‘ವಿಜಯ್ ದೇವರಕೊಂಡ ಅಂಥವರು ಪ್ರತಿಯೊಬ್ಬರ ಜೀವನದಲ್ಲಿ ಸಿಗಬೇಕು ಎಂಬುದು ನನ್ನ ಭಾವನೆ, ಅವರು ಒಂದು ವರ’ : ರಶ್ಮಿಕಾ ಮಂದಣ್ಣ

Spread the love

‘ದಿ ಗರ್ಲ್‌ಫ್ರೆಂಡ್’ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ರಶ್ಮಿಕಾ ಮಂದಣ್ಣ, ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಅಂಥವರು ಹೇಗೆ ಮತ್ತು ಏಕೆ ಇರಬೇಕು ಎಂಬುದರ ಕುರಿತು ಮಾತನಾಡಿದರು.

WhatsApp Group Join Now

ರಶ್ಮಿಕಾ ಮಂದಣ್ಣ ನಟನೆಯ ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಸಕ್ಸಸ್ ಇವೆಂಟ್ ಹೈದರಾಬಾದ್‌ನಲ್ಲಿ ನಿನ್ನೆ ಸಾಯಂಕಾಲ ನಡೆಯಿತು. ಇದಕ್ಕೆ ವಿಜಯ್ ದೇವರಕೊಂಡ ಅತಿಥಿಯಾಗಿ ಬಂದಿದ್ದರು. ಈ ವೇಳೆ ರಶ್ಮಿಕಾ ಭಾವುಕರಾದರು.

ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿದ ರಶ್ಮಿಕಾ, ನಮ್ಮ ಜೀವನದಲ್ಲಿ ಅವರಂತಹ ವ್ಯಕ್ತಿ ಇರುವುದು ಒಂದು ವರ ಎಂದರು. ವಿಜಯ್ ಮೊದಲಿನಿಂದಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದಾರೆ, ಈ ಸಿನಿಮಾದ ಜರ್ನಿಯಲ್ಲೂ ಜೊತೆಗಿದ್ದರು ಎಂದಾಗ ಪ್ರೇಕ್ಷಕರಿಂದ ಮೆಚ್ಚುಗೆಯ ಪ್ರೋತ್ಸಾಹದ ಕರತಾಡನ ಕೇಳಿಬಂತು.

WhatsApp Group Join Now

‘ದಿ ಗರ್ಲ್‌ಫ್ರೆಂಡ್’ ಚಿತ್ರದ ಯಶಸ್ಸಿನ ಸಂಭ್ರಮಾಚರಣೆಯಲ್ಲಿ ರಶ್ಮಿಕಾ ಮಂದಣ್ಣ, ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಅಂಥವರು ಹೇಗೆ ಮತ್ತು ಏಕೆ ಇರಬೇಕು ಎಂಬುದರ ಕುರಿತು ಮಾತನಾಡಿದರು. ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರ ಪಾಲ್ಗೊಳ್ಳುವಿಕೆಯನ್ನು ಅವರು ಸಾರ್ವಜನಿಕವಾಗಿ ಒಪ್ಪಿಕೊಂಡರು. ಚಿತ್ರದ ಪ್ರಯಾಣದುದ್ದಕ್ಕೂ ಅವರು ನೀಡಿದ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಶ್ಮಿಕಾ ತನ್ನ ಭಾಷಣದ ಸಮಯದಲ್ಲಿ ವಿಜಯ್ ಅವರನ್ನು ನೇರವಾಗಿ ಉದ್ದೇಶಿಸಿ, ವಿಜು, ನೀವು ಆರಂಭದಿಂದಲೂ ಈ ಚಿತ್ರದ ಭಾಗವಾಗಿದ್ದೀರಿ, ನೀವು ಚಿತ್ರದ ಯಶಸ್ಸಿನ ಭಾಗವಾಗಿದ್ದೀರಿ. ನೀವು ವೈಯಕ್ತಿಕವಾಗಿ ಈ ಇಡೀ ಪ್ರಯಾಣದ ಭಾಗವಾಗಿದ್ದೀರಿ ಎಂದರು.

WhatsApp Group Join Now

ವಿಜಯ ದೇವರಕೊಂಡ ಜೊತೆಗೆ ನಿಶ್ಚಿತಾರ್ಥ ಮತ್ತು ಫೆಬ್ರವರಿಯಲ್ಲಿ ವಿವಾಹದ ವದಂತಿಗಳ ನಡುವೆ, ಇಬ್ಬರೂ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರಿಂದ ಈ ಕಾರ್ಯಕ್ರಮ ಗಮನ ಸೆಳೆಯಿತು.

ಈ ಕಥೆ ಕೇಳಿದ ತಕ್ಷಣ ಮಾಡಲೇಬೇಕು ಅನಿಸಿತು. ಯಾಕಂದ್ರೆ ಪಾತ್ರದ ಜೀವನದ ಕೆಲವು ಘಟನೆಗಳು ನನಗೂ ಎದುರಾಗಿದ್ದವು. ಪ್ರೇಕ್ಷಕರು ಈ ಚಿತ್ರವನ್ನು ಇಷ್ಟಪಡುತ್ತಿರುವುದೇ ನನಗೆ ಸಿಕ್ಕ ದೊಡ್ಡ ಪ್ರಶಸ್ತಿ ಎಂದು ರಶ್ಮಿಕಾ ಹೇಳಿದರು.

ಈ ಸಿನಿಮಾ ನೋಡಿದಾಗ ನನಗೆ ತುಂಬಾ ಬೇಜಾರಾಯ್ತು. ನಮ್ಮ ಸಂಗಾತಿಯನ್ನು ಕಂಟ್ರೋಲ್ ಮಾಡಬಾರದು, ಅವರ ಕನಸುಗಳಿಗೆ ರಕ್ಷಣೆಯಾಗಿರಬೇಕು. ಜೀವನ ತುಂಬಾ ಸರಳವಾಗಿ, ಖುಷಿಯಾಗಿರಬೇಕು ಎಂದು ವಿಜಯ್ ದೇವರಕೊಂಡ ಹೇಳಿದರು.

ರಶ್ಮಿಕಾ ಬಗ್ಗೆ ಮಾತನಾಡಿದ ವಿಜಯ್, ‘ಗೀತ ಗೋವಿಂದಂ’ನಿಂದ ಆಕೆಯ ಜರ್ನಿ ನೋಡುತ್ತಿದ್ದೇನೆ, ಹೆಮ್ಮೆ ಇದೆ. ಯಾರು ಏನೇ ಅಂದರೂ ತಲೆಕೆಡಿಸಿಕೊಳ್ಳದೆ ಬೆಳೆಯುತ್ತಿದ್ದಾಳೆ. ‘ದಿ ಗರ್ಲ್‌ಫ್ರೆಂಡ್’ ಚಿತ್ರದ ಸಕ್ಸಸ್ ಇವೆಂಟ್ ಆರಂಭದಲ್ಲಿ ವಿಜಯ್ ದೇವರಕೊಂಡ ರಶ್ಮಿಕಾ ಕೈಗೆ ಕಿಸ್ ಮಾಡಿದ್ದು, ಇಬ್ಬರೂ ವೇದಿಕೆಯಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡುತ್ತಾ ಮಾತನಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.


Spread the love

Leave a Reply