ಬಳಕೆಯಾಗದ ಇಂಟರ್ನೆಟ್ ಡೇಟಾ ಅನ್ನು ಮಾರನೇ ದಿನಕ್ಕೆ ರೋಲ್ ಓವರ್ಗೆ ರಾಘವ್ ಚಡ್ಡಾ ಆಗ್ರಹ; ಟೆಲಿಕಾಂ ಕಂಪನಿಗಳಿಗೆ ಚಾಟಿ

Spread the love

ಆಮ್ ಆದ್ಮಿ ಪಕ್ಷದ ರಾಜ್ಯಸಭೆ ಸಂಸದ ರಾಘವ್ ಚಡ್ಡಾ ಸಾರ್ವಜನಿಕ ಕಾಳಜಿ ವಿಷಯದ ಬಗ್ಗೆ ಧ್ವನಿ ಎತ್ತುವ ಪ್ರಮುಖ ರಾಜಕಾರಣಿ. ರಾಜ್ಯಸಭೆಯಲ್ಲಿ ಅಂಥದ್ದೆ ಮತ್ತೊಂದು ಮೊಬೈಲ್ ಇಂಟರ್ನೆಟ್ ಡೇಟಾ ಬಗ್ಗೆ ಧ್ವನಿ ಎತ್ತಿದ್ದು, ಅದನ್ನು ಇತರ ಸೇವೆಗಳಿಗೆ ಸಮಾನವಾಗಿ ತರಬೇಕು.

ಮತ್ತು ಡೇಟಾ ಬಳಕೆದಾರರು ತಾವು ಪಾವತಿಸುವ ಪ್ರತಿ ಪೈಸೆಯನ್ನೂ ಬಳಸುವಂತೆ ನೋಡಿಕೊಳ್ಳಬೇಕೆಂದು ಪ್ರತಿಪಾದಿಸಿದರು.

ರಾಜ್ಯಸಭೆಯಲ್ಲಿ ಮಾತನಾಡಿರುವ ಅವರು, ಟೆಲಿಕಾಂ ಕಂಪನಿಗಳು ದಿನಕ್ಕೆ 1.5GB, 2GB, ಅಥವಾ 3GB ಯಂತಹ ‘ದೈನಂದಿನ ಡೇಟಾ ಮಿತಿ’ಗಳೊಂದಿಗೆ ರೀಚಾರ್ಜ್ ಯೋಜನೆಗಳನ್ನು ನೀಡುತ್ತವೆ. ಪ್ರತಿ 24 ಗಂಟೆಗಳಿಗೊಮ್ಮೆ ಡೇಟಾವನ್ನು ಮರುಹೊಂದಿಸುತ್ತವೆ. 2 ಜಿಬಿಯಲ್ಲಿ 1.5 ಜಿಬಿ ಡೇಟಾ ಬಳಿಸಿ 500ಎಂಬಿ ಉಳಿದ್ರೆ, ಅದನ್ನು ಮಾರನೇ ದಿನ ಬಳಸಲಾಗಲ್ಲ. ಬಳಕೆಯಾಗದ ಡೇಟಾವು ಸಂಪೂರ್ಣವಾಗಿ ಪಾವತಿಸಲ್ಪಟ್ಟಿದ್ದರೂ ಮಧ್ಯರಾತ್ರಿಯಲ್ಲಿ ಮುಕ್ತಾಯಗೊಳ್ಳುತ್ತದೆ.

ಬಳಕೆದಾರರ ಬಳಕೆಯಾಗದ ಮೊಬೈಲ್ ಡೇಟಾವನ್ನು ಟೆಲಿಕಾಂ ಕಂಪನಿಗಳು ಮಧ್ಯರಾತ್ರಿ ಮುಟ್ಟುಗೋಲು ಹಾಕಿಕೊಳ್ಳುತ್ತವೆ. ಇದನ್ನು ಮರುದಿನಕ್ಕೆ ಮುಂದುವರಿಸಲಾಗುವುದಿಲ್ಲ. ಗ್ರಾಹಕರಿಂದ ಪೂರ್ಣ ಡೇಟಾಗೆ ಶುಲ್ಕ ಪಡೆಯುತ್ತವೆ. ಆದರೆ ದಿನದ ಕೊನೆಯಲ್ಲಿ, ಅವರ ಬಳಕೆಯಾಗದ ಡೇಟಾವನ್ನು ಕಂಪನಿಗಳು ಹಿಂದಕ್ಕೆ ತೆಗೆದುಕೊಳ್ಳುತ್ತವೆ. ಇದು ಅನೈತಿಕ ಎಂದು ಚಡ್ಡಾ ಕಿಡಿಕಾರಿದ್ದಾರೆ.

ಮೊಬೈಲ್ ಡೇಟಾವನ್ನು ರೋಲ್‌ಓವರ್ ಮಾಡಲು ಅಥವಾ ಮಾರನೇ ದಿನಕ್ಕೆ ಸಾಗಿಸಲು ಯಾವುದೇ ಸೌಲಭ್ಯವಿಲ್ಲ. ನಾವು ಪಾವತಿಸಿದ ಡೇಟಾವನ್ನು ಟೆಲಿಕಾಂ ಕಂಪನಿಗಳು ಯಾಕೆ ಮುಟ್ಟುಗೋಲು ಹಾಕಿಕೊಳ್ಳಬೇಕು?. ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್‌ನಂತಹ ಇತರ ಗ್ರಾಹಕ ಸೇವೆಗಳೊಂದಿಗೆ ಸಮಾನಾಂತರವಾಗಿ ಡೇಟಾವನ್ನು ನೋಡಬೇಕು. ಬಳಕೆಯಾಗದ ಡೇಟಾವನ್ನು ರೋಲ್‌ಓವರ್ ಮಾಡಲು ಇಲ್ಲ, ಕುಟುಂಬ ಮತ್ತು ಸ್ನೇಹಿತರ ನಡುವೆ ಅದನ್ನು ವರ್ಗಾವಣೆ ಮಾಡುವ ನಿಬಂಧನೆ ತರುವಂತೆ ಒತ್ತಾಯಿಸಿದ್ದಾರೆ.

WhatsApp Group Join Now

Spread the love

Leave a Reply