ವೃದ್ಧೆಯ ಭೀಕರ ಕೊಲೆಗೆ ಮಗನೇ ಕಾರಣ ಎಂದ ಅಳಿಯ : 45 ದಿನಗಳ ಬಳಿಕ ಅಸಲಿ ಕಥೆ ತೆರೆದಿಟ್ಟ ಪೊಲೀಸರು

Spread the love

ಶಿವಮೊಗ್ಗ : ತಾಲೂಕಿನ ಕುಂಸಿ ಗ್ರಾಮದಲ್ಲಿ ಅಕ್ಟೋಬರ್ 2ರಂದು ಶಾಂತಿಧೂತ ಮಹಾತ್ಮ ಗಾಂಧಿ ಜನ್ಮದಿನಾಚರಣೆಯಂದೇ ಅಹಿಂಸೆ ಮೆರೆದಿದ್ದ ಕೊಲೆಗಾರರು 70 ವರ್ಷ ವಯಸ್ಸಿನ ವೃದ್ಧೆಯನ್ನು ಭೀಕರವಾಗಿ ಇರಿದು ಕೊಂದಿದ್ದರು. ಬಸಮ್ಮ ಎಂಬ ವೃದ್ಧೆ ಒಬ್ಬರೇ ಕುಂಸಿ ಗ್ರಾಮದಲ್ಲಿ ವಾಸವಿದ್ದರು.

ಹೀಗೆ ಮನೆಯಲ್ಲಿದ್ದ ಒಂಟಿ ವೃದ್ಧೆ ಕೊಲೆಯಾದ ಪ್ರಕರಣವನ್ನು ದಾಖಲಿಸಿಕೊಂಡ ಕೊಲೆಗಾರರು ಯಾರು ಎಂದು ಹುಡುಕಲಾರಂಭಿಸಿದರು. ಕೊಲೆಯಾದ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಸವಾಲು ಎದುರಾಗಿತ್ತು. ಕೊಲೆ ಮಾಡಿದವರು ರಕ್ತದ ಕಲೆಗಳನ್ನು ಒರೆಸಿ ನೆಲವನ್ನು ಸ್ವಚ್ಛಗೊಳಿಸಿ ಕುರುಹು ಬಿಡದೇ ತೆರಳಿದ್ದರು.

ಈ ಸಮಯದಲ್ಲಿ ವೃದ್ಧೆಯ ಅಳಿಯ ಹಾಗೂ ಸಂಬಂಧಿಯಾದ ಈಶ್ವರಪ್ಪ ಪೊಲೀಸರಿಗೆ ತನ್ನ ಅತ್ತೆ ಬಸಮ್ಮ ಕೊಲೆ ಕುರಿತು ಆಕೆಯ ಪುತ್ರ ರಮೇಶ್ ವಿರುದ್ಧ ಅನುಮಾನವಿದೆ ಎಂದು ತಿಳಿಸಿದ್ದರು. ಕೂಡಲೇ ಬಸಮ್ಮನ ಮಗ ರಮೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆತನ ಪಾತ್ರ ಏನೂ ಇಲ್ಲ ಎಂಬುದು ತಿಳಿದುಬಂತು.

ಇನ್ನು ಮನೆಯಲ್ಲಿ ರಕ್ತದ ಕಲೆಯನ್ನು ಸ್ವಚ್ಛ ಮಾಡಿದ್ದ ಕಾರಣ ಬೆಂಗಳೂರಿನಿಂದ ಫಾರೆನ್ಸಿಕ್ ತಂಡವನ್ನು ಕರೆಸಿಕೊಂಡ ಪೊಲೀಸರು ರಕ್ತದ ಕಲೆ ಹಾಗೂ ಕೆಲವೊಂದಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಹಾಗೆಯೇ ಪಕ್ಕದ ಮನೆಯ ಯುವಕರಾದ ಅಮಾನ್ ಸಿಂಗ್ ಹಾಗೂ ವಿಕಾಸ್ ಅದೇ ದಿನ ವೃದ್ಧೆಯ ಮನೆಗೆ ಹೋಗಿದ್ದ ಬಗ್ಗೆ ಸಹ ಮಾಹಿತಿ ದೊರೆತಿತ್ತು.

ಅವರಿಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅಜ್ಜಿಯ ಮೈ ಮೇಲೆ ಇದ್ದ ಚಿನ್ನಾಭರಣಕ್ಕಾಗಿ ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾರೆ. ಈ ಮೂಲಕ ಅಪರಾಧಿ ಸ್ಥಾನದಲ್ಲಿದ್ದ ಮಗ ರಮೇಶ್‌ ನಿಟ್ಟುಸಿರು ಬಿಟ್ಟಿದ್ದು, ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿದ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

WhatsApp Group Join Now

Spread the love

Leave a Reply