ರೀಲ್ಸ್ ರಾಣಿ ಸುಚಿತ್ರಾ ಜೊತೆ ಸಂಕರ್ಪಕದಲ್ಲಿದ್ದ ಯುವಕರಿಗೂ ಶಾಕ್!

Spread the love

ರೀಲ್ಸ್ ರಾಣಿ ಸುಚಿತ್ರಾ ಮತ್ತು ಜ್ಯೋತಿಷಿ ಪ್ರೇಮ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರ ತನಿಖೆಯ ವೇಳೆ ಸುಚಿತ್ರಾಳ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ, ಕಲಬುರಗಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲ ಯುವಕರೊಂದಿಗೆ ಅವಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ.

ಈ ಬೆಳವಣಿಗೆಯ ಬೆನ್ನಲ್ಲೇ ಆತಂಕಕ್ಕೊಳಗಾದ ಯುವಕರು ತಮ್ಮ ಇನ್ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿದ್ದು, ಇನ್ನೂ ಕೆಲವರು ತಮ್ಮ ಮೊಬೈಲ್ಗಳನ್ನೇ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಸುಚಿತ್ರಾ ಪತಿ ಹೇಳಿಕೆಗೆ ಹುಡುಗರು ಕಂಗಾಲು

ಇತ್ತ ಶಿವಮೊಗ್ಗದಲ್ಲಿ ಸುಚಿತ್ರಾಳ ಪತಿ ಹಾಗೂ ಮಗಳು ಮಾಧ್ಯಮಗಳ ಮುಂದೆ ನೀಡಿದ ಹೇಳಿಕೆಗಳು ಯುವಕರನ್ನು ಇನ್ನಷ್ಟು ದಂಗು ಮಾಡಿವೆ. ಸುಚಿತ್ರಾಳ ಮೊಬೈಲ್ ಚೆಕ್ ಮಾಡಿದ್ರೆ ಇವಳ ಬಗ್ಗೆ ಅಸಹ್ಯ ಆಗುತ್ತೆ. ಬೇರೆ ಬೇರೆ ಹುಡುಗರ ಜೊತೆ ಇವಳು ನಿತ್ಯ ಸಂಪರ್ಕದಲ್ಲಿ ಇದ್ದಳು ಎಂದು ಆಕೆಯ ಪತಿ ಹೇಳಿಕೆ ನೋಡಿದ ಬೆನ್ನಲ್ಲೇ ಕೆಲವರು ತಮ್ಮ ಇನ್‌ಸ್ಟಾಗ್ರಾಂ ಖಾತೆಗಳನ್ನು ಡಿಲಿಟ್ ಮಾಡಿಕೊಂಡರೆ, ಇನ್ನೂ ಕೆಲವರು ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಹೆಸರು ತನಿಖೆಯಲ್ಲಿ ಹೊರಬೀಳಬಹುದೆಂಬ ಆತಂಕದಲ್ಲಿ ಯುವಕರು ಸಿಲುಕಿದ್ದಾರೆ.

ಸುಚಿತ್ರಾ ಹಲವು ಯುವಕರೊಂದಿಗೆ ನಿತ್ಯ ಸಂಪರ್ಕದಲ್ಲಿದ್ದಳು, ತನ್ನ ಮೇಲೆ ಹಲ್ಲೆ ನಡೆಸಲು ಯುವಕರ ಸಹಾಯ ಕೇಳಿದ್ದಳು ಎಂದು ಆಕೆಯ ಪತಿ ಆರೋಪ ಹೊರೆಸಿದ್ದಾನೆ . ಈ ಕುರಿತು ಪೊಲೀಸರು ಒಂದೊಂದಾಗಿ ತನಿಖೆ ಮುಂದುವರಿಸುತ್ತಿದ್ದು, ಸುಚಿತ್ರಾ ಪ್ರಕರಣ ಹಲವಾರು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ.

ಸಿದ್ದಾಪುರ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳ ವರ್ಗ

ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ವಸಂತ್ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರ ವೈಫಲ್ಯವಿದೆ ಎಂಬ ಸ್ಥಳೀಯರ ಆರೋಪಗಳ ಹಿನ್ನೆಲೆಯಲ್ಲಿ, ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ. ಎಎಸ್‌ಐ ಗಣಪತಿ ಭಟ್ ಹಾಗೂ ಹೆಡ್ ಕಾನ್ಸ್‌ಟೇಬಲ್ ಚಂದ್ರಶೇಖರ್ ಅವರನ್ನು ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಸಿದ್ದಾಪುರ ಪೊಲೀಸ್ ಠಾಣೆಯ ಕಾರ್ಯವೈಖರಿಯ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ. ಶಿರಸಿ ಉಪವಿಭಾಗದ ಡಿವೈಎಸ್‌ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಯಾವುದೇ ಲೋಪ ಕಂಡುಬಂದರೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ದೀಪನ್ ತಿಳಿಸಿದ್ದಾರೆ.

WhatsApp Group Join Now

Spread the love

Leave a Reply