PM Fasal Bima Yojana : ನಮಸ್ಕಾರ ಸ್ನೇಹಿತರೇ, ಬರಪೀಡಿತ ಅಥವಾ ಬೆಳೆ ಹಾನಿ ಪರಿಹಾರವಾಗಿ ಅರ್ಹ ಫಲಾನುಭವಿ ರೈತರಿಗೆ ಯಾವೆಲ್ಲ ಕಾರಣಕ್ಕೆ ಬೆಳೆ ನಷ್ಟವಾದರೆ ಬೆಳೆ ವಿಮೆ ಪರಿಹಾರ ದೊರೆಯುತ್ತದೆ.? ಹಾಗು ಮುಂಗಾರು ಬೆಳೆ ವಿಮೆ ಕಂತು ಪಾವತಿಸುವುದು ಹೇಗೆ.? ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಪಿಎಂ ಫಸಲ್ ಬಿಮಾ ಯೋಜನೆಯಡಿ (PM Fasal Bima Yojana) 2024-25 ಸಾಲಿನ ಮುಂಗಾರು ಬೆಳೆಗಳ ವಿಮಾ ನೋಂದಣಿಗೆ ಅರ್ಹ ರೈತರಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 36 ಅಧಿಸೂಚಿತ ಬೆಳೆಗಳು ಈ ವಿಮಾ ಯೋಜನೆಯ ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಕೂಡ ಓದಿ : Sukanya Samruddhi Yojana : ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗು ಪಡೆಯಿರಿ ಲಕ್ಷ ಲಕ್ಷ ರೂಪಾಯಿಗಳು! ಹೇಗೆ ಅರ್ಜಿ ಸಲ್ಲಿಸುವುದು.?
ಬೆಳೆವಾರು ನಿಗದಿಪಡಿಸಿದ ವಿಮಾ ಮೊತ್ತವನ್ನು ರೈತರು ಮುಂಗಾರು ಹಂಗಾಮಿನಲ್ಲಿ ಶೇ.2ರಷ್ಟು (ತೋಟಗಾರಿಕೆ ಬೆಳೆಗಳಿಗೆ ಶೇ.5ರಷ್ಟು) ಮೊತ್ತವನ್ನು ಮಾತ್ರ ಪಾವತಿಸಬೇಕು. ಪಿಎಂ ಫಸಲ್ ಬಿಮಾ ಯೋಜನೆಯಡಿ (PM Fasal Bima Yojana) ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದರೆ ಪ್ರತಿ ಹೆಕ್ಟೇರ್‌ಗೆ ₹29,000 ಯಿಂದ ₹86,000 ವರೆಗೂ ಆಯಾ ಬೆಳೆಗೆ ತಕ್ಕಂತೆ ಬೆಳೆನಷ್ಟ ಪರಿಹಾರ ಪಡೆಯಬಹುದಾಗಿದೆ. ತೋಟಗಾರಿಕೆ ಬೆಳೆಗಳಿಗೆ ಇನ್ನೂ ಹೆಚ್ಚಿನ ಬೆಳೆಹಾನಿ ವಿಮಾ ಪರಿಹಾರ ಸಿಗುತ್ತದೆ.
ಈ ಯೋಜನೆಯಿಂದ ಯಾವೆಲ್ಲ ಬೆಳೆ ನಷ್ಟಕ್ಕೆ ಪರಿಹಾರ ಸಿಗುತ್ತದೆ.?
ಪಿಎಂ ಫಸಲ್ ಬಿಮಾ ಯೋಜನೆಯಡಿ (PM Fasal Bima Yojana) ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸಲಾಗುತ್ತಿದೆ. ಹಾಲಿ ಇರುವ ಬೆಳೆಗಳಿಗೆ ಬಿತ್ತನೆಯಿಂದ ಕಟಾವಿನ ಹಂತದವರೆಗೆ ಈ ವಿಮಾ ರಕ್ಷಣೆ ಇರುತ್ತದೆ. ವಿಮೆ ಮಾಡಿದ ಕ್ಷೇತ್ರದಲ್ಲಿ ಮಳೆ ಅಭಾವದಿಂದ ಬಿತ್ತನೆ ಅಥವಾ ನಾಟಿ ವಿಫಲವಾದಲ್ಲಿ ಪಿಎಂ ಫಸಲ್ ಬಿಮಾ ಯೋಜನೆಯಡಿ (PM Fasal Bima Yojana) ವಿಮಾ ರಕ್ಷಣೆ ಒದಗಿಸಲಿದೆ.
ಇದನ್ನೂ ಕೂಡ ಓದಿ : Gruhalakshmi Payment : ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಬಿಡುಗಡೆ.! ಹೊಸ ಅಪ್ಡೇಟ್ ಏನು.?
ಬರ, ಶುಷ್ಕ ಪರಿಸ್ಥಿತಿ, ನೆರೆ, ಪ್ರವಾಹಗಳಿಂದ ಬೆಳೆ ಮುಳಗಡೆ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡ, ಭೂಕುಸಿತ, ಬಿರುಗಾಳಿ, ಚಂಡಮಾರುತ ಸಹಿತ ಮಳೆ, ಅಕಾಲಿಕ ಮಳೆಯಿಂದ ನಷ್ಟ ಸಂಭವಿಸಿದಲ್ಲಿ ಸಮಗ್ರ ವಿಮಾ ಭದ್ರತೆಯನ್ನು ಒದಗಿಸುವುದು ಹಾಗೂ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ ಅಂದರೆ ಸುಮಾರು 14 ದಿನಗಳವರೆಗೆ ಆಲಿಕಲ್ಲು ಮಳೆ, ಚಂಡಮಾರುತ ಸಹಿತ ಮಳೆ ಅಥವಾ ಅಕಾಲಿಕ ಮಳೆಯಿಂದ ಬೆಳೆ ನಷ್ಟವಾದರೂ ಕೂಡ ಈ ಪಿಎಂ ಫಸಲ್ ಬಿಮಾ ಯೋಜನೆಯಡಿ (PM Fasal Bima Yojana) ನಷ್ಟ ಪರಿಹಾರ ಒದಗಿಸಲಾಗುತ್ತದೆ.
ಪಿಎಂ ಫಸಲ್ ಬಿಮಾ ಯೋಜನೆಯಡಿ (PM Fasal Bima Yojana) ಹೇಗೆ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳುವುದು.?
ನಿಮ್ಮ ಹತ್ತಿರದ ಗ್ರಾಮ ಒನ್, ಸಾಮಾನ್ಯ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಬ್ಯಾಂಕ್‌ಗಳಲ್ಲಿ ವಿಮಾ ಪ್ರಸ್ತಾವನೆ, ಪಹಣಿ, ಚಾಲ್ತಿ ಬ್ಯಾಂಕ್ ಪಾಸ್ ಪುಸ್ತಕ, ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯೊಂದಿಗೆ ಪ್ರೀಮಿಯಂ ಪಾವತಿಸಿ ವಿಮೆಗೆ ನೋಂದಾಯಿಸಿಕೊಳ್ಳಲು ಅವಕಾಶ ಇದೆ.
ಇದನ್ನೂ ಕೂಡ ಓದಿ : Govt Updates : ಎಲ್ಲಾ ಸಾರ್ವಜನಿಕರಿಗೆ ಬಂಪರ್ | ಜುಲೈ 1 ರಿಂದ 4 ಹೊಸ ರೂಲ್ಸ್ ಜಾರಿ | ಪೆಟ್ರೋಲ್ ಡೀಸೆಲ್, ಎಲ್ಪಿಜಿ ಗ್ಯಾಸ್, ಸಿಮ್ ಕಾರ್ಡ್
ಈಗಾಗಲೇ ಬೆಳೆವಾರು ಬೆಳೆ ವಿಮೆ ಕಂತು ಮಾಡಿಸಿದ ರೈತರಿಗೆ ವಿಮಾ ಕಂಪನಿ ಆದ್ಯತೆ ಮೇರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ ಪ್ರಸ್ತುತ ಸಾಲಿನ ಬೆಳೆ ವಿಮೆ ಅರ್ಜಿಯನ್ನು ರೈತರು ಕಾಲಮಿತಿಯಲ್ಲಿ ತುಂಬಿದರೆ ಮಾತ್ರ ವಿವಿಧ ಕಾರಣಕ್ಕೆ ಬೆಳೆ ನಷ್ಟವಾದಲ್ಲಿ ಮಾತ್ರ ಪಿಎಂ ಫಸಲ್ ಬಿಮಾ ಯೋಜನೆಯಡಿ (PM Fasal Bima Yojana) ಈ ಪರಿಹಾರ ಹಣ ಅರ್ಹ ರೈತ ಫಲಾನುಭವಿಗಳಿಗೆ ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ಉಚಿತ ಸಹಾಯವಾಣಿ 1800180 1551 ನಂಬರಿಗೆ ಕರೆ ಮಾಡುವ ಮೂಲಕ ನಿಮ್ಮ ಜಿಲ್ಲೆಗೆ ನಿಗದಿಯಾಗಿರುವ ಬೆಳೆ ವಿಮಾ ಕಂಪನಿಯ ಸಿಬ್ಬಂದಿಯ ಮೊಬೈಲ್ ನಂಬರ್ ಪಡೆದು ವಿವರವಾದ ಮಾಹಿತಿಯನ್ನ ನೀವು ಪಡೆದುಕೊಳ್ಳಬಹುದಾಗಿದೆ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
- 15 ದಿನದ ಹಸುಗೂಸು, 5 ವರ್ಷದ ಮಗುವಿನೊಂದಿಗೆ ರಂಜಿತಾ ನಾಪತ್ತೆ : ಕಣ್ಣೀರಿಡುತ್ತಿರುವ ಕುಟುಂಬ.!
- ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡ – ಭೀಕರವಾಗಿ ಹ*ತ್ಯೆಗೈದು ಶವವನ್ನೂ ಸುಟ್ಟ ಹೆಂಡತಿ!
- ಒಂದಕ್ಕಿಂತ ಹೆಚ್ಚು ಮದುವೆಯಾದರೆ 7 ವರ್ಷ ಜೈಲು ಫಿಕ್ಸ್, ಅಸ್ಸಾಂನಲ್ಲಿ ಬಹುಪತ್ನಿತ್ವ ಮಸೂದೆ ಪಾಸ್! Marriage Act
- ಡಿಕೆಶಿಗೆ ಕೊಟ್ಟ ಮಾತಿಗೆ ಬೆಂಗಳೂರು, ದೆಹಲಿಯಲ್ಲಿ ಉತ್ತರ: ಸಚಿವ ಸತೀಶ್ ಜಾರಕಿಹೊಳಿ
- ಗೋವು ಸಾಗಿಸುತ್ತಿದ್ದ ಲಾರಿ ತಡೆದಿದ್ದಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ
- ಬೋಳರೆ ಗ್ರಾಮದಲ್ಲಿ ಬಹಿರ್ದೆಸೆಗೆ ಹೋದ ಬಾಲಕಿ ಶವವಾಗಿ ಪತ್ತೆ; ಅತ್ಯಾಚಾರಗೈದು ಕೊಲೆ ಶಂಕೆ!
- Ram Mandir : ರಾಮ ಮಂದಿರ ಧ್ವಜಾರೋಹಣ ವೇಳೆ ಮೋದಿಯವರ ಕೈಗಳು ನಡುಗಿದ್ದೇಕೆ? ಇಲ್ಲಿದೆ ಅಸಲಿ ಸತ್ಯ
- ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗೋಣ : ಮಾಜಿ ಸಚಿವ ಕೆ ಎನ್ ರಾಜಣ್ಣ
- IAS ಅಧಿಕಾರಿ ಮಹಾಂತೇಶ ಬೀಳಗಿ ಕಾರು ಅಪಘಾತ ಪ್ರಕರಣ… ಗಾಯಗೊಂಡಿದ್ದ ಮತ್ತೋರ್ವ ಮೃತ್ಯು
- ಕರ್ನಾಟಕ ಸಿಎಂ ಕುರ್ಚಿ ಕದನ – ಸಿದ್ದರಾಮಯ್ಯ ಪ್ಲ್ಯಾನ್ ಏನು ಗೊತ್ತಾ.?
- ʼನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ ಕೊಟ್ಟ ಮಾತನ್ನ ಉಳಿಸಿಕೊಳ್ಳಬೇಕುʼ; ಡಿ.ಕೆ.ಶಿವಕುಮಾರ್ ಈ ಟ್ವೀಟ್ ಕಾಂಗ್ರೆಸ್ ಹೈಕಮಾಂಡ್ಗೆ ಹೇಳಿದ್ದಾ?
- ಕುದುರೆ ವ್ಯಾಪಾರ ಜೋರಾಗಿದ್ದು, ನನಗೆ 100 ಕೋಟಿ ಕೊಟ್ರೆ ನಾನು ಹೋಗಲು ಸಿದ್ಧ : ಸಚಿವ ಕೆ. ವೆಂಕಟೇಶ್
- ಡಿ.ಕೆ.ಶಿವಕುಮಾರ್ ಭೇಟಿಯಾದ್ರೂ ಸಿದ್ದರಾಮಯ್ಯಗೇ ನಮ್ಮ ಬೆಂಬಲ : ಸಚಿವ ಸತೀಶ್ ಜಾರಕಿಹೊಳಿ
- ನನ್ನ ದೇಹಕ್ಕೆ ಪತಿ ಪಾದರಸ ಇಂಜೆಕ್ಟ್ ಮಾಡಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ ಮರುದಿನವೇ ಪತ್ನಿ ಸಾವು!
- ತಾಯಿ ಸಮಾಧಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ! ಅಪಘಾತದ ಕಾರಣ ಕುಟುಂಬಸ್ಥರಿಂದ ಅಗ್ನಿಸ್ಪರ್ಶ!
- ಕಲಬೆರೆಕೆ ನಂದಿನಿ ತುಪ್ಪ ಜಾಲ – ಗಂಡ ಹೆಂಡತಿಯೇ ಕಿಂಗ್ ಪಿನ್! ದಂಪತಿ ಅರೆಸ್ಟ್ – Nandini Ghee
- ಪರಮೇಶ್ವರ್ ದುಡಿದಿರುವ ಕೂಲಿಯೇ ಬಾಕಿಯಿದೆ, ಡಿಕೆಶಿ ಲೆಕ್ಕ ಆಮೇಲೆ – ಮಾಜಿ ಸಚಿವ ಕೆ.ಎನ್. ರಾಜಣ್ಣ
- ‘ಪ್ಲೀಸ್ ವೇಟ್ ಐ ವಿಲ್ ಕಾಲ್ ಯು’ : ಡಿಸಿಎಂ ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶ..!
- ಕ್ರಿಕೆಟ್ ತಾರೆ ‘ಸ್ಮೃತಿ ಮಂಧಾನಾ’ಗೆ ಪಲಾಶ್ ಮೋಸ ಮಾಡಿದ್ರಾ.? ಚಾಟ್’ಗಳ ‘ಸ್ಕ್ರೀನ್ಶಾಟ್’ ವೈರಲ್
- ಮಹಂತೇಶ್ ಬೀಳಗಿಯದ್ದು ಅಪಘಾತವಲ್ಲ, ಮರ್ಡರ್.! ಹೀಗೊಂದು ಬಾಂಬ್ ಹಾಕಿದ್ದು ಯಾರು.?



















