ಬ್ಯಾಂಕ್ FD ಇಟ್ಟ ಹಿರಿಯ ನಾಗರೀಕರಿಗೆ RBI ಹೊಸ ರೂಲ್ಸ್ | Senior Citizen FD New Rules

Spread the love

ಹಿರಿಯ ನಾಗರಿಕರಿಗೆ ಆರ್ ಬಿಐ ಎಚ್ಚರಿಕೆಯೊಂದನ್ನ ನೀಡಿದೆ. ಈ ಮೂರು ತಪ್ಪುಗಳನ್ನ ನೀವು ಮಾಡಿದ್ರೆ ನಿಮ್ಮ ಎಫ್ ಡಿ ಖಾತೆಗೆ ಇನ್ನು ಮುಂದೆ ನೋಟಿಸ್ ಬರಬಹುದು. ಬ್ಯಾಂಕಿಂಗ್ ನಿಯಂತ್ರಣ ಮಂಡಳಿ ಮತ್ತು ಬ್ಯಾಂಕುಗಳು ಫಿಕ್ಸ್ಡ್ ಡೆಪಾಸಿಟ್ ಖಾತೆಗಳ ಮೇಲೆ ವಿಶೇಷವಾಗಿ ಹಿರಿಯ ನಾಗರಿಕರ ಖಾತೆಗಳ ಮೇಲೆ ನಿಗಾವನ್ನ ಬಿಗಿಗೊಳಿಸಿದೆ.

ಬ್ಯಾಂಕಿಂಗ್ ನಿಯಮಗಳನ್ನ ಸರಿಯಾಗಿ ಪಾಲಿಕೆ ಮಾಡದಿದ್ರೆ ಈ ಮೂರು ಸಾಮಾನ್ಯ ತಪ್ಪುಗಳನ್ನ ನೀವು ಮಾಡಿದ್ರೆ ನಿಮ್ಮ ಎಫ್ ಡಿ ಖಾತೆಗೆ ಬ್ಯಾಂಕ್ನಿಂದ ಎಚ್ಚರಿಕೆ ನೋಟಿಸ್ ಬರಬಹುದು. ಈ ನಿಯಮಗಳು ಹಿರಿಯ ನಾಗರಿಕರಿಗೆ ನೀಡಲಾಗುವ ಹೆಚ್ಚಿನ ಬಡ್ಡಿ ದರಗಳ ದುರುಪಯೋಗವನ್ನ ತಡೆಯಲು ಮತ್ತೆ ನಿಜವಾದ ಫಲಾನುಭಾವಿಗಳನ್ನ ಪತ್ತೆ ಹಚ್ಚಲು ನೆರವಾಗುತ್ತದೆ. 

ತಪ್ಪು ಪಾನ್ ಅಥವಾ ಆಧಾರ್ ಲಿಂಕ್ :- ನಿಮ್ಮ ಪ್ಯಾನ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯನ್ನ ಎಫ್ಡಿ ಖಾತೆಯೊಂದಿಗೆ ಸರಿಯಾಗಿ ಲಿಂಕ್ ಮಾಡದಿರುವುದು ಅಥವಾ ಲಿಂಕ್ ನಲ್ಲಿ ವ್ಯತ್ಯಾಸವಿರುವುದು. ಪ್ಯಾನ್ ಕಾರ್ಡ್, ಆಧಾರ್ ಸರಿಯಾಗಿ ಲಿಂಕ್ ಆಗದಿದ್ದರೆ ನಿಮ್ಮ ಎಫ್ಡಿ ಬಡ್ಡಿ ಆದಾಯವನ್ನ ಬ್ಯಾಂಕಿಗೆ ಪರಿಶೀಲನೆ ಮಾಡಲು ಸಾಧ್ಯ ಆಗುವುದಿಲ್ಲ. ಇದರಿಂದ ನಿಮ್ಮ ಬಡ್ಡಿಯನ್ನ ಬ್ಯಾಂಕ್ ಪರಿಶೀಲಿಸದ ಆದಾಯ ಅಂತ ಹೇಳಿ ಪರಿಗಣಿಸಿ ನೋಟೀಸ್ ನೀಡಬಹುದು. 

ತೆರಿಗೆ ಘೋಷಣೆ ಸಲ್ಲಿಕೆ ಮಾಡದಿರುವುದು : ಆದಾಯ ತೆರಿಗೆ ಮಿತಿಯೊಳಗೆ ಇರುವ ಹಿರಿಯ ನಾಗರಿಕರು ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ಫಾರ್ಮ್ 15H ಬ್ಯಾಂಕಿಗೆ ಸಲ್ಲಿಸುವುದು ಕಡ್ಡಾಯ. ನೀವು ಫಾರ್ಮ್ 15H ಸಲ್ಲಿಕೆ ಮಾಡದಿದ್ದರೆ ನಿಮ್ಮ ಎಫ್ ಡಿಯ ಬಡ್ಡಿಯ ವಾರ್ಷಿಕ 50ಸಾವಿರ ಹಿರಿಯ ನಾಗರಿಕರಿಗೆ ಮಿತಿಮೀರಿದರೆ ಬ್ಯಾಂಕ್ ಕಡ್ಡಾಯವಾಗಿ ಟಿಡಿಎಸ್ ಕಡಿತಗೊಳಿಸುತ್ತದೆ. ಈ ದಾಖಲೆ ಇಲ್ಲದಿರುವುದು ಬ್ಯಾಂಕ್ ವ್ಯವಸ್ಥೆಯಲ್ಲಿ ತೆರಿಗೆ ಎಚ್ಚರಿಕೆ ನೀಡುತ್ತದೆ.

ಕೆವೈಸಿ ನವೀಕರಿಸದಿರುವುದು :- ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಥವಾ ಒಂದೇ ಬ್ಯಾಂಕಿನ ಹಲವು ಶಾಖೆಗಳಲ್ಲಿ  ಎಫ್ ಡಿಗಳನ್ನು ಹೊಂದಿದ್ದು, ಎಲ್ಲಾ ಖಾತೆಗಳಲ್ಲೂ ನಿಮ್ಮ ಇತ್ತೀಚಿನ ಕೆವೈಸಿ ದಾಖಲೆಗಳನ್ನು ನವೀಕರಣ ಮಾಡದಿರುವುದು. ನಿಮ್ಮ ಮಾಹಿತಿ ಎಲ್ಲಾ ಖಾತೆಗಳಲ್ಲಿ ಒಂದೇ ರೀತಿ ಇಲ್ಲದಿದ್ದರೆ ಬ್ಯಾಂಕಿನ ವ್ಯವಸ್ಥೆಯು ಅದನ್ನ ನಿಷ್ಕ್ರಿಯ ಅಂತ ಹೇಳಿ ಘೋಷಣೆ ಮಾಡುತ್ತದೆ. ಹಾಗಾಗಿ ಕೂಡಲೇ ಕೆವೈಸಿ ನವೀಕರಿಸುವಂತೆ ನೋಟೀಸ್ ನೀಡಬಹುದು.

ಹಾಗಾಗಿ ಹಿರಿಯ ನಾಗರಿಕರು ತಮ್ಮದೇ ಸಂಬಂಧಿಸಿದ ಎಲ್ಲಾ ಬ್ಯಾಂಕ್ ಖಾತೆಗಳಲ್ಲಿ ತಮ್ಮ ಪ್ಯಾನ್ ಕಾರ್ಡ್, ಆಧಾರ್ ಲಿಂಕ್ ಸರಿಯಾಗಿದೆಯಾ ಅಥವಾ ಪ್ರತಿವರ್ಷ ಫಾರ್ಮ್ 15H ತಪ್ಪದೇ ಸಲ್ಲಿಸಿದ್ದೀರಾ ಎಂಬುದನ್ನ ಖಚಿತ ಪಡಿಸಿಕೊಳ್ಳಿ.

WhatsApp Group Join Now

Spread the love

Leave a Reply