ಚಿತ್ರದುರ್ಗ: ಸಕಾಲಕ್ಕೆ ಮದುವೆ ಮಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಆಕ್ರೋಶಗೊಂಡ ಮಗನೊಬ್ಬ ತನ್ನ ತಂದೆಯನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿಘಟ್ಟ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸಣ್ಣನಿಂಗಪ್ಪ (65) ಎಂದು ಗುರುತಿಸಲಾಗಿದೆ. ಇವರ ಎರಡನೇ ಮಗ ನಿಂಗರಾಜ್ (36) ಕೊಲೆ ಮಾಡಿದ ಆರೋಪಿ. ತನ್ನೊಂದಿಗೆ ಬೆಳೆದ ಸ್ನೇಹಿತರೆಲ್ಲರಿಗೂ ಮದುವೆಯಾಗಿದೆ, ಆದರೆ ತನಗೆ ಇನ್ನೂ ಮದುವೆ ಮಾಡಿಲ್ಲ ಎಂದು ನಿಂಗರಾಜ್ ಪ್ರತಿದಿನ ತಂದೆಯೊಂದಿಗೆ ಜಗಳವಾಡುತ್ತಿದ್ದನು.
ನಡೆದಿದ್ದೇನು?
ಬುಧವಾರ ರಾತ್ರಿಯೂ ಇದೇ ವಿಚಾರಕ್ಕೆ ಮನೆಯಲ್ಲಿ ದೊಡ್ಡ ಗಲಾಟೆಯಾಗಿತ್ತು. ಹಿರಿಯ ಮಗ ಮಾರುತಿ ಬಂದು ಬುದ್ಧಿವಾದ ಹೇಳಿದರೂ ಕೇಳದ ನಿಂಗರಾಜ್, ರಾತ್ರಿ 11 ಗಂಟೆ ಸುಮಾರಿಗೆ ತಂದೆ ಮಲಗಿದ್ದಾಗ ಟ್ರ್ಯಾಕ್ಟರ್ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸಣ್ಣನಿಂಗಪ್ಪ ಅವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟಿದ್ದಾರೆ.
ಹಿರಿಯ ಮಗ ಮಾರುತಿ ನೀಡಿದ ದೂರಿನ ಮೇರೆಗೆ ಹೊಸದುರ್ಗ ಪೊಲೀಸರು ಕಾರ್ಯಾಚರಣೆ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿ ನಿಂಗರಾಜ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮದುವೆಯ ಹಠಕ್ಕೆ ಬಿದ್ದು ಹೆತ್ತ ತಂದೆಯ ಪ್ರಾಣವನ್ನೇ ತೆಗೆದ ಮಗನ ಕೃತ್ಯಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮದುವೆ ಮಾಡಲಿಲ್ಲವೆಂದು ಹೆತ್ತ ತಂದೆಯನ್ನೇ ಕೊಂದ ಪಾಪಿ ಪುತ್ರ! ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ!
WhatsApp Group
Join Now