ಶಾಮನೂರು ಶಿವಶಂಕರಪ್ಪ : ಓದಿದ್ದು ಹತ್ತನೇ ಕ್ಲಾಸು , ಕಟ್ಟಿದ್ದು ಸಾವಿರಾರು ಕೋಟಿ ರೂ. ಸಾಮ್ರಾಜ್ಯ!

Spread the love

ಹಿರಿಯ ರಾಜಕಾರಣಿ, ಉದ್ಯಮಿ, ಮುತ್ಸದ್ಧಿ ಶಾಮನೂರು ಶಿವಶಂಕರಪ್ಪ ಭಾನುವಾರ ವಯೋಸಹಜ ಖಾಯಿಲೆಗಳಿಂದ ಮೃತಪಟ್ಟಿದ್ದಾರೆ. ಅವರ ಜೀವನದ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.

ಶಾಮನೂರು ಶಿವಶಂಕರಪ್ಪ ಜೂನ್ 16 1931ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಜನಿಸಿದರು. ದಾವಣಗೆರೆಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು.

ಶಾಮನೂರು ದಾಂಪತ್ಯ‌ ಜೀವನ

ಶಾಮನೂರು ಶಿವಶಂಕರಪ್ಪನವರ ಪತ್ನಿ ಎಸ್ಎಸ್ ಪಾರ್ವತಮ್ಮ. ಈ ದಂಪತಿಗೆ ಏಳು ಜನ ಮಕ್ಕಳು. ಎಸ್ಎಸ್ ಮಲ್ಲಿಕಾರ್ಜುನ್ ಈಗ ತೋಟಗಾರಿಕೆ ಸಚಿವರಾಗಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ ಅಲ್ಲದೇ ಎಸ್ಎಸ್ ಬಕ್ಕೇಶ್, ಎಸ್ಎಸ್ ಗಣೇಶ್ ಎಂಬ ಗಂಡು ಮಕ್ಕಳ‌ ಜೊತೆ ಮೂವರು ಹೆಣ್ಣುಮಕ್ಕಳು.

ಶಾಮನೂರರಿಗೆ ಒಲಿದ ಪ್ರಶಸ್ತಿ ಬಹುಮತಿಗಳು

1985ರಲ್ಲಿ ಶಾಮನೂರು ಶಿವಶಂಕರಪ್ಪನವರಿಗೆ ರೋಟರಿ ಇಂಟರ್ನ್ಯಾಶನಲ್ನಿಂದ ಪೌಲ್ ಹ್ಯಾರಿಸ್ ಫೆಲೋ ಸಿಕ್ಕಿತ್ತು, 1987ರಲ್ಲಿ ಶಿರೋಮಣಿ ವಿಕಾಸ್ ಪ್ರಶಸ್ತಿ, 1990ರಲ್ಲಿ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, 1990ರಲ್ಲಿ ದಾವಣಗೆರೆ ನಾಗರಿಕರಿಂದ ವಿದ್ಯಾಶ್ರೀ ಪ್ರಶಸ್ತಿ, 1993ರಲ್ಲಿ NRI ಸಂಸ್ಥೆಯಿಂದ ಭಾರತ ಗೌರವ ಪ್ರಶಸ್ತಿ, 1994ರಲ್ಲಿ ಬಾಳೆಹೊನ್ನೂರು ರಂಭಾಪುರಿ ಪೀಠದಿಂದ ರೇಣುಕಾಚಾರ್ಯ ಪ್ರಶಸ್ತಿ ಒಲಿದಿದೆ. 1995ರಲ್ಲಿ ನಿತ್ಯ ಸೇವಾ ಯಜ್ಞಧಾರಿ ‘ಬೆಳ್ಳಿ ಖಡ್ಗ ಪ್ರಶಸ್ತಿ, 1995ರಲ್ಲಿ ಧರ್ಮ ಚೂಡಾಮಣಿ ಗೌರವ, 2005ರಲ್ಲಿ ಅಭಿಮಾನಿಗಳಿಂದ ‘ಅಮೃತ ಪುರುಷ’ ಬಿರುದು, 2008ರಲ್ಲಿ ಕುವೆಂಪು ವಿವಿಯಿಂದ ಗೌರವ ಡಾಕ್ಟರೇಟ್ ಗೌರವ ಒಲಿದಿದೆ.

ಶಾಮನೂರು ರಾಜಕೀಯ

WhatsApp Group Join Now

ಶಾಮನೂರು ಶಿವಶಂಕರಪ್ಪನವರು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದರು. ಶಿವಶಂಕರಪ್ಪನವರು 6 ಬಾರಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ, ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದರು. 1969ರಲ್ಲಿ ದಾವಣಗೆರೆ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದರು. 1971ರಲ್ಲಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 45 ವರ್ಷ ಸುದೀರ್ಘ ರಾಜಕೀಯದಲ್ಲಿದ್ದ ಶಾಮನೂರು ಶಿವಶಂಕರಪ್ಪನವರಿಗೆ ಕೆಲವು ತಿಂಗಳ ಹಿಂದಷ್ಟೇ ತಾನೇ ಸಿಎಂ ಆಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು.

ಓದಿದ್ದು ಬರೀ ಹತ್ತನೇ ಕ್ಲಾಸು!

ಶಾಮನೂರು ಶಿವಶಂಕರಪ್ಪ‌ ಆರಂಭಿಕ‌ ಜೀವನ ಸರಳವಾಗಿತ್ತು. 10ನೇ ತರಗತಿಯವರೆಗೆ ಮಾತ್ರ ಓದಿದ್ದ ಇವರು, ಮುಂದೆ ಉದ್ಯಮ ಕ್ಷೇತ್ರಕ್ಕೆ ಇಳಿದು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿದರು.

ಇಂದು ದಾವಣಗೆರೆಯಲ್ಲಿ ಶಿವಶಂಕರಪ್ಪ ಅವರ ಅಂತ್ಯಕ್ರಿಯೆ

ದೀರ್ಘ ಕಾಲದ ಅನಾರೋಗ್ಯದಿಂದ ಬಾಳಲುತ್ತಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ(94)ಇನ್ನೇ ಸಂಜೆ ಮೃತಪಟ್ಟಿದ್ದು, ಅದರಂತೆ ಇಂದು ಅವರ ಅಂತಿಮ ಕ್ರಿಯೆ ನಡೆಯಲಿದೆ.

ದೀರ್ಘ ಕಾಲದ ಅನಾರೋಗ್ಯದ ಹಿನ್ನಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಿವಶಂಕರಪ್ಪ ಮೃತಪಟ್ಟಿದ್ದು, ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಇಂದು ಲಿಂಗಾಯತ ಸಂಪ್ರದಾಯದಂತೆ ದಾವಣಗೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ತೀರ್ಮಾನಿಸಲಾಗಿದೆ.

ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ವೀರಶೈವ ಮಹಾಸಭಾ ಕಚೇರಿಗೆ ತರಲಾಗುತ್ತಿದೆ. ಇನ್ನೂ ಬೆಳಗ್ಗೆ 10 ಗಂಟೆಯಿಂದ 10.30ರವರೆಗೆ ಅಲ್ಲಿಯೇ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ, ಬಳಿಕ ಸಂಜೆ 4 ಗಂಟೆಗೆ ಲಿಂಗಾಯತ ಸಂಪ್ರದಾಯದಂತೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ ನಡೆಯಲಿದೆ̤


Spread the love

Leave a Reply