ಜಾತಿಗಣತಿಗೆ ಮಾಹಿತಿ ನಿರಾಕರಿಸಿದ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿಗೆ, ಪ್ರದೀಪ್ ಈಶ್ವರ್ ಟೆಂಪಲ್ ಕೌಂಟರ್!

Spread the love

ರಾಜ್ಯದಲ್ಲಿ ಹಿಂದುಳಿದ ವರ್ಗದಿಂದ ಸಮೀಕ್ಷೆ ಮಾಡುತ್ತಾರೆಂದು ರಾಜ್ಯಸಭಾ ಸಂಸದೆ ಸುಧಾ ಮೂರ್ತಿ ಮಾಹಿತಿ ಕೊಡದೇ ವಾಪಸ್ ಕಳಿಸಿದ್ದಾರೆ. ಆದರೆ, ಇಲ್ಲಿ ಹಿಂದುಳಿದವರು ಸಮೀಕ್ಷೆ ಮಾಡುತ್ತಿದ್ದಾರೆಂದು ಮುಂದುವರೆದ, ಶ್ರೀಮಂತೆ ಸುಧಾ ಮೂರ್ತಿ ಅವರು ಮಾಹಿತಿ ಕೊಡಲು ನಿರಾಕರಿಸಿದ್ದಾರೆ.

ಆದರೆ, ಮುಂದುವರೆದವರು ದೇವಸ್ಥಾನದಲ್ಲಿ ಪೂಜೆ ಮಾಡಿದರೂ, ನಾವು ಹಿಂದುಳಿದವರು ಅಲ್ಲಿಗೆ ಹೋಗಿ ಕೈ ಮುಗಿತೇವೆ ಅಲ್ವಾ? ಇವರು ಮಾಡಿದ್ದು ಸರಿಯಾಗಿಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದರು.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾಮೂರ್ತಿ ಮೇಡಂ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಸಮೀಕ್ಷೆ ವೇಳೆ ಅವರು ನೀಡಿದ ಪ್ರತಿಕ್ರಿಯೆಯಿಂದ ಬೇಸರವಾಗಿದೆ. ನಾವು ಈ ಸಮೀಕ್ಷೆಯನ್ನು ಯಾವತ್ತೂ ಹಿಂದುಳಿದ ವರ್ಗದವರಿಗೆ ಎಂದು ಹೇಳಿಲ್ಲ. ಕರ್ನಾಟಕ ಜನರಿಗೆ ಮಾಡುತ್ತಿರುವ ಸಮೀಕ್ಷೆ ಎಂದು ಹೇಳಿದ್ದೇವೆ. ಸುಧಾ ಮೂರ್ತಿ ಅವರು ಕರ್ನಾಟಕದ ಭಾಗವಾಗಿದ್ದಾರೆ. ನೀವು ಹಿಂದುಳಿದ ವರ್ಗದವರು ಆಗದೇ, ಮುಂದುವರೆದವರು ಆಗಿದ್ದರೆ, ನೀವು ಶ್ರೀಮಂತರು, ನಿಮ್ಮ ಆಸ್ತಿ ಇಷ್ಟಿದೆ ಎಂಬುದನ್ನು ಮಾಹಿತಿ ಕೊಟ್ಟರೆ ನಮ್ಮ ಸರ್ಕಾರದಿಂದ ಮುಂದುವರೆದವರು ಇಷ್ಟು ಜನರಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನು ನೀವು ಉದದ್ಯೋಗಸ್ಥರಾ? ಉದ್ಯೋಗ ಕೊಟ್ಟಿದ್ದೀರಾ? ಎಂಬ ಮಾಹಿತಿ ಕಲೆಹಾಕಲಾಗುತ್ತದೆ ಎಂದರು.

ಹಿಂದುಳಿದವರು ದೇವಸ್ಥಾನಕ್ಕೆ ಹೋಗಲ್ಲ ಅಂದರೆ ಸರಿಯಾಗುತ್ತಾ?

ಸುಧಾಮೂರ್ತಿ ಅವರು ಬಿಜೆಪಿಯಲ್ಲಿ ರಾಜ್ಯಸಭಾ ಸಂಸದರಾದ ನಂತರ ಇಂತಹದ್ದಕ್ಕೆ ಮಾಹಿತಿ ಕೊಟ್ಟರೆ ತಪ್ಪೇನು. ಮುಂದುವರಿದವರು ಮಾಹಿತಿ ಕೊಡಬಾರದು ಎಂದೇನೂ ಹೇಳಿಲ್ಲ. ಹಿಂದುಳಿದ ವರ್ಗದವರು ಸಮೀಕ್ಷೆಗೆ ತೆರಳಿರುವುದು ಒಂದು ಏಜೆನ್ಸಿ ಅಷ್ಟೇ. ಮೇಡಂ ಅವರು ಹಿಂದುಳಿದ ವರ್ಗದವರು ಸಮೀಕ್ಷೆ ಮಾಡ್ತೀವಿ ಅಂತಾ, ಮುಂದುವರೆದವರು ಮಾಹಿತಿ ಕೊಡಲ್ಲ ಎಂದರೆ ಹೇಗೆ? ಮುಂದುವರೆದವರು ಪೂಜೆ ಮಾಡುತ್ತಾರೆ ಅಂತಾ ಹಿಂದುಳಿದವರು ಅಂತಹ ದೇವಸ್ಥಾನಕ್ಕೆ ಹೋಗಲ್ಲ ಎಂದರೆ ಆಗುತ್ತದೆಯಾ? ಇಲ್ಲಿ ಹಿಂದುಳಿದವರು ಮಾಡ್ತಾರಂತಾ ಮುಂದುವರೆದವರು ಅದನ್ನು ಸ್ವೀಕರಿಸುತ್ತಿಲ್ಲ. ಇದು ಏನು ಪಕ್ಷಪಾತ ಅಲ್ಲವಾ? ನೀವು ಶಿಕ್ಷಣವಂತರವಾರಿ ಮಾಹಿತಿ ಕೊಡಬೇಕಿತ್ತು ಎಂದು ಆಗ್ರಹಿಸಿದರು.

ನಿಮ್ಮ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟುವುದಕ್ಕೆ ಹಿಂದುಳಿದ ವರ್ಗದವರ ಯಾವುದೇ ಶ್ರಮವಿಲ್ಲವೇ? ನಿಮ್ಮ ಸಂಸ್ಥೆಯನ್ನು ಮುಂದುವರೆದ ಉದ್ಯೋಗಿಗಳನ್ನು ಮಾತ್ರ ಇಟ್ಟುಕೊಂಡು ಸಂಸ್ಥೆ ಕಟ್ಟಿದ್ದೀರಾ? ಅಲ್ಲಿ ಹಿಂದುಳಿದವರು ಇಲ್ಲವೇ? ನನ್ನದೊಂದು ಬೇಸಿಕ್ ಪ್ರಶ್ನೆ, ನೀವು ಮಾಹಿತಿ ಕೊಡುವುದಿಲ್ಲ ಎಂದತೆ ಏನು ಅರ್ಥ ಎಂದರು.

ಸುಧಾಮೂರ್ತಿ ಅವರು ಹೇಳಿದ್ದೇನು?

ರಾಜ್ಯ ಹಿಂದುಳಿದ ವರ್ಷಗಳ ಶಾಶ್ವತ ಆಯೋಗವು ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಮಾಡುತ್ತಿದೆ. ಬೆಂಗಳೂರಿನಲ್ಲಿಯೂ ಕೂಡ ಈ ಸಮೀಕ್ಷೆ ನಡೆಯುತ್ತಿದೆ. ಈ ವೇಳೆ ಸಮೀಕ್ಷಾ ಸಿಬ್ಬಂದಿ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾರಾಯಣಮೂರ್ತಿ ಅವರ ಪತ್ನಿ ಹಾಗೂ ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಅವರ ಮನೆಗೆ ಹೋದಾಗ ನಾವು ಹಿಂದುಳಿದ ವರ್ಗಗಳ ಇಲಾಖೆಯಿಂದ ಸಮೀಕ್ಷೆ ನಡೆಯುತ್ತಿದೆ. ಆದರೆ, ನಾವು ಹಿಂದುಳಿದ ವರ್ಗದವರಲ್ಲ ಎಂದು ಹೇಳಿದ್ದಾರೆ.

ಕೇಂದ್ರದಿಂದ ಅನುದಾನಕ್ಕಾಗಿ ಟ್ವೀಟ್ ಮಾಡಲಿ:

ಇನ್ನು ಕಿರಣ್ ಮಜುಂದಾರ್ ಶಾ ಅವರು, ರಸ್ತೆಗುಂಡಿಗಳ ಬಗ್ಗೆ ಮಾತನಾಡುತ್ತಾರೆ. ನಾವು ರಸ್ತೆಗುಂಡಿಗಳನ್ನು ಮುಚ್ಚುತ್ತೇವೆ. ಆದರೆ, ನಮ್ಮ ರಾಜ್ಯದ ಪರವಾಗಿ ಇವರು ಯಾವಾಗಲಾದರೂ ಮಾತನಾಡಿದ್ದಾರಾ? ಸೆಂಟ್ರಲ್‌ನಿಂದ ನಮ್ಮ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಹಣದ ಬಗ್ಗೆ ಮಾತನಾಡಿದ್ದಾರಾ? ಬೆಂಗಳೂರು ನೆಲ, ನೀರು, ಗಾಳಿ ಎಲ್ಲವೂ ಇವರಿಗೆ ಬೇಕು. ಆದರೆ, ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆ ಕಿರಣ್ ಮಜುಂದಾರ್ ಶಾ ಮೇಡಂ ಅವರು ಟ್ವೀಟ್ ಮಾಡಿ ಪ್ರಶ್ನೆ ಮಾಡಬೇಕು ಎಂದು ಆಗ್ರಹಿಸಿದರು.

WhatsApp Group Join Now

Spread the love

Leave a Reply