Property ownership Doc : ಸದ್ಯ ನಮ್ಮ ದೇಶದಲ್ಲಿ ಆಸ್ತಿ ನೋಂದಾವಣಿ ಪ್ರಕ್ರಿಯೆಯಲ್ಲಿ ಕೆಲವು ಮೋಸಗಳು ಆಗುತ್ತಿರುವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದೆ. ಈ ಕಾರಣಗಳಿಂದ ಕೇಂದ್ರ ಸರ್ಕಾರ ಈಗ ಆಸ್ತಿ ನೊಂದಾವಣಿ ಪ್ರಕ್ರಿಯೆಯಲ್ಲಿ ಬಹು ದೊಡ್ಡ ಬದಲಾವಣೆಯನ್ನ ಮಾಡಿದೆ. ಹೌದು, ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ ಈಗ ಭಾರತದಲ್ಲಿ ಆಸ್ತಿ ಮಾಲಿಕತ್ವಕ್ಕೆ ನೋಂದಾವಣಿ ಮಾತ್ರ ಸಾಕಾಗುವುದಿಲ್ಲ. ಆದರೆ ಇತರ ಹಲವು ದಾಖಲೆಗಳು ಸಹ ಅಗತ್ಯವಾಗಿರುತ್ತದೆ. ಅದೇ ರೀತಿಯಲ್ಲಿ ಭಾರತ ಸರ್ಕಾರ ಈಗ ಆಸ್ತಿ ಮಾಲೀಕತ್ವಕ್ಕೆ 12 ದಾಖಲೆಗಳನ್ನ ಕಡ್ಡಾಯಗೊಳಿಸಿದೆ.
ಭಾರತ ಸರ್ಕಾರ ಆಸ್ತಿ ನೋಂದಾವಣಿಗೆ 12 ದಾಖಲೆಗಳನ್ನ ಕಡ್ಡಾಯಗೊಳಿಸಿದ್ದು, ಸದ್ಯ ಆ ದಾಖಲೆಗಳ ಪಟ್ಟಿಯನ್ನ ಕೂಡ ಬಿಡುಗಡೆ ಮಾಡಿದೆ. ಸರ್ಕಾರಕ್ಕೆ ಈ 12 ದಾಖಲೆಗಳನ್ನ ಕೊಡದೇ ಇದ್ದರೆ ಆಸ್ತಿ ನೋಂದಾವಣಿಯಾದರೂ ಕೂಡ ಮಾಲೀಕತ್ವವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ. ಹಾಗಾದರೆ ಆಸ್ತಿ ನೋಂದಾವಣಿಯ ನಂತರ ಮಾಲೀಕತ್ವವನ್ನ ಪಡೆದುಕೊಳ್ಳಲು ಯಾವ 12 ದಾಖಲೆಯನ್ನ ಕಡ್ಡಾಯವಾಗಿ ಕೊಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
• ಮಾರಾಟ ಪತ್ರ. ಆಸ್ತಿ ಮಾರಾಟದ ಸಮಯದಲ್ಲಿ ಮಾರಾಟ ಪತ್ರವನ್ನು ಕೊಡುವುದು ಅತೀ ಕಡ್ಡಾಯವಾಗಿದೆ. ಈ ಮಾರಾಟ ಪತ್ರವು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಆಸ್ತಿಯ ಮಾಲೀಕತ್ವ ವರ್ಗಾವಣೆಯಾಗುವಾಗ ಕಾರ್ಯ ನಿರ್ವಹಿಸುವ ಒಂದು ಪ್ರಮುಖವಾದ ದಾಖಲೆಯಾಗಿದೆ. ಯಾವುದೇ ಒಂದು ಆಸ್ತಿಯ ಖರೀದಿಯ ಸಮಯದಲ್ಲಿ ಸರಿಯಾದ ಕಾನೂನಿನ ಮಾಲೀಕತ್ವವನ್ನ ಖಚಿತಪಡಿಸಿಕೊಳ್ಳಲು ಈ ಮಾರಾಟ ಪತ್ರವು ಒಂದು ಪ್ರಮುಖವಾದ ದಾಖಲೆಯಾಗಿದೆ.
• ಮದರ್ ಡೀಡ್. ನೋಂದಾವಣಿಯ ಸಮಯದಲ್ಲಿ ಮದರ್ ಡೀಡ್ ಅನ್ನು ಕಡ್ಡಾಯವಾಗಿ ಕೊಡಬೇಕು. ಮದರ್ ಡೀಡ್ ಅನ್ನುವುದು ಯಾವುದೇ ಆಸ್ತಿ ವಹಿವಾಟಿನಲ್ಲಿ ಬಹಳ ಮುಖ್ಯವಾದ ಕಾನೂನು ದಾಖಲೆಯಾಗಿದೆ. ಇದರಲ್ಲಿ ಆಸ್ತಿಯ ಸಂಪೂರ್ಣ ಮೂಲ ಮಾಲೀಕತ್ವದ ಇತಿಹಾಸವನ್ನ ಪ್ರತಿಬಿಂಬಿಸುವ ಕೆಲವು ಮಾಹಿತಿಗಳು ಇರುತ್ತದೆ. ನೀವು ಯಾವುದೇ ಬ್ಯಾಂಕಿನಿಂದ ಸಾಲವನ್ನು ಪಡೆಯಲು ಬಯಸಿದಾಗ ಈ ದಾಖಲೆ ವಿಶೇಷವಾಗಿ ಪಾತ್ರವನ್ನು ವಹಿಸುತ್ತದೆ.
• ಮಾರಾಟ ಮತ್ತು ಖರೀದಿ ಒಪ್ಪಂದ ಪತ್ರ. ಯಾವುದೇ ಒಂದು ಆಸ್ತಿ ಖರೀದಿ ಅಥವಾ ಮಾರಾಟ ಮಾಡುವ ಸಮಯದಲ್ಲಿ ಈ ಒಪ್ಪಂದವು ಪ್ರಮುಖ ದಾಖಲೆಯಾಗಿ ಪಾತ್ರವನ್ನು ವಹಿಸುತ್ತೆ. ಆಸ್ತಿ ಖರೀದಿ ಮಾಡುವವರು ಮತ್ತು ಮಾರಾಟ ಮಾಡುವವರ ನಡುವಿನ ಕೆಲವು ವಹಿವಾಟಿನ ನಿಯಮಗಳನ್ನ ಇದರಲ್ಲಿ ಉಲ್ಲೇಖ ಮಾಡಲಾಗುತ್ತದೆ. ಅಷ್ಟೇ ಮಾತ್ರವಲ್ಲದೇ, ಇದರಲ್ಲಿ ಆಸ್ತಿ ಮಾರಾಟ ಮಾಡುವ ಬೆಲೆ ಮತ್ತು ಪಾವತಿ ನಿಯಮಗಳನ್ನು ಕೂಡ ಉಲ್ಲೇಖ ಮಾಡಲಾಗಿರುತ್ತದೆ.
• ಕಟ್ಟಡ ಅನುಮೋದನೆ ಯೋಜನೆ. ಯಾವುದೇ ಆಸ್ತಿಯಲ್ಲಿ ಮನೆ ನಿರ್ಮಿಸಲು ಮೊದಲು ಸ್ಥಳೀಯ ಪುರಸಭೆ ಅಥವಾ ಪ್ರಾಧಿಕಾರದಿಂದ ಅನುಮೋದನೆಯನ್ನು ಪಡೆಯಬೇಕು. ಇದಕ್ಕಾಗಿ ಈ ದಾಖಲೆಯು ಸಹ ಬಹಳ ಮುಖ್ಯವಾದ ದಾಖಲೆಯಾಗಿರುತ್ತದೆ.
• ಸ್ವಾಧೀನ ಪ್ರಮಾಣಪತ್ರ. ಸ್ವಾಧೀನ ಪ್ರಮಾಣಪತ್ರವು ಒಂದು ಕಾನೂನು ದಾಖಲೆಯಾಗಿದ್ದು, ಆಸ್ತಿಯ ಮಾಲೀಕತ್ವವನ್ನ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ವರ್ಗಾಯಿಸಲಾಗಿದೆ ಎಂದು ಸಾಬಿತು ಪಡಿಸುತ್ತದೆ. ಈ ಸ್ವಾಧೀನ ಪತ್ರವನ್ನ ಬಿಲ್ಡರ್ ಗಳು ತಯಾರಿಸುತ್ತಾರೆ. ಒಂದು ನಿರ್ದಿಷ್ಟ ದಿನಾಂಕದಿಂದ ಆಸ್ತಿ ಖರೀದಿದಾರರು ಆಸ್ತಿಯನ್ನ ಸ್ವಾಧೀನ ಪಡಿಸಿಕೊಳ್ಳಬಹುದು ಅಂತ ಇದರಲ್ಲಿ ಉಲ್ಲೇಖ ಮಾಡಲಾಗಿರುತ್ತದೆ.
• ಪೂರ್ಣಗೊಂಡ ಪ್ರಮಾಣಪತ್ರ. ಸ್ಥಳೀಯ ನಿಯಮಗಳ ಪ್ರಕಾರ ಕಟ್ಟಡವನ್ನು ನಿರ್ಮಿಸಲಾಗಿದೆ ಮತ್ತು ಪುರಸಭೆ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ತಪಾಸಣೆಯಲ್ಲಿ ಉತ್ತೀರ್ಣರಾಗಿದ್ದಾರೆ ಅಂತ ಸಾಬಿತು ಪಡಿಸುವ ಒಂದು ಪ್ರಮುಖವಾದ ದಾಖಲೆಯಾಗಿದೆ. ಯಾವುದೇ ಒಂದು ಪ್ರದೇಶದಲ್ಲಿ ನೀರು ವಿದ್ಯುತ್ ಮತ್ತು ಒಳಚರಂಡಿಗಳಂತಹ ಅಗತ್ಯ ಸೇವೆಗಳನ್ನು ಪಡೆಯಲು ಈ ಪ್ರಮಾಣಪತ್ರ ಬಹಳ ಅಗತ್ಯವಾಗಿರುತ್ತದೆ.
• ಖಾತೆ ಪ್ರಮಾಣಪತ್ರ. ಖಾತೆ ಪ್ರಮಾಣಪತ್ರ ಅನ್ನುವುದು ಒಂದು ಆದಾಯ ಪ್ರಮಾಣಪತ್ರವಾಗಿದ್ದು, ಇದು ಆಸ್ತಿಯ ವಿವರವನ್ನ ಒಳಗೊಂಡಿರುತ್ತದೆ. ಆಸ್ತಿಯ ಗಾತ್ರ, ಸ್ಥಳ ಮತ್ತು ಅದನ್ನ ನಿರ್ಮಿಸಲಾದ ಪ್ರದೇಶವನ್ನು ಕೂಡ ಇದರಲ್ಲಿ ಉಲ್ಲೇಖ ಮಾಡಲಾಗಿರುತ್ತದೆ. ಆಸ್ತಿಗೆ ತೆರಿಗೆ ಪಾವತಿ ಮಾಡಲು ಈ ದಾಖಲೆ ಪ್ರಮಾಣಪತ್ರ ಬಹಳ ಅಗತ್ಯವಾಗಿದೆ.
• ಹಂಚಿಕೆ ಪತ್ರ. ಒಬ್ಬ ವ್ಯಕ್ತಿ ಆಸ್ತಿಯನ್ನ ಖರೀದಿ ಮಾಡಲು ಆಸ್ತಿಯನ್ನ ಬುಕ್ ಮಾಡಿದ ನಂತರ ಆಸ್ತಿ ಡೆವಲಪರ್ ಅಥವಾ ಮಾರಾಟಗಾರರಿಂದ ಖರೀದಿದಾರರಿಗೆ ನೀಡಲಾಗುವ ಒಂದು ಕಾನೂನು ದಾಖಲೆಯಾಗಿದೆ. ಯಾವುದೇ ಒಂದು ನಿರ್ಮಾಣ ನಡೆಯುತ್ತಿರುವ ಆಸ್ತಿಯನ್ನ ಖರೀದಿ ಮಾಡುವಾಗ ಈ ದಾಖಲೆ ವಿಶೇಷವಾದ ಪಾತ್ರವನ್ನು ವಹಿಸುತ್ತದೆ.
• ಸಾಲ ಬಾಧ್ಯತೆ ಪ್ರಮಾಣಪತ್ರ. ಸಾಲ ಬಾಧ್ಯತೆ ಪ್ರಮಾಣಪತ್ರವು ಆಸ್ತಿಯ ಮೇಲೆ ಯಾವುದೇ ಹೊಣೆಗಾರಿಕೆ ಅಥವಾ ಕಾನೂನ ಪ್ರಕಾರ ಯಾವುದೇ ರೀತಿಯ ವಿವಾದಗಳು ಮತ್ತು ಬ್ಯಾಂಕ್ ಸಾಲಗಳು ಇಲ್ಲ ಅನ್ನುವುದನ್ನು ಖಚಿತಪಡಿಸುತ್ತದೆ.
• ನಿರಾಪೇಕ್ಷಣ ಪ್ರಮಾಣಪತ್ರ. ಈ ಪ್ರಮಾಣಪತ್ರವು ಆಸ್ತಿಯ ಮೇಲೆ ಯಾವುದೇ ಸಾಲಗಳು ಇಲ್ಲ ಅನ್ನುವುದನ್ನು ಸಾಬೀತು ಪಡಿಸುವ ದಾಖಲೆಯಾಗಿರುತ್ತದೆ.
• ಗುರುತು ಮತ್ತು ವಿಳಾಸದ ಪುರಾವೆ. ನೀವು ಆಸ್ತಿಯನ್ನು ಖರೀದಿ ಮಾಡುವ ಸಮಯದಲ್ಲಿ ಆಸ್ತಿ ಮಾರಾಟ ಮಾಡುವವರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ಪೋರ್ಟ್ ನಂತಹ ಮುಖ್ಯ ಐಡಿಗಳನ್ನ ಪರಿಶೀಲನೆ ಮಾಡುವುದು ಅತೀ ಕಡ್ಡಾಯವಾಗಿದೆ. ಮಾರಾಟಗಾರರ ವಿಳಾಸದ ಪುರಾವೆಯನ್ನು ತಿಳಿದುಕೊಳ್ಳುವುದು ಅತೀ ಕಡ್ಡಾಯವಾಗಿರುತ್ತದೆ.
• ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಮಾಣಪತ್ರ. ರಿಯಲ್ ಎಸ್ಟೇಟ್ ಡೆವಲಪರ್ಗಳು ತಮ್ಮ ಯೋಜನೆಗಳನ್ನ ರೇರಾ ಪ್ರಾಧಿಕಾರದಲ್ಲಿ ನೊಂದಾಯಿಸಿಕೊಳ್ಳಲು ನೀವು ಆಸ್ತಿಯನ್ನ ಖರೀದಿಸಿದರೆ, ಆಸ್ತಿಯನ್ನ ರೇರಾ ಪ್ರಾಧಿಕಾರ ನೊಂದಾಯಿಸಲಾಗಿದೆ ಅನ್ನುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಮಾಣಪತ್ರವನ್ನು ಪಡೆದುಕೊಳ್ಳುವುದು ಅತೀ ಕಡ್ಡಾಯವಾಗಿದೆ. ಪ್ರತಿ ರಾಜ್ಯಕ್ಕೂ ರೇರಾ ಯೋಜನೆಯ ವಿರುದ್ಧ ಸಲ್ಲಿಸಲಾದ ಯಾವುದೇ ದೂರಿನ ಬಗ್ಗೆ ಇದು ಮಾಹಿತಿಯನ್ನ ಒಳಗೊಂಡಿರುತ್ತದೆ.
ನೀವು ಕೂಡ ಯಾವುದಾದರೂ ಒಂದು ಆಸ್ತಿಯನ್ನ ಖರೀದಿ ಮಾಡುತ್ತಿದ್ದರೆ ನೀವು ಈ 12 ದಾಖಲೆಯನ್ನು ಪಡೆದುಕೊಳ್ಳುವುದು ಅತೀ ಕಡ್ಡಾಯವಾಗಿದೆ ಇಲ್ಲವಾದರೆ ನೀವು ನೋಂದಾವಣಿ ಮಾಡಿಕೊಂಡರು ಕೂಡ ಆಸ್ತಿಯ ಮಾಲೀಕತ್ವವನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ.