PM Vishwakarma : ಪಿಎಂ ವಿಶ್ವಕರ್ಮ ಯೋಜನೆಯಡಿಯಲ್ಲಿ ಹೇಗೆ ಸಾಲ ಪಡೆಯುವುದು.? ಬೇಕಾಗುವ ದಾಖಲೆಗಳೇನು.?

PM Vishwakarma : ನಮಸ್ಕಾರ ಸ್ನೇಹಿತರೇ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯೂ ಒಂದು. ಈ ಯೋಜನೆಯಡಿ ಸಾಲ ಸೌಲಭ್ಯ ಪಡೆಯುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಬಡ ಮತ್ತು ಮಧ್ಯಮ ವರ್ಗದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕುಶಲ ಕರ್ಮಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಕೇಂದ್ರ ಸರ್ಕಾರ ಕಳೆದ ವರ್ಷ ಈ ಯೋಜನೆಗೆ ಚಾಲನೆ ನೀಡಿತ್ತು. ಈ ಯೋಜನೆಯಡಿಯಲ್ಲಿ 5% ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ.

Bima Sakhi Scheme : ಬಿಮಾ ಸಖಿ ಯೋಜನೆಗೆ ಪಿಎಂ ಮೋದಿ ಚಾಲನೆ – ಮಹಿಳೆಯರಿಗೆ ತಿಂಗಳಿಗೆ ₹7,000/- ಲಭ್ಯ.! ನೀವೂ ಹೀಗೆ ಅರ್ಜಿ ಸಲ್ಲಿಸಿ!

ಯಾರೆಲ್ಲಾ ಅರ್ಹರು.?

ಬಡಿಗ, ದೋಣಿ ತಯಾರಕರು, ಕುಂಬಾರರು, ಮೀನಿನ ಬಲೆ ತಯಾರಕರು, ಅಕ್ಕಸಾಲಿಗರು, ಶಿಲ್ಪಿಗಳು, ಕ್ಷೌರಿಕರು, ರಾಜಮೇಸ್ತ್ರಿಗಳು ಸೇರಿದಂತೆ 18 ಬಗೆಯ ಕುಶಲ ಕರ್ಮಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸ್ವಂತ ಉದ್ಯೋಗ ಅಥವಾ ಉದ್ದಿಮೆ ಸ್ಥಾಪಿಸಲು ಈ ಯೋಜನೆ ಸಹಾಯ ಮಾಡುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ.?

ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ https://pmvishwakarma.gov.in/ ಗೆ ಹೋಗಿ. ಇಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿ ಕೇಳುವ ಮಾಹಿತಿಗಳನ್ನು ಭರ್ತಿ ಮಾಡಬೇಕಾಗುತ್ತದೆ.

WhatsApp Group Join Now

ಇದನ್ನೂ ಕೂಡ ಓದಿ : Agriculture Loan : ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ ಸಾಲ…! ರೈತರು ಕೂಡಲೇ ಅರ್ಜಿ ಸಲ್ಲಿಸಿ – ಹೇಗೆ ಸಾಲ ಪಡೆಯುವುದು.?

ಯಾವೆಲ್ಲಾ ದಾಖಲೆ ಬೇಕು.?

• ಆಧಾರ್ ಕಾರ್ಡ್
• ಪ್ಯಾನ್ ಕಾರ್ಡ್
• ಆದಾಯ ಪ್ರಮಾಣ ಪತ್ರ
• ಗುರುತಿನ ಚೀಟಿ
• ಬ್ಯಾಂಕ್ ಪಾಸ್ ಬುಕ್ ವಿವರ
• ವಾಸಸ್ಥಳ ದೃಢೀಕರಣ ಪತ್ರಗಳನ್ನು ಹೊಂದಿರಬೇಕು.

ಭಾರತೀಯ ಪ್ರಜೆಯಾಗಿ 18 ರಿಂದ 50 ವರ್ಷದೊಳಗಿನ ಕುಶಲ ಕರ್ಮಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಯೋಜನೆ ಜಾರಿಗೆ ತರಲಾಗಿದೆ.

Leave a Reply