ಶಾಲಾ ಮಹಿಳಾ ಸಹಾಯಕ ಸಿಬ್ಬಂದಿಯೊಬ್ಬರು 4 ವರ್ಷದ ನರ್ಸರಿ ವಿದ್ಯಾರ್ಥಿಯನ್ನು ನೆಲಕ್ಕೆ ತಳ್ಳಿ ಹೊಡೆದು, ತುಳಿದು ಕೊಲೆ(Murder) ಮಾಡಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಶಾಲೆಯೊಳಗೆ ಮಕ್ಕಳ ಸುರಕ್ಷತೆ ಬಗ್ಗೆ ತೀವ್ರ ಆತಂಕವನ್ನು ಹುಟ್ಟುಹಾಕಿದೆ.ಸಿಬ್ಬಂದಿಯೊಬ್ಬರು ಮಗುವನ್ನು ಕ್ರೂರವಾಗಿ ಥಳಿಸಿ ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಜೀಡಿಮೆಟ್ಲಾದ ಶಾಪುರ್ ನಗರದಲ್ಲಿ ಶನಿವಾರ ಮಗುವನ್ನು ಆರೋಪಿ ಶೌಚಾಲಯಕ್ಕೆ ಕರೆದೊಯ್ದಾಗ ಈ ಘಟನೆ ನಡೆದಿದೆ. ದೂರಿನ ಪ್ರಕಾರ ಶಾಲಾ ಸಿಬ್ಬಂದಿ ಮಗುವಿನ ಮೇಲೆ ಪದೇ ಪದೇ ಹಲ್ಲ ನಡೆಸಿದ್ದಾರೆ. ಆಕೆಯ ಮೇಲೆ ಕಾಲಿನಿಂದ ತುಳಿದಿದ್ದಾಳೆ.ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.ನೆಲಕ್ಕೆ ತಳ್ಳಿ, ತಲೆಗೆ ಹೊಡೆದು, ಕತ್ತು ಹಿಸುಕಿ ಕೊಂದಿದ್ದಾಳೆ. ಆರೋಪಿಯನ್ನು ಲಕ್ಷ್ಮಿ ಎಂದು ಗುರುತಿಸಲಾಗಿದೆ.
ಶಾಲಾ ಸಮಯದ ನಂತರ ಅದೇ ಶಾಲೆಯಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಗುವಿನ ತಾಯಿ ಮಕ್ಕಳನ್ನು ಬಿಡಲು ಹೋದಾಗ ಈ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಸಮಯದಲ್ಲಿ ಆಕೆಯ ಮಗಳು ಶಾಲೆಯ ಆವರಣದೊಳಗೆ ಇದ್ದಳು.
ಜೀಡಿಮೆಟ್ಲಾ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾರ, ಮಗುವಿನ ತಾಯಿ ಹಾಗೂಈ ಸಿಬ್ಬಂದಿ ನಡುವೆ ದ್ವೇಷ ಇರಬಹುದು ಎಂದು ಹೇಳಲಾಗುತ್ತಿದೆ. ಈ ಬಾಲಕಿಯ ತಾಯಿ ತನ್ನ ಕೆಲಸವನ್ನು ಕಸಿದುಕೊಳ್ಳಬಹುದು ಎನ್ನುವ ಭಯ ಆಕೆಗೆ ಇರಬಹುದು ಎನ್ನಲಾಗಿದೆ. ಮಗುವಿನ ಪೋಷಕರು ನೀಡಿದ ದೂರಿನ ಮೇರೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಬೇರೆ ಯಾವುದೇ ಪೋಷಕರು ಇದೇ ರೀತಿಯ ಹಲ್ಲೆಗಳನ್ನು ವರದಿ ಮಾಡಿಲ್ಲ ಮತ್ತು ಇದು ಒಂದು ಪ್ರತ್ಯೇಕ ಘಟನೆಯಂತೆ ಕಾಣುತ್ತದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ನಾಲ್ಕು ವರ್ಷದ ವಿದ್ಯಾರ್ಥಿನಿಯನ್ನು ಹೊಡೆದು, ತುಳಿದು ಕೊಂದ ಶಾಲಾ ಸಿಬ್ಬಂದಿ
WhatsApp Group
Join Now