ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಏರಿಕೆ ಕುರಿತು ಹೊಸ ಆದೇಶ ಪ್ರಕಟ | Retirement Age

Spread the love

ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದಿಂದ ಬಿಗ್ ಅಪ್ಡೇಟ್ ಬಂದಿದೆ. ಕೇಂದ್ರ ಸರ್ಕಾರ ಈಗ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನ ಏರಿಕೆ ಮಾಡಿದೆ. ಇನ್ನು ಮುಂದೆ ಸರ್ಕಾರಿ ನೌಕರರು ಹೆಚ್ಚುವರಿ ವರ್ಷ ಕೆಲಸ ಮಾಡಬೇಕಾಗುತ್ತದೆ. ಹಾಗಾದರೆ ಕೇಂದ್ರ ಸರ್ಕಾರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನ ಏರಿಕೆ ಮಾಡಿರುವುದು ಯಾಕೆ.? ಇದರ ಹಿಂದಿನ ಕಾರಣ ಏನು.?

ಕೇಂದ್ರ ಸರ್ಕಾರ ಈಗ ಅಖಿಲ ಭಾರತ ಬೆಲೆ ಸೂಚ್ಯಾಂಕವನ್ನ ಆಧರಿಸಿ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ ಮೂರರಷ್ಟು ತುಟ್ಟಿಬತ್ತಿಯನ್ನ ಹೆಚ್ಚಳ ಮಾಡಿದೆ. ತುಟ್ಟಿಬತ್ತೆ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರ ಈಗ ನಿವೃತ್ತಿಯ ವಯಸ್ಸನ್ನ ಕೂಡ ಏರಿಕೆ ಮಾಡಿದೆ. ಈ ಹಿಂದೆ ಕೇಂದ್ರ ಸರ್ಕಾರಿ ನೌಕರರು 60 ವರ್ಷದವರೆಗೆ ಸರ್ಕಾರಿ ನೌಕರಿಯಲ್ಲಿ ಇರಬೇಕಾಗಿತ್ತು. ಆದರೆ ಇನ್ನು ಮುಂದೆ 65 ವರ್ಷದವರೆಗೆ ಸರ್ಕಾರಿ ನೌಕರಿಯಲ್ಲಿ ಇರಬೇಕಾಗುತ್ತದೆ.

65 ವರ್ಷದವರೆಗೆ ಸೇವೆಯನ್ನು ಸಲ್ಲಿಸಲು ಈಗ ಸರ್ಕಾರಿ ನೌಕರರಿಗೆ ಅನುಮತಿಯನ್ನು ಕೊಡಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಪಿಂಚಣಿ ಯೋಜನೆಗಳ ಮೇಲಿನ ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಅನ್ನೋದು ಸಾಕಷ್ಟು ಜನರ ಅಭಿಪ್ರಾಯವಾಗಿದೆ. ಅದೇ ರೀತಿಯಲ್ಲಿ ಬೋಧನಾ ಕ್ಷೇತ್ರ ವೈಜ್ಞಾನಿಕ ಕ್ಷೇತ್ರದಂತಹ ಹಲವು ಕ್ಷೇತ್ರದಲ್ಲಿ ನೌಕರರು 65 ವರ್ಷದವರೆಗೆ ಕೆಲಸವನ್ನ ಮಾಡಬೇಕು.

ರಾಜ್ಯ ಸರ್ಕಾರಗಳು ತಮ್ಮದೇ ಆದ ನಿವೃತ್ತಿಯ ಮಿತಿಯನ್ನ ನಿಗದಿಪಡಿಸುವಂತೆ ಆದೇಶವನ್ನು ಹೊರಡಿಸಲಾಗಿದೆ. 65 ವರ್ಷದವರೆಗೆ ನಿವೃತ್ತಿ ವಯಸ್ಸನ್ನ ಏರಿಕೆ ಮಾಡಿರುವುದರಿಂದ ವಯಸ್ಸಾದವರು ಹೆಚ್ಚಿನ ಪಿಂಚಣೆಯನ್ನು ಪಡೆದುಕೊಳ್ಳಬಹುದು. ಕೆಲವು ನೌಕರರು ಈ ನಿವೃತ್ತಿ ವಯಸ್ಸಿನ ವಿಸ್ತರಣೆಯನ್ನ ಸ್ವಾಗತಿಸಿದರೆ ಇನ್ನು ಕೆಲವರು ಬೇಸರವನ್ನು ಹೊರಹಾಕಿದ್ದಾರೆ.

WhatsApp Group Join Now

Spread the love

Leave a Reply