ಅಪ್ಪ ದಾನ ಮಾಡಿದ ಜಾಗದಲ್ಲಿ ಕಟ್ಟಿದ್ದ ಆಸ್ಪತ್ರೇಲಿ ಚಿಕಿತ್ಸೆ ಸಿಗದೆ ಮಗ ಸಾವು.!

Spread the love

ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ್ದ ವ್ಯಕ್ತಿಯ ಮಗನಿಗೆ ಸೂಕ್ತ ಸಮಯಕ್ಕೆ ಪ್ರಥಮ ಚಿಕಿತ್ಸೆ ಹಾಗೂ ಆಯಂಬುಲೆನ್ಸ್‌ ಸಿಗದೇ ಅದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆಯಲ್ಲಿ ನಡೆದಿದೆ. ಸಾದಿಕ್‌ ಸಾಬ್‌ ಅವರ ಪುತ್ರ ಸೈಯ್ಯದ್‌ ಅಕ್ರಂ (42) ಮೃತರು.

ಕೋಟ್ಯಂತರ ಮೌಲ್ಯದ ಜಾಗ ದಾನ ಮಾಡಿದ್ರು!

ಸಾದಿಕ್ ಅವರು ಸಮುದಾಯ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲು ಕೋಟ್ಯಂತರ ರು. ಮೌಲ್ಯದ ಜಾಗವನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಆದರೆ ಅವರ ಪುತ್ರನಿಗೇ ಆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಅಲ್ಲದೆ ಬೇರೆ ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ಸಮಯಕ್ಕೆ ಆಯಂಬುಲೆನ್ಸ್‌ ಬರಲಿಲ್ಲ. ಇದರಿಂದ ಅಕ್ರಂ ಕೊನೆಯುಸಿರೆಳೆದರು.

ಶನಿವಾರ ಆಗಿದ್ದೇನು?

ಶನಿವಾರ ಮಧ್ಯಾಹ್ನ 12ರ ಸುಮಾರಿಗೆ ಹೊಸಕೋಟೆ ಗ್ರಾಮದ ಸೈಯ್ಯದ್‌ ಅವರಿಗೆ ಉಸಿರಾಟದ ತೊಂದರೆಯಾಗಿದ್ದು ಮನೆಯವರು ಚಿಕಿತ್ಸೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡಕ್ಕೆ ಕರೆದುಕೊಂಡು ಹೋಗಿ ಎಂದು ವೈದ್ಯರು ತಿಳಿಸಿದ್ದಾರೆ.

1 ಗಂಟೆ ಕಾದರೂ ಸಿಗದ ಆ್ಯಂಬುಲೆನ್ಸ್!

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸೈಯ್ಯದ್ ಅಕ್ರಮ್ರನ್ನು ಸೋದರ ನಯಾಜ್ ಜ.16ರಂದು ಸಮುದಾಯದ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ಪರೀಕ್ಷೆ ನಡೆಸಿದ ವೈದ್ಯರು ರೋಗಿಯ ಬಿಪಿ ಕಡಿಮೆಯಾಗಿದೆ ಎಂದಿದ್ದು, ಹೆಚ್ಚಿನ ಚಿಕಿತ್ಸೆಗೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದರೆ ರೋಗಿಯ ಸ್ಥಳಾಂತರಕ್ಕೆ ಸುಮಾರು 1 ಗಂಟೆ ಕಾದರೂ ಆ್ಯಂಬುಲೆನ್ಸ್ ಸಿಕ್ಕಿಲ್ಲ. ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇದ್ರೂ ಚಾಲಕನಿಲ್ಲ ಎನ್ನಲಾಗಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ತಮ್ಮ ಸಹೋದರ ಮೃತಪಟ್ಟಿದ್ದಾನೆ ಎಂಬುದು ನಯಾಜ್ ಆರೋಪ.

WhatsApp Group Join Now

Spread the love

Leave a Reply