ಇಪಿಎಫ್ ಪಿಂಚಣಿದಾರರಿಗೆ ಇದೀಗ ಭಾರೀ ಶುಭ ಸುದ್ದಿ ಬಂದಿದೆ. ಹೌದು, ಪಿಂಚಣಿ ಶೀಘ್ರವೇ ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ದೇಶಾದ್ಯಂತ ಲಕ್ಷಾಂತರ ಇಪಿಎಸ್ ಪಿಂಚಣಿದಾರರು ದಶಕದಿಂದ ಎದುರು ನೋಡ್ತಾ ಇದ್ದಂತಹ ಕನಿಷ್ಠ ಪಿಂಚಣಿ ಹೆಚ್ಚಳದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಗುವ ಸಾಧ್ಯತೆ ಕೂಡ ಇದೆ ಅಂತ ಹೇಳಲಾಗ್ತಾ ಇದೆ.
ಪ್ರಸ್ತುತ 1000 ಇರುವ ಮಾಸಿಕ ಕನಿಷ್ಠ ಪಿಂಚಣಿ ಮೊತ್ತವನ್ನ 7000 ರವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಬಗ್ಗೆ ಕೇಂದ್ರ ಸರ್ಕಾರ ಮತ್ತು ಗಂಭೀರ ಚಿಂತನೆಯನ್ನ ನಡೆಸಿದೆ. ಪಿಂಚಣಿದಾರರ ಸಂಘಟನೆಗಳು ಪ್ರಸ್ತುತ 1000 ಕನಿಷ್ಠ ಪಿಂಚಣಿಯನ್ನ ತಕ್ಷಣವೇ 7500 ಕ್ಕೆ ಹೆಚ್ಚಳ ಮಾಡುವಂತೆ ಅದಕ್ಕೆ ತುಟ್ಟಿಬತ್ತಿಯನ್ನ ಸೇರಿಸುವಂತೆ ಒತ್ತಾಯಿಸುತ್ತಿದೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕೇಂದ್ರೀಯ ಟ್ರಸ್ಟ್ ಮಂಡಳಿ ಸಭೆಯಲ್ಲಿ ಈ ಪಿಂಚಣಿ ಹೆಚ್ಚಳದ ಪ್ರಸ್ತಾವನೆಯು ಪ್ರಮುಖ ವಿಷಯವಾಗಿ ಚರ್ಚೆಗೆ ಬಂದಿದೆ. ಸರ್ಕಾರವು ಪಿಂಚಣಿದಾರರ ಬೇಡಿಕೆಯಾದ 7500ರ ಗರಿಷ್ಠ ಮೊತ್ತವನ್ನು ಸಾಧಿಸುವ ಬಗ್ಗೆಯೂ ಕೂಡ ಪರಿಶೀಲನೆಯನ್ನ ಮಾಡ್ತಾ ಇದೆ. ಕಳೆದ ಒಂದು ದಶಕದಿಂದ ಕನಿಷ್ಠ ಪಿಂಚಣಿ ಮೊತ್ತದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹಣದುಬ್ಬರ ಮತ್ತು ಜೀವನ ನಿರ್ವಹಣೆಯ ವೆಚ್ಚವನ್ನ ಗಮನದಲ್ಲಿ ಇಟ್ಕೊಂಡು ಪಿಂಚಣಿ ಹೆಚ್ಚಳವು ತುರ್ತು ಅಗತ್ಯ ಕೂಡ ಇದೆ.
ಹಾಗಾಗಿ ಸಿಬಿಟಿ ಸಭೆಯ ನಂತರ ಪಿಂಚಣಿ ಹೆಚ್ಚಳದ ಪ್ರಸ್ತಾವನೆಯನ್ನ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮೂಲಕ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುತ್ತದೆ. ಈ ಕುರಿತು ಅಂತಿಮ ಘೋಷಣೆ ಶೀಘ್ರದಲ್ಲಿ ಹೊರಬೀಳುವ ನಿರೀಕ್ಷೆ ಕೂಡ ಇದೆ. 7500 ಬೇಡಿಕೆಯು ಪೂರ್ಣ ಪ್ರಮಾಣದಲ್ಲಿ ಈಡೇರಿದರೆ ಇದು ಖಾಸಗಿ ವಲಯದ ನೌಕರರ ನಿವೃತ್ತಿ ಜೀವನಕ್ಕೆ ಒಂದು ದೊಡ್ಡ ಆರ್ಥಿಕ ಬದ್ಧತೆಯನ್ನು ಕೂಡ ಒದಗಿಸಲಿದೆ.

ಪಿಂಚಣಿ ಮೊತ್ತದಲ್ಲಿ 7500 ರೂ ಏರಿಕೆ, ದೀಪಾವಳಿ ಗುಡ್ ನ್ಯೂಸ್ | Senior Citizens Pension Hike
WhatsApp Group
Join Now