PM Kisan Samman Nidhi : ಪಿಎಂ ಕಿಸಾನ್ 18ನೇ ಕಂತಿನ ಹಣ ಯಾವಾಗ ಬಿಡುಗಡೆ.? ಬೇಗ ಈ ಕೆಲಸ ಮಾಡಿಕೊಳ್ಳಿ.

PM Kisan Samman Nidhi : ನಮಸ್ಕಾರ ಸ್ನೇಹಿತರೇ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ಸರ್ಕಾರವು ದೇಶದ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿದೆ. ಸರ್ಕಾರವು ವಾರ್ಷಿಕವಾಗಿ ರೈತರಿಗೆ ₹6,000/- ರೂಪಾಯಿಗಳನ್ನು ನೀಡುತ್ತಿದೆ. ಮತ್ತು ಈ ಮೊತ್ತವು ಅವರ ಖಾತೆಗೆ ತಲಾ ₹2,000/- ರೂಪಾಯಿಯಂತೆ ಮೂರು ಕಂತುಗಳಲ್ಲಿ ತಲುಪುತ್ತದೆ.

ಇದನ್ನೂ ಕೂಡ ಓದಿ : Dhanashri Scheme : ಧನಶ್ರೀ ಯೋಜನೆಯ ಫಲಾನುಭವಿಗಳಿಗೆ ₹30,000/- ಸಹಾಯಧನ.! ಬೇಕಾಗುವ ದಾಖಲೆಗಳೇನು.?

ಇದುವರೆಗೆ ಸರಕಾರ ಈ ಯೋಜನೆಯ ಮೂಲಕ 17ನೇ ಕಂತು ಬಿಡುಗಡೆ ಮಾಡಿದೆ. ರೈತ ಈಗ 18ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Samman Nidhi) ಒಳಗೊಂಡಿರುವ ರೈತರು ಇ-ಕೆವೈಸಿಯನ್ನು ಇನ್ನೂ ಮಾಡದಿದ್ದರೆ, ಈ ಕೆಲಸವನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ ಇವರುಗಳಿಗೆ 18ನೇ ಕಂತಿನ ಹಣವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಕೇಂದ್ರ ಸರ್ಕಾರ ಜೂನ್‌ನಲ್ಲಿ ಪಿಎಂ ಕಿಸಾನ್‌ನ 17ನೇ ಕಂತು ಬಿಡುಗಡೆ ಮಾಡಿತ್ತು. ಈ ಮೂಲಕ 9.3 ಕೋಟಿ ರೈತರಿಗೆ ಅನುಕೂಲವಾಗಿದ್ದು, ಸುಮಾರು 20 ಸಾವಿರ ಕೋಟಿ ರೂ. ಬಿಡುಗಡೆ ಮಾಡಿತ್ತು. ಜೂನ್‌ ಬಳಿಕ ಅಕ್ಟೋಬರ್‌ನಲ್ಲಿ 4 ತಿಂಗಳುಗಳು ಕಳೆಯುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪಿಎಂ ಕಿಸಾನ್‌ನ 18ನೇ ಕಂತು ಅಕ್ಟೋಬರ್‌ನಲ್ಲಿ ಬರಬಹುದು ಎನ್ನಲಾಗಿದೆ. ಪಿಎಂ ಕಿಸಾನ್ ಪ್ರಯೋಜನಗಳನ್ನು ಪಡೆಯಲು, ಭೂ ದಾಖಲೆಗಳ ಪ್ರಕಾರ ರೈತರ ಭೂಮಿಯ ಮಾಲೀಕತ್ವದ ಹಕ್ಕುಗಳು ಸ್ಪಷ್ಟವಾಗಿರಬೇಕು.

ಇದನ್ನೂ ಕೂಡ ಓದಿ : Micro Credit Scheme : ಕೇಂದ್ರ ಸರ್ಕಾರದಿಂದ ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳೆಯರಿಗಾಗಿ ಸಿಗಲಿದೆ ಸಾಲ ಹಾಗು ಸಹಾಯಧನ.!

ಓಟಿಪಿ (OTP) ಆಧಾರಿತ ಈ-ಕೆವೈಸಿ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಲಭ್ಯವಿದೆ. ಅಥವಾ ರೈತರು ಬಯೋಮೆಟ್ರಿಕ್ ಆಧಾರಿತ ಈ-ಕೆವೈಸಿಗಾಗಿ ಹತ್ತಿರದ ಸಿಎಸ್ ಸಿ (CSC) ಕೇಂದ್ರಗಳನ್ನು ಸಂಪರ್ಕಿಸಬಹುದು. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi) ಕಂತು ಹಣವನ್ನು ಸ್ವೀಕರಿಸದಿದ್ದರೆ, ನೀವು pmkisan-ict@gov.in ಅನ್ನು ಸಂಪರ್ಕಿಸಬಹುದು.

ಈ ನಾಲ್ಕು ವಿಷಯಗಳ ಬಗ್ಗೆ ಗಮನವಿರಲಿ :-

• ಭೂ ದಾಖಲೆಗಳ ಪ್ರಕಾರ ರೈತರ ಭೂ ಮಾಲೀಕತ್ವದ ಹಕ್ಕುಗಳು ಸ್ಪಷ್ಟವಾಗಿರಬೇಕು.
• ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ರೈತರು ಇ-ಕೆವೈಸಿ ಹೊಂದಿರುವುದು ಅವಶ್ಯಕ.
• ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಅವಶ್ಯಕ.
• ನಿಮ್ಮ ಬ್ಯಾಂಕ್ ಖಾತೆಯನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಗೆ ಲಿಂಕ್ ಮಾಡಬೇಕು.

ಈ ಅಧೀಕೃತ ವೆಬ್ ಸೈಟ್ ಗೆ ಭೇಟಿ ನೀಡಿ :- ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ಇದನ್ನೂ ಕೂಡ ಓದಿ : Tractor Scheme : ರೈತರಿಗೆ ಸಿಹಿಸುದ್ಧಿ –  ಮಿನಿ ಟ್ರ್ಯಾಕ್ಟರ್ ಸೇರಿದಂತೆ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ – ಬೇಕಾಗುವ ದಾಖಲೆಗಳೇನು.?

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಫಲಾನುಭವಿಗಳ ಪಟ್ಟಿ ನೋಡಬಹುದು. ಈ ವೇಳೆ ಪಲಾನುಭವಿಗಳ ಪಟ್ಟಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಬಳಿಕ ಡ್ರಾಪ್-ಡೌನ್‌ನಿಂದ ಆಯ್ದ ರಾಜ್ಯ, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಹಳ್ಳಿಯಂತಹ ವಿವರಗಳನ್ನು ಆಯ್ಕೆ ಮಾಡಿ. ಗೆಟ್ ರಿಪೋರ್ಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ ಫಲಾನುಭವಿಗಳ ಪಟ್ಟಿಯ ವಿವರ ಸಿಗುತ್ತದೆ. ಈ ಮಾಹಿತಿಗಳನ್ನು ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಿಯೂ ತಿಳಿದುಕೊಳ್ಳಬಹುದು.

ಸಹಾಯವಾಣಿ ಸಂಖ್ಯೆ- 155261 ಹಾಗು 011-24300606

Leave a Reply