ದೀಪಾವಳಿಗೂ ಮುನ್ನ PF ಅಕೌಂಟ್ ಗೆ ಗುಡ್ ನ್ಯೂಸ್ | PF Account Rules

Spread the love

ನೀವು ಕೂಡ ಪಿಎಫ್ ಖಾತೆಯನ್ನ ಹೊಂದಿದ್ರೆ ಕೇಂದ್ರ ಸರ್ಕಾರದಿಂದ ನಿಮಗೊಂದು ಗುಡ್ ನ್ಯೂಸ್ ಬಂದಿದೆ. ಕೇಂದ್ರ ಸರ್ಕಾರ ಈಗ ಪಿಎಫ್ ಖಾತೆಯನ್ನ ಹೊಂದಿರುವ ಎಲ್ಲರಿಗೂ ಹೊಸ ಸೇವೆಯನ್ನ ಆರಂಭಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಪಿಎಫ್ ಖಾತೆ ಹೊಂದಿರುವವರಿಗೆ ಗುಡ್ ನ್ಯೂಸ್ ಕೊಟ್ಟಿದೆ. 

ಕೇಂದ್ರ ಸರ್ಕಾರ ಈಗ ಪಿಎಫ್ ಖಾತೆಯ ಹಣವನ್ನ ಹಿಂಪಡೆಯುವಿಕೆಗೆ ಸಂಬಂಧಪಟ್ಟಂತೆ ದೇಶಾದ್ಯಂತ ಹೊಸ ಸೇವೆಯನ್ನ ಆರಂಭಿಸಿದೆ. ಇನ್ನು ಮುಂದೆ ಪಿಎಫ್ ಖಾತೆಯನ್ನು ಹೊಂದಿರುವವರು ತ್ವರಿತವಾಗಿ ತಮ್ಮ ಖಾತೆಯಲ್ಲಿರುವ ಹಣವನ್ನ ಹಿಂಪಡೆದುಕೊಳ್ಳಬಹುದು. ಈ ಹಿಂದೆ ಪಿಎಫ್ ಖಾತೆಯನ್ನು ಹೊಂದಿರುವವರು ತಮ್ಮ ಖಾತೆಯಲ್ಲಿರುವ ಹಣವನ್ನ ವಿಥ್ ಡ್ರಾ ಮಾಡಲು 15 ರಿಂದ 20 ದಿನಗಳವರೆಗೆ ಕಾಯಬೇಕಾಗಿತ್ತು.

ಆದರೆ ಇನ್ನು ಮುಂದೆ ಇಷ್ಟು ದಿನಗಳವರೆಗೆ ಕಾಯುವ ಅಗತ್ಯವಿಲ್ಲ. ಈಗ ಕೇವಲ ಮೂರು ದಿನದಲ್ಲಿ ಪಿಎಫ್ ಹಣವನ್ನ ವಿಥ್ ಡ್ರಾ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3.0 ಡಿಜಿಟಲ್ ಸುಧಾರಣೆಯಲ್ಲಿ ಈಗ ಪಿಎಫ್ ಹಣವನ್ನ ಎರಡರಿಂದ ಮೂರು ದಿನಗಳವರೆಗೆ ವಿಥ್ ಡ್ರಾ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರದ ಈ ಯೋಜನೆಯನ್ನ ದೇಶಾದ್ಯಂತ ಯಶಸ್ವಿಯಾಗಿ ಜಾರಿಗೆ ತರುವ ಜವಾಬ್ದಾರಿಯನ್ನ ಪ್ರಮುಖ ಐಟಿ ಕಂಪನಿಗಳಾದ ವಿಪ್ರೋ, ಟಿಸಿಎಸ್ ಮತ್ತು ಇನ್ಫೋಸಿಸ್ ಸಂಸ್ಥೆಗಳು ಪಡೆದುಕೊಂಡಿದೆ.

ಈ ಮೂರು ಕಂಪನಿಗಳು ಒಗ್ಗೂಡಿಕೊಂಡು ಈಗ ಪಿಎಫ್ ಖಾತೆಯಲ್ಲಿರುವ ಹಣವನ್ನ ಎರಡರಿಂದ ಮೂರು ದಿನಗಳ ಒಳಗಾಗಿ ಖಾತೆಗೆ ಜಮಾ ಮಾಡುವ ತಂತ್ರಜ್ಞಾನವನ್ನ ಜಾರಿಗೆ ತರಲು ಮುಂದಾಗಿದೆ. ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ನವೆಂಬರ್ ನಿಂದ ಈ ಹೊಸ ಯೋಜನೆ ಜಾರಿಗೆ ಬರಲಿದೆ. ಈ ಹೊಸ ಯೋಜನೆ ದೇಶಾದ್ಯಂತ ಜಾರಿಗೆ ಬಂದ ನಂತರ ಪಿಎಫ್ ಖಾತೆಯನ್ನ ಹೊಂದಿರುವವರು ಎರಡರಿಂದ ಮೂರು ದಿನಗಳ ಒಳಗಾಗಿ ತಮ್ಮ ಖಾತೆಗೆ ಹಣವನ್ನ ಜಮಾ ಮಾಡಿಸಿಕೊಳ್ಳಬಹುದು.

ಅಷ್ಟೇ ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಪಿಎಫ್ ಖಾತೆಯನ್ನು ಹೊಂದಿರುವವರು ಎಟಿಎಂ ಮೂಲಕ ಹಣವನ್ನ ವಿಥ್ ಡ್ರಾ ಮಾಡಿಕೊಳ್ಳಬಹುದು. ಈ ಮೂಲಕ ಪಿಎಫ್ ಖಾತೆಯನ್ನು ಹೊಂದಿರುವವರಿಗೆ ಕೇಂದ್ರ ಸರ್ಕಾರ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ ಎಂದು ಹೇಳಬಹುದು.

WhatsApp Group Join Now

Spread the love

Leave a Reply