ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ : ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Spread the love

ಪ್ರಾಚೀನ ಇತಿಹಾಸದ ವಿಚಾರಗಳನ್ನು ಕೆದಕುವ ಮೂಲಕ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿವೃದ್ಧಿಯ ಕುರಿತು ಜನರ ಗಮನ ಬೇರೆಡೆಗೆ ಸೆಳೆಯರು ಯತ್ನಿಸುತ್ತಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಗುಜರಾತ್‌ನ ಸೋಮನಾಥ ಸ್ವಾಭಿಮಾನ ಪರ್ವ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಸೋಮನಾಥ ದೇವಸ್ಥಾನದ ಪುನರ್ ನಿರ್ಮಾಣದ ಇತಿಹಾಸವನ್ನು ಉಲ್ಲೇಖಿಸಿ ಮಾತನಾಡಿದ್ದರು.

ಮೋದಿಯವರ ಹೇಳಿಕೆ ವಿರುದ್ಧ ಪ್ರಿಯಾಂಕ್ ಖರ್ಗೆಯವರು ಕಿಡಿಕಾರಿದ್ದಾರೆ. ಮೋದಿಯವರ ಈ ಭಾಷಣ ಸರ್ಕಾರದ 11 ವರ್ಷದ ಕಾರ್ಯಕ್ಷಮತೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಯತ್ನವಾಗಿದೆಎಂದು ಟೀಕಿಸಿದ್ದಾರೆ.

“ಪ್ರಧಾನಿಯಿಂದ ನಮಗೆ ಬೇಕಿರುವುದು ಏನು? ಇತಿಹಾಸ ಪಾಠಗಳೇ? ದೇಶದ ಭವಿಷ್ಯದ ಬ್ಲೂಪ್ರಿಂಟ್ ಎಲ್ಲಿದೆ? 11 ವರ್ಷಗಳಿಂದ ಘೋಷಣೆಗಳೇ ಹೊರತು ಫಲಿತಾಂಶವೇ ಇಲ್ಲ. ‘ಮೇಕ್ ಇನ್ ಇಂಡಿಯಾ’, ‘ಸ್ಕಿಲ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಎಲ್ಲವೂ ವಿಫಲವಾಗಿದೆ ಎಂದು ಆರೋಪಿಸಿದರು.

“ಜನರಿಗೆ ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ. ಸರ್ಕಾರವನ್ನು ಟೀಕಿಸುವವರನ್ನೆಲ್ಲಾ ‘ರಾಷ್ಟ್ರ ವಿರೋಧಿ’ ಎಂದು ಮುದ್ರೆ ಹೊಡೆಯುವ ಪ್ರವೃತ್ತಿ ಸರಿಯಲ್ಲಎಂದು ಕಿಡಿಕಾರಿದರು.

ಇದೇ ವೇಳೆ ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕೇರಳದಲ್ಲಿ ಬಿಜೆಪಿಯ 2026ರ ಚುನಾವಣಾ ಅಭಿಯಾನಕ್ಕೆ ಚಾಲನೆ ನೀಡಿದ ಅಮಿತ್ ಶಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಆಡಳಿತದ ಬಗ್ಗೆ ಕರ್ನಾಟಕಕ್ಕೆ ಉಪದೇಶ ನೀಡುವ ಹಕ್ಕು ಕೇಂದ್ರಕ್ಕೆ ಇಲ್ಲ ಎಂದು ಹೇಳಿದರು.

ಜಿಎಸ್‌ಟಿ ಹಾಗೂ ಐಟಿ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಪ್ರಮುಖ ಕೊಡುಗೆ ನೀಡುತ್ತಿರುವ ರಾಜ್ಯವಾಗಿದ್ದು, “ಅರ್ಹ ಹಂಚಿಕೆ”ಯನ್ನು ಕೇಂದ್ರ ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರದಿಂದ ಸಮರ್ಪಕ ನೆರವು ಇಲ್ಲದೆ ರಾಜ್ಯವೇ ಉದ್ಯೋಗ ಸೃಷ್ಟಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮಾಡುತ್ತಿದೆ ಎಂದು ಅವರು ಹೇಳಿದರು.

WhatsApp Group Join Now

Spread the love

Leave a Reply