Property & Tenant Laws 2025 : ಸೆಪ್ಟೆಂಬರ್ ಒಂದರಿಂದ ಹೊಸ ಬಾಡಿಗೆ ನಿಯಮಗಳು ಜಾರಿಯಾಗಿದ್ದು, ಒಂದುವೇಳೆ ನೀವು ನಿಯಮವನ್ನ ಫಾಲೋ ಮಾಡದಿದ್ರೆ ಮನೆ ಬಾಡಿಗೆ ನೀಡುವವರಿಗೆ ₹5000 ರೂಪಾಯಿ ದಂಡ ಬೀಳಲಿದೆ. ಹಾಗಾಗಿ ಮನೆ ಮಾಲೀಕರು, ಬಾಡಿಗೆದಾರರು, ಮತ್ತೆ ರಿಯಲ್ ಎಸ್ಟೇಟ್ ಏಜೆಂಟರು ಸೇರಿದಂತೆ ಎಲ್ಲರಿಗೂ ಈ ಹೊಸ ನಿಯಮಗಳ ಬಗ್ಗೆ ಮಾಹಿತಿ ತಿಳಿಯುವುದು ಬಹಳ ಮುಖ್ಯವಾಗಿರುತ್ತದೆ. ಹಾಗಿದ್ರೆ ಯಾವುದು ಆ ಹೊಸ ನಿಯಮ ನೋಡೋಣ.
ಡಿಜಿಟಲ್ ಸ್ಟ್ಯಾಂಪಿಂಗ್ ಕಡ್ಡಾಯ :-
ಹೊಸ ನಿಯಮದ ಪ್ರಕಾರ ಎಲ್ಲಾ ಹೊಸ ಬಾಡಿಗೆ ಒಪ್ಪಂದಗಳು ಸರ್ಕಾರಿ ಅನುಮೋದಿತ ಡಿಜಿಟಲ್ ಪ್ಲಾಟ್ಫಾರ್ಮ್ ಗಳ ಮೂಲಕವೇ ಸ್ಟ್ಯಾಂಪ್ ಮಾಡಿರಬೇಕು. ಇದುವರೆಗೆ ಹಳೆಯ ಪದ್ಧತಿಯಾದ ಫಿಸಿಕಲ್ ಸ್ಟ್ಯಾಂಪ್ ಅಥವಾ ಪೇಪರ್, ಅಂದ್ರೆ ಕೈಬರಹದ ಮೂಲಕ ನೀವು ಒಪ್ಪಂದಗಳನ್ನ ನೀಡುತ್ತಿದ್ದವರು, ಇನ್ನು ಮುಂದೆ ಈ ರೀತಿ ಮಾಡುವಂತಿಲ್ಲ. ಡಿಜಿಟಲ್ ಸ್ಟ್ಯಾಂಪಿಂಗ್ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಈ ನಿಯಮ ಉಲ್ಲಂಘನೆ ಮಾಡಿದ್ರೆ ಮನೆ ಮಾಲೀಕರಿಗೆ 5000 ರೂಪಾಯಿ ದಂಡವನ್ನ ವಿಧಿಸಲಾಗುತ್ತದೆ.
ಹಾಗಾದ್ರೆ ಯಾಕಾಗಿ ಈ ಹೊಸ ನಿಯಮವನ್ನ ಜಾರಿ ಮಾಡಿದ್ದಾರೆ.?
ಈ ನಿಯಮವನ್ನ ಜಾರಿ ಮಾಡಲಿಕ್ಕೆ ಹಲವು ರೀತಿಯ ಕಾರಣಗಳಿವೆ. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿನ ನ್ಯೂನ್ಯತೆಗಳನ್ನ ಹೋಗಲಾಡಿಸಿ, ಬಾಡಿಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆಯನ್ನ ತರುವುದು ಇದರ ಉದ್ದೇಶವಾಗಿದೆ. ಅಂದರೆ ಹಳೆಯ ಫಿಸಿಕಲ್ ಸ್ಟ್ಯಾಂಪ್ ಪೇಪರ್ಗಳನ್ನ ನಕಲು ಮಾಡುವುದು ಅಥವಾ ದುರ್ಬಳಕೆ ಮಾಡುವುದು ಸುಲಭವಾಗಿತ್ತು. ಆದರೆ ಡಿಜಿಟಲ್ ಸ್ಟ್ಯಾಂಪಿಂಗ್ ಪ್ರತಿಯೊಂದು ಒಪ್ಪಂದವನ್ನ ಆಧಾರ್ ಅಥವಾ ಪ್ಯಾನ್ ಸಂಖ್ಯೆ ವಿಶಿಷ್ಟ ವೈವಾಟು ಐಡಿಗೆ ಜೋಡಿಸುವುದರಿಂದ ನಕಲು ಅಥವಾ ವಂಚನೆಗೆ ಅವಕಾಶ ಇರುವುದಿಲ್ಲ.
ಇನ್ನು ಈ ಸ್ಟ್ಯಾಂಪ್ ಮಾಡಿರುವ ಒಪ್ಪಂದಗಳನ್ನ ಯಾವುದೇ ಹೆಚ್ಚಿನ ಪರಿಶೀಲನೆ ಇಲ್ಲದೆ ನೇರವಾಗಿ ಅವುಗಳನ್ನ ಪರಿಶೀಲನೆ ಕೂಡ ಮಾಡಬಹುದು. ಇನ್ನು ಕೈಬರಹದ ದಾಖಲೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿದ್ದು, ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲೆಗಳ ಸುರಕ್ಷತೆ ಕೂಡ ಇರುವಂತದ್ದು. ಅದೇ ರೀತಿ ಇದನ್ನ ವಾಪಸ್ ಕೂಡ ಪಡೆಯಲು ಸುಲಭವಾಗುತ್ತದೆ ಎನ್ನುವ ದೃಷ್ಟಿಯಿಂದ ಈ ನಿಯಮವನ್ನ ಜಾರಿ ಮಾಡಲಾಗಿದೆ.