ಗೋವಾದಲ್ಲಿ ನಡೆದ IFFI 2025 ರ ಸಮಾರೋಪ ಸಮಾರಂಭದಲ್ಲಿ ಕಾಂತಾರ ಚಾಪ್ಟರ್ 1 (Kantara Chapter 1) ಚಿತ್ರವನ್ನು ಹಾಡಿ ಹೊಗಳುವ ಬರದಲ್ಲಿ ನಟ ರಣಬೀರ್ ಸಿಂಗ್ (Ranveer Singh) ದೈವವನ್ನು ದೆವ್ವ ಎಂದು ಕರೆಯುವ ಮೂಲಕ ಹಾಗೂ ಅದನ್ನು ಅನುಕರಿಸಲು ಹೋಗಿ ಎಡವಟ್ಟು ಮಾಡಿದ್ದರು. ಇದೀಗ ನನ್ನಿಂದ ನೋವಾಗಿದ್ದರೆ ಕ್ಷಮಿಸಿ ರಣಬೀರ್ ಕ್ಷಮೆಯಾಚಿಸಿದ್ದಾರೆ.
ಈ ವಿಷಯದ ಬಗ್ಗೆ ರಣವೀರ್ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ. ‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿನ ರಿಷಬ್ ಅವರ ಅದ್ಭುತ ಅಭಿನಯವನ್ನು ಮೆಚ್ಚಿಸುವುದೇ ನನ್ನ ಉದ್ದೇಶವಾಗಿತ್ತು. ನಾನೊಬ್ಬ ನಟನಾಗಿ, ಆ ದೃಶ್ಯವನ್ನು ನಿರ್ವಹಿಸುವುದು ಎಷ್ಟು ಕಷ್ಟವಿರುತ್ತದೆ ಎಂಬುದು ನನಗೆ ತಿಳಿದಿದೆ.
ರಿಷಬ್ ಅವರ ಅಭಿನಯಕ್ಕೆ ನನಗಿರುವ ಗೌರವ ಅಪಾರ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಗೌರವಿಸುತ್ತೇನೆ. ನನ್ನ ಮಾತುಗಳಿಂದೊಬ್ಬರಿಗೂ ನೋವಾಗಿದ್ದರೆ ಹೃದಯಪೂರ್ವಕ ಕ್ಷಮೆಯಾಚಿಸುತ್ತೇನೆ ಎಂದು ಅವರು ಬರೆದಿದ್ದಾರೆ.
ಈ ಸಂಬಂಧ ಹಿಂದೂ ಜನಜಾಗೃತಿ ಸಮಿತಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದೆ. ಸಮುದಾಯ ಆರಾಧಿಸುವ ಚಾಮುಂಡಿ ದೇವಿಯನ್ನು ಹೆಣ್ಣು ದೆವ್ವ ಎಂದು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಶುಕ್ರವಾರ ಗೋವಾದಲ್ಲಿ ನಡೆದ ಸಮಾರಂಭದಲ್ಲಿ ಚಲನಚಿತ್ರ ನಿರ್ಮಾಪಕ ಮತ್ತು ನಟ ರಿಷಬ್ ಶೆಟ್ಟಿ ಮತ್ತು ನಟ ರಣವೀರ್ ಸಿಂಗ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈ ವೇಳೆ ಕಾಂತಾರ ಚಿತ್ರದಲ್ಲಿ ರಿಷಬ್ ಅವರ ಅಭಿನಯವನ್ನು ರಣವೀರ್ ಶ್ಲಾಘಿಸಿದ್ದಾರೆ.
ರಣಬೀರ್ ಅವರೇ ನಿಮ್ಮದು ಅದ್ಭುತ ನಟನೆ. ಮಹಿಳಾ ದೆವ್ವ ನಿಮ್ಮ ದೇಹದ ಒಳಗೆ ಹೋದಾಗ ನಿಮ್ಮ ನಟನೆ ಅದ್ಭುತವಾಗಿತ್ತು ಎಂದು ರಣವೀರ್ ಸಿಂಗ್ ರಿಷಬ್ ಶೆಟ್ಟಿ ಬಗ್ಗೆ ಹಾಡಿ ಹೊಗಳಿದ್ದರು. ಆದರೆ ರಣಬೀರ್ ಮಾತನಾಡುವ ರಭಸದಲ್ಲಿ ದೈವ ಹಾಗೂ ದೆವ್ವಕ್ಕೆ ವ್ಯತ್ಯಾಸ ಗೊತ್ತಿಲ್ಲದೆ ಮಾತನಾಡುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.
ಅಷ್ಟೇ ಅಲ್ಲದೆ ವೈರಲ್ ವಿಡಿಯೋದಲ್ಲಿ ರಣವೀರ್, ನಾನು ಕಾಂತಾರ ಚಾಪ್ಟರ್ 1 ಅನ್ನು ಚಿತ್ರಮಂದಿರಗಳಲ್ಲಿ ನೋಡಿದೆ, ಮತ್ತು ರಿಷಬ್, ಇದು ತಮ್ಮ ಅತ್ಯುತ್ತಮ ಪ್ರದರ್ಶನವಾಗಿತ್ತು. ವಿಶೇಷವಾಗಿ ಸ್ತ್ರೀ ಪ್ರೇತ (ಚಾಮುಂಡಿ ದೈವ) ನಿಮ್ಮ ದೇಹವನ್ನು ಪ್ರವೇಶಿಸಿದಾಗ. ಆ ಶಾಟ್ ತುಂಬಾ ಅದ್ಭುತವಾಗಿತ್ತು ಎಂದು ಹೇಳಿ ದೈವವನ್ನು ಅನುಕರಿಸಲು ಹೋಗಿ ದೈವಕ್ಕೆ ಅವಮಾನ ಮಾಡಿದ್ದರು.
ದೈವಗಳಿಗೆ ಅಪಮಾನ – ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ಎಂದ ರಣವೀರ್.!
WhatsApp Group
Join Now