ನೀವು ಅಂಚೆ ಕಚೇರಿಯಲ್ಲಿ ಎಫ್ ಡಿ ಯಲ್ಲಿ ಹಣ ಹೂಡಿಕೆ ಮಾಡಿದ್ರೆ ಅಕ್ಟೋಬರ್ ಒಂದರಿಂದ ನಿಮಗೆ ಶುಭ ಸುದ್ಧಿ. ಹುಡಿಕೆದಾರರಿಗೆ ಹೆಚ್ಚಿನ ಲಾಭ ತರುವ ಉದ್ದೇಶದಿಂದ ಅಂಚೆ ಕಚೇರಿಗಳು ಎಫ್ ಡಿ ದರಗಳನ್ನ ಹೆಚ್ಚಿಸಿವೆ. ಈ ಹೊಸ ದರಗಳು ಅಕ್ಟೋಬರ್ ಒಂದರಿಂದ ಜಾರಿಗೆ ಬರಲಿದೆ. ಹೊಸ ಬಡ್ಡಿ ದರಗಳ ವಿವರ ಹೇಗಿದೆ ನೋಡೋಣ.
ಮೊದಲನೇಯದಾಗಿ ಒಂದು ವರ್ಷದ ಎಫ್ ಡಿಗೆ ಹಳೆಯ ದರ 5.5ಕ್ಕೆ ಇತ್ತು. ಇದೀಗ 5.7 ಕ್ಕೆ ಏರಿಕೆಯಾಗಿದೆ. ಅದೇ ರೀತಿ ಎರಡು ವರ್ಷದ ಎಫ್ಡಿ ಗೆ ಹಳೆಯ ದರ 5.8 ಇತ್ತು ಇದೀಗ 6% ಗೆ ಏರಿಕೆಯಾಗಿದೆ. ಅದೇ ರೀತಿ ಐದು ವರ್ಷದ ಎಫ್ಡಿ ಹಳೆಯ ದರ 6.7 ರಷ್ಟು ಇದ್ದು ಇದೀಗ 6.9 ಕ್ಕೆ ಏರಿಕೆಯಾಗಿದೆ. ಅದೇ ರೀತಿ ಹಿರಿಯ ನಾಗರಿಕರಿಗೆ ವಿಶೇಷ ಲಾಭ ಕೂಡ ಇರಲಿದೆ. ಈ ದರ ಹೆಚ್ಚಳವು ಹಿರಿಯ ನಾಗರಿಕರಿಗೆ ಇನ್ನಷ್ಟು ಲಾಭ ತರಲಿದ್ದು, ಅವರು ಸಾಮಾನ್ಯ ಬಡ್ಡಿ ದರಕ್ಕಿಂತ ಹೆಚ್ಚುವರಿ 5% ಬಡ್ಡಿಯನ್ನ ಪಡೆಯುತ್ತಾರೆ.
ಇದರಿಂದ ಅವರ ಹೂಡಿಕೆಯ ಮೇಲೆ ಹೆಚ್ಚಿನ ಆದಾಯವನ್ನು ಕೂಡ ನಿರೀಕ್ಷೆ ಮಾಡಬಹುದು. ಉದಾಹರಣೆಗೆ 2 ಲಕ್ಷ ಹೂಡಿಕೆ ಮಾಡಿದ ಹಿರಿಯ ನಾಗರಿಕರು ಐದು ವರ್ಷಗಳ ನಂತರ 6.9 ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನ ಪಡೆಯಬಹುದು. ಹಾಗಾಗಿ ಈಗಾಗಲೇ ಎಂಸಿ ಕಚೇರಿಯಲ್ಲಿ ಎಫ್ ಡಿ ಹೊಂದಿರುವವರು ಹೊಸ ದರಗಳ ಲಾಭ ಪಡೆಯಲು ತಮ್ಮ ಹೂಡಿಕೆಯನ್ನು ನವೀಕರಣ ಮಾಡಬಹುದು. ಅಥವಾ ಹೊಸದಾಗಿ ಹೂಡಿಕೆ ಮಾಡಲು ಪರಿಗಣಿಸಬಹುದು. ಹೆಚ್ಚಿನ ವಿವರಗಳಿಗಾಗಿ ಮತ್ತು ನಿಖರ ಮಾಹಿತಿಗಳಿಗಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡೋದು ಉತ್ತಮ.