ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಕುರ್ಚಿ ಬದಲಾವಣೆಯ ವಿಚಾರ ಸದ್ದು ಮಾಡುತ್ತಲೆ ಇದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ತೀರ್ಮಾನ ಎಂದಿದ್ದ ಸಿದ್ದರಾಮಯ್ಯ ಅವರು ಇದೀಗ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ. ಸದನದಲ್ಲಿ ಮತ್ತೆ ಸಿಎಂ ವಿಚಾರ ಸದ್ದು ಮಾಡಿದೆ. ಅದರಲ್ಲೂ ವಿರೋಧ ಪಕ್ಷದ ನಾಯಕರು ಈ ವಿಚಾರಕ್ಕೆ ಸಂಬಂಧಿಸಿದಂತೆ ಗದ್ದಲ ಎಬ್ಬಿಸಿದ್ದಾರೆ.
ಆಗ ಸಿದ್ದರಾಮಯ್ಯ ಅವರಿ ಉತ್ತರಿಸಿದ್ದಾರೆ. ಐದು ವರ್ಷವೂ ನಾನೇ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವ ತನಕ ನಾನೇ ಮುಖ್ಯಮಂತ್ರಿ. ಈಗಲೂ ಮುಖ್ಯಮಂತ್ರಿ, ಮುಂದೆಯೂ ಮುಖ್ಯಮಂತ್ರಿ. ಐದು ವರ್ಷವೂ ನಾನೇ ಮುಖ್ಯಮಂತ್ರಿ. ಜನ ಆಶೀರ್ವಾದ ಮಾಡಿದ್ದಾರೆ ನಾವೂ ಆಗಿದ್ದೀವಿ. ನೀವು ಖುಷಿಯಾಗಿಲ್ಲ ಅಷ್ಟೇ. ಹೊಟ್ಟೆ ಕಿಚ್ಚು ನಿಮಗೆ. ಐದಜ ವರ್ಷ ತುಂಬಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಮತ್ತೆ ಗೆದ್ದು ಬರುತ್ತೇವೆ. ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಬಿಜೆಪಿಯಲ್ಲೂ ಅಧ್ಯಕ್ಷ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಿದೆ. ವಿಜಯೇಂದ್ರ ಅವರನ್ನು ಆ ಸ್ಥಾನದಲ್ಲಿ ಕೂರಿಸಬಾರದು ಅಂತ ಒಂದು ಬಣ ಹೈಕಮಾಂಡ್ ತನಕವೂ ಹೋಗಿದೆ. ಈ ವಿಚಾರವನ್ನು ಕೂಡ ಸಿಎಂ ಸಿದ್ದರಾಮಯ್ಯ ಅವರು ಸದನದಲ್ಲಿ ಮಾತನಾಡಿದ್ದಾರೆ. ಯಾಕೆ ನಿಮ್ಮಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿಲ್ವಾ ಎಂಬ ಮಾತನ್ನ ಹೇಳಿದ್ದಾರೆ. ಆದರೆ ಇದರ ನಡುವೆ ಬಿಜೆಪಿ ನಾಯಕರು ಸಹ ಜೋರು ಧ್ವನಿಯಲ್ಲಿ ಎಲ್ಲರೂ ಒಟ್ಟೊಟ್ಟಿಗೆ ಮಾತನಾಡಿದ್ದು, ಸಿಎಂ ಸ್ಥಾನದ ಜೊತೆಗೆ ಬಿಜೆಪಿ ಅಧ್ಯಕ್ಷ ಸ್ಥಾನವೂ ಸದನದಲ್ಲಿ ಸದ್ದು ಗದ್ದಲ ಉಂಟು ಮಾಡಿದೆ. ಆದ್ರೆ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನ ಅನ್ನೋದು ಬೂದಿ ಮುಚ್ಚಿದ ಕೆಂಡದಂತೆ ಆಗಿದೆ.
5 ವರ್ಷ ನಾನೇ ಸಿಎಂ : ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ
WhatsApp Group
Join Now