Property Rules : ಎಲ್ಲಾ ಆಸ್ತಿ ಮಾಲೀಕರಿಗೆ ಈ ಕೆಲಸ ಕಡ್ಡಾಯ | ಮನೆ, ಜಮೀನು, ಪ್ಲಾಟ್ ಹೊಂದಿರುವ ಎಲ್ಲರಿಗೂ

Property Rules : ನಮಸ್ಕಾರ ಸ್ನೇಹಿತರೇ, ರಾಜ್ಯದ ಎಲ್ಲ ಜಮೀನುಗಳ ಮಾಲೀಕರಿಗೆ ಹಾಗು ಫ್ಲೈಟ್ ಅಥವಾ ಮನೆ ಹೀಗೆ ಯಾವುದೇ ಆಸ್ತಿ ಹೊಂದಿರುವಂತಹ ಎಲ್ಲ ಆಸ್ತಿಗಳ ಮಾಲೀಕರಿಗೆ ರಾಜ್ಯ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ಮಹತ್ವದ ಆದೇಶವನ್ನು ಜಾರಿಗೊಳಿಸಿದ್ದಾರೆ. ಎಲ್ಲ ಆಸ್ತಿ ಮಾಲೀಕರಿಗೆ ಈ ಕೆಲಸ ಮಾಡುವುದು ಕಡ್ಡಾಯ. ಸ್ವಂತ ಆಸ್ತಿ ಹೊಂದಿರುವ ಎಲ್ಲ ಆಸ್ತಿ ಮಾಲೀಕರಿಗೆ ಕರ್ನಾಟಕ ರಾಜ್ಯ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಅಧಿಕೃತವಾಗಿ ಆದೇಶವನ್ನು ಹೊರಡಿಸಿದ್ದು, ಎಲ್ಲ ಆಸ್ತಿಗಳ ಮಾಲೀಕರು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು. ಇಲ್ಲವಾದರೆ ನಿಮ್ಮ ಆಸ್ತಿ ಮಾಲೀಕತ್ವ ಹಾಗು ಅದರ ಹಕ್ಕು ಹಾಗು ಭಾರ ಬಾರಿಗೆ ಭಾರಿ ದೊಡ್ಡ ತೊಂದರೆ ಉಂಟಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಸ್ವತಃ ತಿಳಿಸಿದ್ದಾರೆ.

ಇದನ್ನೂ ಕೂಡ ಓದಿ : Govt Updates : ಎಲ್ಲಾ ಸಾರ್ವಜನಿಕರಿಗೆ ಬಂಪರ್ | ಜುಲೈ 1 ರಿಂದ 4 ಹೊಸ ರೂಲ್ಸ್ ಜಾರಿ | ಪೆಟ್ರೋಲ್ ಡೀಸೆಲ್, ಎಲ್ಪಿಜಿ ಗ್ಯಾಸ್, ಸಿಮ್ ಕಾರ್ಡ್

ಜಮೀನು ಅಕ್ರಮ ತಡೆಗೆ ರಾಜ್ಯ ಸರ್ಕಾರವು ಮಹತ್ವದ ಕ್ರಮವನ್ನ ಕೈಗೊಂಡು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಕಂದಾಯ ಸಚಿವರು ತಿಳಿಸಿದ್ದಾರೆ. ಕಲಬುರ್ಗಿ ಜಿಲ್ಲಾಡಳಿತ ಭವನದಲ್ಲಿ ನಡೆದ ಕಲಬುರ್ಗಿ ವಿಭಾಗದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಯಾರದ್ದೋ ಜಮೀನನ್ನ ಮತ್ತೊಬ್ಬರು ಲಪಟಾಯಿಸುವುದನ್ನು ತಡೆಯಲು ಬೆಳೆನಷ್ಟ ಮತ್ತಿತರ ಸಂದರ್ಭದಲ್ಲಿ ದೊರೆಯುವಂತಹ ಪರಿಹಾರವನ್ನ ಮತ್ತೊಬ್ಬರು ಪಡೆದು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ರಾಜ್ಯದಲ್ಲಿನ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆ ಜುಲೈ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ನಾಲ್ಕು ಕೋಟಿಗೂ ಅಧಿಕ ಆರ್ ಟಿಸಿ ಮಾಲೀಕರು ಇದ್ದಾರೆ. ಈ ಪೈಕಿ 1.75 ಕೋಟಿ ಆರ್ ಟಿಸಿಗಳನ್ನ ಆಧಾರ್ ಜೊತೆ ಲಿಂಕ್ ಜೋಡಿಸಲಾಗಿದೆ. ಅಲ್ಲದೆ 1.20 ಆರ್‌ಟಿಸಿಗಳು ಒಟಿಪಿ ಮೂಲಕ ಈ-ಕೆವೈಸಿ ಮಾಡಿಸಲಾಗಿದೆ. ಇನ್ನು ಕಲಬುರ್ಗಿ ವಿಭಾಗದಲ್ಲಿ 45 ಲಕ್ಷ ಆರ್‌ಟಿಸಿ ಮಾಲೀಕರಿದ್ದು, ಈ ಪೈಕಿ 18 ಲಕ್ಷ ಆರ್ ಟಿಸಿಗಳನ್ನ ಮಾತ್ರ ಆಧಾರ್ ಜೊತೆ ಜೋಡಿಸಲಾಗಿದೆ. ಅಂದ್ರೆ ಶೇಕಡಾ 40% ರಷ್ಟು ಕೆಲಸ ಮಾತ್ರ ಆಗಿದ್ದು, ಇದು ಸಾಲದು. ಮುಂದಿನ ಜುಲೈ ತಿಂಗಳ ಒಳಗಾಗಿ ಆಧಾರ್ ಸೀಡಿಂಗ್ ವಿಚಾರದಲ್ಲಿ ಶೇಕಡ 90% ರಷ್ಟು ಪ್ರಗತಿ ಸಾಧಿಸಬೇಕು ಎಂದು ತಾಕೀತು ಮಾಡಿದರು. ಆರ್ ಟಿಸಿಗಳನ್ನ ಆಧಾರ್‌ಗೆ ಲಿಂಕ್ ಮಾಡುವ ಮೂಲಕ, ಯಾರದ್ದೋ ಜಮೀನನ್ನ ಮತ್ಯಾರೋ ಮಾರಾಟ ಮಾಡುವಂತಹ ವಂಚನೆಯನ್ನು ತಡೆಯಬಹುದು.

ಇದನ್ನೂ ಕೂಡ ಓದಿ : Scholarship : ಶಾಲಾ ವಿಧ್ಯಾರ್ಥಿಗಳಿಗೆ ದೊರೆಯಲಿದೆ 10 ಸಾವಿರ ಪ್ರೋತ್ಸಾಹ ಧನ! ಇಲ್ಲಿದೆ ಅರ್ಜಿ ಹಾಕುವ ವಿವರ

ಅರ್ಹ ರೈತರಿಗೆ ಸರಿಯಾದ ಸಮಯಕ್ಕೆ ಪರಿಹಾರ ತಲುಪಿಸುವ ಹಾಗು ಮ್ಯೂಟೇಶನ್ ಇನ್‌ಪುಟ್ ಸಬ್ಸಿಡಿ ನೀಡುವುದನ್ನ ಇದು ಸಹಕಾರಿಯಾಗುತ್ತದೆ. ಹೀಗಾಗಿ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಒಪ್ಪಿಸಿ ಆಧಾರ್ ಜೋಡಣೆ ಮಾಡಬೇಕು. ಆಧಾರ್ ಜೋಡಣೆಯಿಂದ ಜನರಿಗೆ ಆಗುವ ಅನುಕೂಲ ಎಂಬ ಕುರಿತು ಕ್ಯಾಂಪೇನ್ ಮಾಡಿ, ಇದರಿಂದ ಒಳ್ಳೆಯ ಸರಳ ಆಡಳಿತವನ್ನು ನೀಡಬಹುದು. ಅಧಿಕಾರಿಗಳ ಕೆಲಸದ ಒತ್ತಡವು ಕೂಡ ಕಡಿಮೆ ಆಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಭಿಪ್ರಾಯಪಟ್ಟರು.

ಅಲ್ಲದೇ ಆರ್‌ಟಿಸಿ ಆಧಾರ್ ಲಿಂಕ್ ಮಾಡುವ ಮೂಲಕ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಎಷ್ಟು ಎಂಬಂತಹ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಾಸ್ತವ ಅಂಕಿ ಅಂಶವನ್ನು ನೀಡಬಹುದು. ಕೇಂದ್ರ ಸರ್ಕಾರದ ಲೆಕ್ಕಾಚಾರದ ಪ್ರಕಾರ ರಾಜ್ಯದಲ್ಲಿ ಸಣ್ಣ ರೈತರ ಸಂಖ್ಯೆ ಶೇಕಡಾ 44% ರಷ್ಟು ಮಾತ್ರ ಇದೆ. ಆದರೆ, ವಾಸ್ತವದಲ್ಲಿ ಈ ಸಂಖ್ಯೆ ಶೇಕಡಾ 65 ರಿಂದ 70% ರಷ್ಟಿದ್ದು, ಈ ನಿಖರ ಸಂಖ್ಯೆಯನ್ನ ನೀಡುವ ಮೂಲಕ ಕೇಂದ್ರದಿಂದ ಹೆಚ್ಚಿನ ಬರ ಪರಿಹಾರವನ್ನ ಪಡೆಯಲು ಸಹಕಾರಿಯಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply