ಸೆಕೆಂಡ್ ಹ್ಯಾಂಡ್ ಕಾರ್ ಇದ್ದವರಿಗೆ 5 ಹೊಸ ನಿಯಮ ಘೋಷಣೆ – ಏನಿದು ಹೊಸ ನಿಯಮ.? Second hand Car

Spread the love

ನೀವು ಸೆಕೆಂಡ್ ಹ್ಯಾಂಡ್ ಕಾರನ್ನ ಖರೀದಿ ಮಾಡ್ತಾ ಇದ್ರೆ ಜಾಗ್ರತೆ ವಹಿಸಿ, ಇದೀಗ ದೆಹಲಿಯ ಘಟನೆ ಬಳಿಕ ಈಗ ಐದು ಹೊಸ ನಿಯಮಗಳು ಜಾರಿ ಬಂದಿವೆ. ಒಂದು ವೇಳೆ ಈ ದಾಖಲೆಗಳು ತಪ್ಪಿದ್ರೆ ಕಾರು ನಿಮ್ಮ ಹೆಸರಿಗೂ ಕೂಡ ಆಗುವುದಿಲ್ಲ. ಹಾಗಿದ್ರೆ ಏನು ಆ ಹೊಸ ರೂಲ್ಸ್.? ನೋಡೋಣ

ರಾಜಧಾನಿ ದೆಹಲಿಯಲ್ಲಿ ಇತ್ತೀಚಿಗೆ ಸಂಭವಿಸಿದಂತಹ ಕಾರು ಸ್ಪೋಟದಂತಹ ಗಂಭೀರ ಘಟನೆಗಳ ಹಿನ್ನಲೆಯಲ್ಲಿ ಹಳೆಯ ವಾಹನಗಳ ದುರ್ಬಳಕೆಯನ್ನ ತಡೆಯಲು ಸರ್ಕಾರ ಮತ್ತು ಸಾರಿಗೆ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ ಇದೀಗ ಐದು ಹೊಸ ಪರಿಶೀಲನಾ ನಿಯಮಗಳನ್ನ ಜಾರಿಗೊಳಿಸಿದೆ.

ಆಧಾರ್ ಮತ್ತೆ ಲೈಸೆನ್ಸ್ ಕಡ್ಡಾಯ :- ಹಳೆಯ ಕಾರುಗಳನ್ನ ಖರೀದಿ ಮಾಡುವವರು ಮತ್ತು ಮಾರಾಟ ಮಾಡುವವರು, ಇಬ್ಬರು ಕೂಡ ತಮ್ಮ ಅಧೀಕೃತ ಆಧಾರ್ ಕಾರ್ಡ್ ಮತ್ತು ಚಾಲನಾ ಪರವಾನಿಗೆ ದಾಖಲೆಗಳನ್ನ ಕಡ್ಡಾಯವಾಗಿ ಸಲ್ಲಿಸಬೇಕು. ಅವುಗಳನ್ನ ನೀವು ಪರಿಶೀಲನೆಗೆ ಕೂಡ ಒಳಪಡಿಸಬೇಕು.

ಪೊಲೀಸ್ ಡೇಟಾ ಎಂಟ್ರಿ ಕಡ್ಡಾಯ :- ಅಂದರೆ ಸೆಕೆಂಡ್ ಹ್ಯಾಂಡ್ ಕಾರು ಡೀಲರ್ಗಳು ತಮ್ಮ ಮೂಲಕ ನಡೆಯುವ ಪ್ರತಿ ವಾಹನದ ವ್ಯವಹಾರದ ಸಂಪೂರ್ಣ ವಿವರಗಳನ್ನ ಕಡ್ಡಾಯವಾಗಿ ಸ್ಥಳೀಯ ಪೊಲೀಸ್ ಪೋರ್ಟಲ್ಗೆ ಅಥವಾ ಗೊತ್ತುಪಡಿಸಿದ ಸುರಕ್ಷಿತ ಪೋರ್ಟಲ್ಗೆ ಅಪ್ಲೋಡ್ ಮಾಡಲೇಬೇಕು.

ನಗದು ವಹಿವಾಟು ನಿರ್ಬಂಧ :- 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತದ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೆ ನಗದು ವ್ಯವಹಾರವನ್ನ ನಿಷೇಧ ಮಾಡಲಾಗಿದೆ. ಆನ್ಲೈನ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ ಮಾತ್ರ ಹಣವನ್ನ ಪಾವತಿ ಮಾಡುವುದು ಮಾನ್ಯವಾಗಿರುತ್ತದೆ.

ತಕ್ಷಣದ ಡೇಟಾ ಅಪ್ಡೇಟ್ ಸಿಸ್ಟಮ್ :- ಮಾಲೀಕತ್ವ ವರ್ಗಾವಣೆಯ ಪ್ರಕ್ರಿಯೆ ಆರಂಭಗೊಂಡ ತಕ್ಷಣ ವಾಹನದ ಹೊಸ ಡೇಟಾವು ಕೇಂದ್ರ ಸರ್ಕಾರದ ಸರ್ವರ್ ನಲ್ಲಿ ತಕ್ಷಣವೇ ಅಪ್ಡೇಟ್ ಆಗಲೇಬೇಕು.

ಮಿಸ್ ಮ್ಯಾಚ್ :- ವಾಹನಗಳ ತೀವ್ರ ತಪಾಸಣೆ ಅಂದರೆ ವಾಹನದ ಆರ್ಸಿ ಬುಕ್ ನಲ್ಲಿರುವಂತ ಮಾಹಿತಿ ಮತ್ತು ವಾಹನದಲ್ಲಿರುವ ಚಾಸಿಸ್ ನಂಬರ್ ಅಥವಾ ಇಂಜಿನ್ ನಂಬರ್ ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಅಂತಹ ವಾಹನಗಳನ್ನ ಅನುಮಾನಾಸ್ಪದ ಎಂದು ಪರಿಗಣಿಸಿ ತಕ್ಷಣ ತನಿಖೆ ಪ್ರಾರಂಭಿಸಲು ಆದೇಶ ಕೂಡ ಮಾಡಲಾಗಿದೆ.

WhatsApp Group Join Now

Spread the love

Leave a Reply