PM Kisan Samman Nidhi : ನಮಸ್ಕಾರ ಸ್ನೇಹಿತರೇ, ಎಲ್ಲ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ದೊಡ್ಡ ಗುಡ್‌ನ್ಯೂಸ್.! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹದಿನೇಳನೇ ಕಂತಿನ ಹಣ ಬಿಡುಗಡೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ವರ್ಷಕ್ಕೆ 6,000/- ಹಣ ಒದಗಿಸುವ ಯೋಜನೆಯನ್ನ ಜಾರಿಗೊಳಿಸಿದ್ದು, ಇಲ್ಲಿಯವರೆಗೂ ಎಲ್ಲ ರೈತರ ಖಾತೆಗಳಿಗೆ ಹದಿನಾರನೇ ಕಂತಿನ ಹಣ ಜಮಾ ಆಗಿದೆ. ಆದರೆ ಎಲ್ಲ ರೈತರು ಹದಿನೇಳನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದು, ಈ ಹಣ ಈಗಾಗಲೇ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇಷ್ಟಕ್ಕೂ ಹದಿನೇಳನೇ ಕಂತಿನ ಹಣ ರೈತರ ಖಾತೆಗಳಿಗೆ ಯಾವ ದಿನದಂದು ಜಮಾ ಆಗುತ್ತೆ. ರೈತರ ಖಾತೆಗೆ ಈ ಬಾರಿ ಹಣ ಬರುವುದಕ್ಕೆ ಎಲ್ಲ ರೈತರು ಕಡ್ಡಾಯವಾಗಿ ಮಾಡಲೇಬೇಕಾಗಿರುವ ಕೆಲಸ ಏನು? ಈ ಎಲ್ಲ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : ನಿಮಗೂ ಉಚಿತ ಮನೆ ಬೇಕಾ.? ಹೇಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಉಚಿತ ಮನೆಗಾಗಿ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳು.?
ರೈತರಿಗೆ ಸಹಾಯ ಮಾಡಲು ಮತ್ತು ಅವರ ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನ ಜಾರಿಗೆ ತಂದಿದೆ. ಅದೇ ರೀತಿ ರಾಜ್ಯ ಸರಕಾರ ಕೂಡ ಹಲವಾರು ಯೋಜನೆಗಳನ್ನ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ನೀಡುತ್ತಿರುವಂತಹ ಪಿಎಂ ಕಿಸಾನ್ ಯೋಜನೆ ಅಡಿ ನೋಂದಣಿಯಾದ ರೈತರಿಗೆ ಪ್ರತಿ ನಾಲ್ಕು ತಿಂಗಳಿಗೆ 2000/- ರೂ. ಇಲ್ಲಿಯವರೆಗೆ ರೈತರಿಗೆ ಸಾಕಷ್ಟು ಲಾಭವಾಗಿದೆ. ಈ ಮೂಲಕ ರೈತರು ಹಲವು ಯೋಜನೆಗಳಲ್ಲಿ ಹೆಸರು ನೋಂದಾಯಿಸಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದರು.
ಇನ್ನು ಹದಿನಾರನೇ ಕಂತಿನ ಹಣ ಈಗಾಗಲೇ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಅಂದ್ರೆ ಹದಿನಾರನೇ ಕಂತಿನ ಹಣವನ್ನು ನೋಂದಾಯಿತ ರೈತರ ಖಾತೆಗೆ ಜಮಾ ಮಾಡಲಾಗಿದೆ. ಹದಿನೇಳನೇ ಕಂತಿನ ಹಣ ಯಾವಾಗ ಬರುತ್ತೆ ಎಂಬುದು ಎಲ್ಲರ ಪ್ರಶ್ನೆ. ದಾಖಲಾತಿಯೊಂದಿಗೆ ಆಧಾರ್ ಕಾರ್ಡ್ ನೋಂದಣಿ ಮಾಡದೆ ಇರುವುದು ಹಾಗು ತಾವು ನೀಡಿದ ದಾಖಲೆಗಳೊಂದಿಗೆ ಆಧಾರ್ ಕಾರ್ಡ್ ಸೀಡಿಂಗ್ ಮಾಡದಿರುವ ಕಾರಣದಿಂದ ಕೆಲವರಿಗೆ ಈ 16 ಕಂತುಗಳು ಬಂದಿಲ್ಲ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ನಲ್ಲಿ ತಮ್ಮ ದಾಖಲೆಗಳನ್ನು ನವೀಕರಿಸಲಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರವು ಅಂತಹ ವ್ಯಕ್ತಿಗಳಿಗೆ ಸೂಚನೆ ನೀಡಿದೆ.
ಇದನ್ನೂ ಕೂಡ ಓದಿ : PM Awas Yojana : ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಿಗುತ್ತಿದೆ ₹1.5 ಲಕ್ಷ ಸಹಾಯಧನ.! ಕೂಡಲೇ ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಿ.
ಆಧಾರ್ ಕಾರ್ಡ್ ಸೀಡಿಂಗ್ ಮಾಡಿದ್ರೆ ಕೆಲವೇ ದಿನಗಳಲ್ಲಿ ಅವರಿಗೆ ಹದಿನಾರನೇ ಕಂತು ಪಾವತಿ ಆಗುತ್ತೆ. ಕೆಲ ತಾಂತ್ರಿಕ ದೋಷಗಳಿಂದ ಕೆಲವರಿಗೆ ಈ ಹದಿನಾರನೇ ಕಂತಿನ ಹಣ ಬಂದಿಲ್ಲ ಅಂತ ಗೊತ್ತಾಗಿದೆ. ಈ ಎಲ್ಲ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಹಣ ಜಮಾ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದಲ್ಲದೆ ಪಿಎಂ ಕಿಸಾನ್ ಯೋಜನೆ ಅಡಿ ನೋಂದಣಿಯಾದ ರೈತರಿಗೆ ತಮ್ಮ ಈ-ಕೆವೈಸಿ ಖಾತೆಯನ್ನ ನವೀಕರಿಸಲು ತಿಳಿಸಲಾಗಿದೆ. ಇದು ಕಡ್ಡಾಯವೂ ಆಗಿದೆ. ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳ ಒಳಗೆ ಎಲ್ಲರ ಖಾತೆಗೆ ಹದಿನೇಳನೇ ಕಂತು ಜಮಾ ಮಾಡುವುದಾಗಿ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- ಕೊಲೆಸ್ಟ್ರಾಲ್ ಸಮಸ್ಯೆಯೇ? ಔಷಧಿ ಇಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸಲು ಇಲ್ಲಿವೆ 8 ನೈಸರ್ಗಿಕ ಸೂತ್ರ
- ಕೊಲೆ ಮಾಡಿದ್ದೂ ಅವನೇ, ಪೊಲೀಸರಿಗೆ ಹೇಳಿದ್ದೂ ಅವನೇ! ಆ ರಾತ್ರಿ ತೋಟದ ಮನೆಯಲ್ಲಿ ನಡೆದಿದ್ದೇನು ಗೊತ್ತಾ?
- ‘SBI’ ಗ್ರಾಹಕರಿಗೆ ಬಿಗ್ ಶಾಕ್ : ATM ವಿತ್ ಡ್ರಾ ಮತ್ತು ‘ಬ್ಯಾಲೆನ್ಸ್ ಚೆಕ್’ ಶುಲ್ಕ ಹೆಚ್ಚಳ.!
- Arecanut Price : ಇಂದಿನ ಅಡಿಕೆ ಧಾರಣೆ – 17 ಜನವರಿ 2026 – ಇವತ್ತು ಯಾವ್ಯಾವ ಅಡಿಕೆಯ ಧಾರಣೆ ಎಷ್ಟಿದೆ ಗೊತ್ತಾ.?
- ನಿಮ್ಮ ಖಾಸಗಿ ಫೋಟೋ-ವಿಡಿಯೋ ವೈರಲ್ ಆದ್ರೆ ಭಯ ಪಡಬೇಡಿ, ತಕ್ಷಣ ಇದೊಂದು ಕೆಲಸ ಮಾಡಿ
- ಹಲ್ಲು ಹುಳುಕು ನಿವಾರಣೆಗೆ ಇಲ್ಲಿವೆ ಸರಳ ಮನೆ ಮದ್ದುಗಳು
- ಮದುವೆ ಸಂಭ್ರಮದಲ್ಲಿದ್ದ ತಮ್ಮನಿಗೆ ಚಟ್ಟ ಕಟ್ಟಿದ ಅಣ್ಣ : ಹಸೆಮಣೆ ಏರಬೇಕಿದ್ದವ ಸೇರಿದ್ದು ಸ್ಮಶಾನಕ್ಕೆ
- Horoscope Today : 17 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಗಂಡನ ಮೇಲಿನ ಕೋಪಕ್ಕೆ 4 ವರ್ಷದ ಮಗಳನ್ನೇ ಸಜೀವ ದಹನ ಮಾಡಲು ಮುಂದಾದ ತಾಯಿ ; ತಾನೂ ಬೆಂಕಿ ಹಚ್ಚಿಕೊಂಡು ಸಾವು!
- ಪುರುಷರಲ್ಲಿ ಪದೇ ಪದೇ ಮೂತ್ರ ವಿಸರ್ಜನೆ.. ಪ್ರಾಸ್ಟೇಟ್ ಕ್ಯಾನ್ಸರ್ ಮೊದಲು ಕಾಣಿಸಿಕೊಳ್ಳುವ ಲಕ್ಷಣಗಳಿವು
- ಒಂದೇ ಸ್ಥಳದಲ್ಲಿ ಕೂತ್ರೆ ದೇಹಕ್ಕೆ ಒಕ್ಕರಿಸುತ್ತೆ ಈ ಮಾರಕ ಕಾಯಿಲೆ.! ಕೂತರೂ ಕೂಡ ಪ್ರಾಣಕ್ಕೆ ಕಂಟಕ..!
- ಪತಿ ಮಾರಾಟ ಮಾಡಿದ ಆಸ್ತಿಯಿಂದ ಪತ್ನಿಗೆ ‘ಜೀವನಾಂಶ’ ಪಡೆಯುವ ಹಕ್ಕಿದೆ : ಹೈಕೋರ್ಟ್ ಮಹತ್ವದ ತೀರ್ಪು
- ಹಾಲಾಯ್ತು ಹಾಲಾಹಾಲ – ರಾಸಾಯನಿಕ ಬಳಸಿ ನಕಲಿ ಹಾಲು ತಯಾರಿಕೆ ಮಾಡ್ತಿದ್ದ ಖದೀಮರು ಅರೆಸ್ಟ್!
- ಮೊಬೈಲ್ ಬಳಕೆದಾರರೇ ಎಚ್ಚರ : ಕುತ್ತಿಗೆಯಲ್ಲೇ ‘ಬ್ಲೂಟೂತ್ ನೆಕ್ ಬ್ಯಾಂಡ್’ ಸ್ಪೋಟಗೊಂಡು ಯುವಕ ಸಾವು.!
- ಇವೇ ನೋಡಿ ಬ್ರೈನ್ ಸ್ಟ್ರೋಕ್ನ ಆರಂಭಿಕ ಲಕ್ಷಣಗಳು : ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಬೇಡ…
- ರೈತರಿಗೆ ಗುಡ್ ನ್ಯೂಸ್ : 20 ಕುರಿ 1 ಟಗರು ಸಾಕಲು ಸರ್ಕಾರದಿಂದ ಸಿಗಲಿದೆ ₹43,750 ಸಹಾಯಧನ! ಇಂದೇ ಅರ್ಜಿ ಹಾಕಿ
- Horoscope Today : 16 ಜನವರಿ 2026 ರಂದು ಯಾವ ರಾಶಿಗೆ ಶುಭ.? ಯಾವ ರಾಶಿಗೆ ಅಶುಭ.? : 12 ರಾಶಿ ಭವಿಷ್ಯ ಇಲ್ಲಿದೆ
- ಕೋಲಾರದ ನರ್ಸ್ ಸುಜಾತಾ ಮರ್ಡರ್ : 2 ಮಕ್ಕಳ ತಂದೆಯನ್ನು ಲವ್ ಮಾಡಿ ರಸ್ತೆ ಮಧ್ಯದಲ್ಲೇ ಹೆಣವಾದಳು.!
- ಪತ್ನಿಗೆ ವಂಚಿಸಿ ಟೆಕ್ಕಿ ಪತಿ ಅಕ್ರಮ ಸಂಬಂಧ : ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗಲೇ ಪೊಲೀಸರಿಗೆ ಸಿಕ್ಕಿಬಿದ್ದ!
- ಶಬರಿಮಲೆಗೆ ಹೋಗಿ ಬಂದ, ಬಳಿಕ ಪತ್ನಿ ಕೊಂದ : ಸಿನಿಮಾ ಸ್ಟೈಲ್ನಲ್ಲಿ ನಡೀತು ಹತ್ಯೆ!




















1 thought on “PM Kisan Samman Nidhi : ಪಿಎಂ ಕಿಸಾನ್ 17ನೇ ತಂತಿನ ಹಣ ಬಿಡುಗಡೆ | ಇಂದು ಮಧ್ಯಾಹ್ನ 3 ಗಂಟೆಗೆ ಇವರಿಗೆ ಮಾತ್ರ | ಈ ಕೆಲಸ ಕಡ್ಡಾಯ”