ಇವನೆಂಥಾ ನೀಚ ಮಗ.! ಹಣಕ್ಕಾಗಿ ಕಲ್ಲಿನಿಂದ ಹೊಡೆದು ತಾಯಿಯನ್ನೇ ಕೊಂದ ಮಗ.! ಆರೋಪಿಯ ಬಂಧನ

Spread the love

ಮುದಗಲ್ : ಸಮೀಪದ ಜಕ್ಕೆರಮಡವು ತಾಂಡಾದಲ್ಲಿ ಹಣಕ್ಕಾಗಿ ತಾಯಿಯನ್ನು ಕೊಲೆ ಮಾಡಿದ್ದಾನೆ.

ಬೆಂಗಳೂರಿನಲ್ಲಿ ಇದ್ದ ಚಂದವ್ವನ ಮಗ ಕುಮಾರ(32) ಜ.26 ರಂದು ತಾಂಡಾಕ್ಕೆ ಆಗಮಿಸಿ, ಹಣ ನೀಡು ಎಂದು ತಾಯಿಗೆ ಪಿಡಿಸುತ್ತಿದ್ದ. ನನ್ನಲ್ಲಿ ಹಣ ಇಲ್ಲ ಎಂದು ಹೇಳಿದಾಗಲೂ ಹೊಲ ಮಾರಿ ಕೊಡುವಂತೆ ಒತ್ತಾಯಿಸಿದ್ದ.

ನಿನ್ನ ತಮ್ಮ ಸಂತೋಷನ ಮದುವೆ ಮಾಡಬೇಕಿಗಿದೆ. ಈಗಲೇ ಹೊಲ ಮಾರಿದರೆ ಮುಂದೆ ತೊಂದರೆಯಾಗುತ್ತದೆ ಎಂದು ಸಮಜಾಯಿಸಿದ್ದಳು. ನಾಳೆ ಎನ್ನುವಷ್ಟರಲ್ಲಿ ₹2 ಲಕ್ಷ ಬೇಕು ಎಂದು ಹೇಳಿ ಹೋಗಿ, ಮರುದಿನ ಬಂದು ಹಣ ನೀಡು ಎಂದು ಮತ್ತೆ ಹಟ ಹಿಡಿದಿದ್ದರಿಂದ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ಹೋಗಿ ತಾಯಿಯನ್ನು ಕಲ್ಲಿನಿಂದ ಹೊಡೆದಿದ್ದಾನೆ. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಚಂದವ್ವಳನ್ನು ಮುದಗಲ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಘಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲಿಸಿದರು. ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಮಸ್ಕಿ ಸಿಪಿಐ ರಾಮಣ್ಣ ಜಾಲಗೇರಿ, ಪಿಎಸ್‌ಐ ವೆಂಕಟೇಶ ಮಾಡಗೇರಿ ಹಾಜರಿದ್ದರು.

WhatsApp Group Join Now

Spread the love

Leave a Reply