ಮಾಡುವ ಕಠಿಣ ಕಾನೂನನ್ನ ಜಾರಿಗೆ ತರಲು ಇದೀಗ ಸಿದ್ಧತೆ ನಡೆಸಿದೆ. ಈ ಹೊಸ ಮಸೂದೆ ಅಡಿಯಲ್ಲಿ ಬಹುಪತಿತ್ವ ಸಾಬೀತಾದಲ್ಲಿ ಅಪರಾಧಿಗೆ ಕನಿಷ್ಠ ಏಳು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಅಸ್ಸಾಂ ನಲ್ಲಿ ಈ ನಿಯಮವನ್ನ ಜಾರಿ ಮಾಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ಮಹಿಳಾ ಘನತೆ ಮತ್ತು ಸುರಕ್ಷತೆಗೆ ಆದ್ಯತೆ :- ಬಹುಪತಿತ್ವ ಆಧಾರದಿಂದಾಗಿ ಹೆಚ್ಚಾಗಿ ಮಹಿಳೆಯರು ಮಾನಸಿಕ ಮತ್ತು ಆರ್ಥಿಕ ತೊಂದರೆಯನ್ನ ಅನುಭವಿಸುತ್ತಾರೆ. ಮೊದಲ ಪತ್ನಿಗೆ ಕಾನೂನುಬದ್ದ ವಿಚ್ಛೇದನ ನೀಡದೆ ಮತ್ತೊಂದು ವಿವಾಹವಾಗುವುದು ಆಕೆಗೆ ಮಾಡುವ ಬಹು ದೊಡ್ಡ ಅನ್ಯಾಯ ಆಗಿದೆ. ಹಾಗಾಗಿ ಏಳು ವರ್ಷ ಜೈಲು ಶಿಕ್ಷೆಯನ್ನ ವಿಧಿಸಲಿದೆ.

ಧಾರ್ಮಿಕ ಸಮಾನತೆ :- ಈ ಕಾನೂನು ಯಾವುದೇ ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿಲ್ಲ. ಆದರೆ ಧರ್ಮದ ನೆಪದಲ್ಲಿ ಬಹುಪತಿತ್ವವನ್ನ ಸಮರ್ಥನೆ ಮಾಡಿದ್ರೂ ಕೂಡ ರಾಜ್ಯದಲ್ಲಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಬಾಲ್ಯ ವಿವಾಹದ ವಿರುದ್ಧ ಕಠಿಣ ಕ್ರಮಗಳನ್ನ ತೆಗೆದುಕೊಂಡ ನಂತರ ಅಸ್ಸಾಂ ಸರ್ಕಾರ ಈಗ ಬಹುಪತಿತ್ವದಂತಹ ಈ ನಿಯಮವನ್ನ ಜಾರಿಗೆ ಮಾಡಿದೆ. ಅದೇ ರೀತಿ ನವೆಂಬರ್ 25ರಂದು ವಿಧಾನಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಇದು ರಾಜ್ಯ ರಾಜಕೀಯದಲ್ಲಿ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಮಸೂದೆ ಕಾನೂನಾಗಿ ಜಾರಿಗೆ ಬಂದರೆ ಅಸ್ಸಾಂ ರಾಜ್ಯವು ದೇಶದ ಇತರ ರಾಜ್ಯಗಳಿಗೆ ಸವಾಲುದಾಯಕ ಮಾದರಿಯಾಗಲಿದೆ.

WhatsApp Group Join Now

Spread the love

Leave a Reply