‘ಪ್ರಧಾನಿ ಮೋದಿ ದೇಶವನ್ನೇ ಮಾರಿದ್ದಾರೆ’ : ಅಮೆರಿಕ ವ್ಯಾಪಾರ ಒಪ್ಪಂದದ ವಿರುದ್ಧ ರಾಹುಲ್ ಗಾಂಧಿ ಕಿಡಿ.!

Spread the love

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, “ಪ್ರಧಾನಿ ಮೋದಿ ಅವರು ರಾಜಿಯಾಗಿದ್ದಾರೆ” ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.

ಚೀನಾ ಗಡಿ ವಿವಾದ ಮತ್ತು ಮಾಜಿ ಸೇನಾ ಮುಖ್ಯಸ್ಥ ನರವಾಣೆ ಅವರ ಜೀವನಚರಿತ್ರೆಯ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂಸತ್ತಿನ ಹೊರಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

“ಪ್ರಧಾನಿ ಮೋದಿ ರಾಜಿಯಾಗಿದ್ಧಾರೆ. ಅವರನ್ನು ಯಾರು ಮತ್ತು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ದೇಶದ ಜನರು ಅರ್ಥಮಾಡಿಕೊಳ್ಳಬೇಕು. ಮೋದಿ ಈಗ ತೀವ್ರ ಒತ್ತಡದಲ್ಲಿದ್ದಾರೆ,” ಎಂದು ರಾಹುಲ್ ಗಾಂಧಿ ಹೇಳಿದರು.

ಕಳೆದ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದ್ದ ವ್ಯಾಪಾರ ಒಪ್ಪಂದಕ್ಕೆ ನಿನ್ನೆ ಸಂಜೆ ಪ್ರಧಾನಿ ಸಹಿ ಹಾಕಿದ್ದಾರೆ. ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಮೋದಿಯವರ ‘ಇಮೇಜ್ ಬಬಲ್’ (ಬಿಂಬದ ಗುಳ್ಳೆ) ಶೀಘ್ರದಲ್ಲೇ ಒಡೆಯಲಿದೆ ಎಂದು ಅವರು ಭವಿಷ್ಯ ನುಡಿದರು.ಈ ವ್ಯಾಪಾರ ಒಪ್ಪಂದದ ಮೂಲಕ ನರೇಂದ್ರ ಮೋದಿ ನಿಮ್ಮ ಕಠಿಣ ಪರಿಶ್ರಮ ಮತ್ತು ರಕ್ತ-ಬೆವರಿನ ಫಲವನ್ನು ಮಾರಾಟ ಮಾಡಿದ್ದಾರೆ. ನಮ್ಮ ಪ್ರಧಾನಿ ದೇಶವನ್ನು ಮಾರಿದ್ದಾರೆ,” ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.

ಮಾತನಾಡಲು ಅವಕಾಶ ನಿರಾಕರಣೆ: ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಅವರು ದೂರಿದರು.

“ಮೋದಿ ಗಾಬರಿಯಾಗಿದ್ದಾರೆ… ಏನು ಬದಲಾಗಿಲ್ಲದಿದ್ದರೂ ಸ್ಥಗಿತಗೊಂಡಿದ್ದ ಒಪ್ಪಂದಕ್ಕೆ ನಿನ್ನೆ ಸಂಜೆ ಸಹಿ ಹಾಕಿದ್ದಾರೆ. ಪ್ರಧಾನಿ ರಾಜಿಯಾಗಿದ್ಧಾರೆ ಎಂಬುದು ಮುಖ್ಯ ವಿಷಯ. ಇದನ್ನು ಭಾರತದ ಜನರು ಗಂಭೀರವಾಗಿ ಯೋಚಿಸಬೇಕಿದೆ.” ಸಂಸತ್ತಿನಲ್ಲಿ ಚೀನಾ ವಿಷಯದ ಕುರಿತು ಗದ್ದಲ ಮುಂದುವರಿದಿರುವ ಬೆನ್ನಲ್ಲೇ ರಾಹುಲ್ ಗಾಂಧಿ ಅವರ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

WhatsApp Group Join Now

Spread the love

Leave a Reply