ಮರ್ಯಾದಾ ಹತ್ಯೆ ಮಾಡಿದ ತಂದೆಯನ್ನು ಜೈಲಿಗೆ ಹಾಕೋ ಅವಶ್ಯಕತೆ ಇಲ್ಲ. ಬದಲಿಗೆ ಶೂಟ್ ಮಾಡಬೇಕು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು. ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಪುತ್ರಿಯನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ.
ದಲಿತ ಹುಡುಗನ ಮದುವೆಯಾಗಿದ್ದಕ್ಕೆ ಈ ಮರ್ಯಾದೆ ಹತ್ಯೆ ನಡೆದಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುತಾಲಿಕ್ ವಿರೋಧ ವ್ಯಕ್ತಪಡಿಸಿದರು. ಮರ್ಯಾದೆ ಹತ್ಯೆಯನ್ನು ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಅಂಬೇಡ್ಕರ್ ಕನಸು ಇನ್ನು ನನಸಾಗಿಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಹೊಡೆದವರಿಗೆ ಹೃದಯವಿಲ್ಲ, ರಾಕ್ಷಸರು ಅವರು. ಸರ್ಕಾರ ಕೂಡಾ ಈ ಬಗ್ಗೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸ್ವಂತ ಮಗಳು ಗರ್ಭಿಣಿಯಾದ್ರು ತಂದೆ ಕೊಲೆ ಮಾಡಿದ್ದಾನೆ. ಗರ್ಭಿಣಿ ಹೊಟ್ಟೆಗೆ ಕೊಡಲಿ ಹಾಕಿರೋನು ರಾಕ್ಷಸ. ಅವರನ್ನು ಜೈಲಿಗೆ ಹಾಕೋ ಅವಶ್ಯಕತೆ ಇಲ್ಲ. ಬದಲಿಗೆ ಶೂಟ್ ಮಾಡಬೇಕು. ದಲಿತರು ಪ್ರೀತಿನೇ ಮಾಡಬಾರದಾ? ಇಂತಹ ಘಟನೆ ಎಂದಿಗೂ ಆಗದಂತಹ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸದರು.
ಹುಬ್ಬಳ್ಳಿ ಮರ್ಯಾದೆಗೇಡು ಹತ್ಯೆ ಕೇಸ್ – ಮತ್ತೆ ಮೂವರು ಆರೋಪಿಗಳು ಅರೆಸ್ಟ್.!:
ಹುಬ್ಬಳ್ಳಿ (Hubli) ತಾಲೂಕಿನ ಇನಾಂ ವೀರಾಪುರದಲ್ಲಿ ದಲಿತ ಯುವಕನನ್ನು ಮದುವೆಯಾದ ಕಾರಣಕ್ಕೆ ಗರ್ಭಿಣಿ ಮಗಳನ್ನೇ ಕೊಲೆ (Crime) ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಹುಬ್ಬಳ್ಳಿಯ ಇನಾಂ ವೀರಪುರದಲ್ಲಿ ವಿವೇಕಾನಂದ ಎಂಬ ದಲಿತ ಯುವಕನ್ನು ಮದುವೆಯಾಗಿದ್ದಳು, ಮದುವೆಗೆ ಮನೆಯವರ ವಿರೋಧದ ಹಿನ್ನಲೆ ಪ್ರಾಣಭಯದಿಂದಾಗಿ ಇಬ್ಬರೂ ಕೂಡ ಹಾವೇರಿಯಲ್ಲಿ ವಾಸವಿದ್ದರು.
ಇದಾಗಿ ಏಳು ತಿಂಗಳ ಬಳಿಕ ಎಲ್ಲವೂ ಸರಿಯಾಗಿರಬಹುದು ಎಂದು ತಿಳಿದು ಮಾನ್ಯ ಹಾಗು ವಿವೇಕಾನಂದ ತಮ್ಮ ಗ್ರಾಮಕ್ಕೆ ವಾಪಸ್ ಬಂದಿದ್ದಾರೆ. ಇದೇ ಸಮಯಕ್ಕೆ ಕಾಯುತ್ತಿದ್ದ ಮಾನ್ಯ ಕುಟುಂಬ ಮಗಳು ಬರುತ್ತಿದ್ದಂತೆ ಕಿರಿಕ್ ನಡೆದಿದೆ.
ಈ ಹಿನ್ನಲೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ರಾಜಿಸಂಧಾನ ಮಾಡಿಸಿ ಕಳುಹಿಸಿದ್ದರು. ವಾಪಸ್ ಮನೆಗೆ ಬರುತ್ತಿದ್ದಂತೆ ಸಿಟ್ಟಾದ ಮಾನ್ಯ ಕುಟುಂಬ ಸಿಟ್ಟಿನಲ್ಲಿ ವಿವೇಕನಂದನ ಕುಟುಂಬದ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.
ಮಗಳು ಅಂತರ್ಜಾತಿ ವಿವಾಹವಾಗಿದ್ದರಿಂದ ಸಿಟ್ಟಿನಲ್ಲಿದ್ದ ಮಾನ್ಯ ತಂದೆ ಹಾಗೂ ಕುಟುಂಬ ವಿವೇಕನಂದನ ಮನೆಗೆ ನುಗ್ಗಿ ತಂದೆ ತಾಯಿ, ಹಾಗೂ ಮಾನ್ಯ ಮೇಲೆ ಪೈಪ್ ಹಾಗು ಗುದ್ದಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಮೊದಲೇ ಏಳು ತಿಂಗಳು ಗರ್ಭಿಣಿಯ ಆದ್ದರಿಂದ ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವ ಉಂಟಾಗಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಾನ್ಯ ಮೃತಪಟ್ಟಿದ್ದಾರೆ.
ಸದ್ಯ ಈ ಪ್ರಕರಣ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನ್ಯ ತಂದೆ ಪ್ರಕಾಶ್ ಗೌಡ ಪಾಟೀಲ್, ವೀರನಗೌಡ ಪಾಟೀಲ್, ಅರುಣ್ ಗೌಡ ಪಾಟೀಲ್ ಎಂಬಾತರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು.
ದಲಿತರು ಪ್ರೀತಿನೇ ಮಾಡಬಾರದಾ? ಮರ್ಯಾದಾ ಹತ್ಯೆ ಮಾಡಿದ ರಾಕ್ಷಸ ತಂದೆಯನ್ನು ಶೂಟ್ ಮಾಡಿ : ಪ್ರಮೋದ್ ಮುತಾಲಿಕ್
WhatsApp Group
Join Now