Pension Status Check : ಪಿಂಚಣಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ.? ನಿಮ್ಮ ಮೊಬೈಲ್ ನಲ್ಲಿ ಹೀಗೆ ಚೆಕ್ ಮಾಡಿಕೊಳ್ಳಿ – ಡೈರೆಕ್ಟ್ ಲಿಂಕ್

Pension Status Check : ನಮಸ್ಕಾರ ಸ್ನೇಹಿತರೇ, ಬಡವರಿಗೆ ಪ್ರತಿ ತಿಂಗಳು ಸರ್ಕಾರದ ವತಿಯಿಂದ ನೀಡಲಾಗುವ ಪಿಂಚಣಿಗಳಾದ ಇಂದಿರಾಗಾಂಧಿ ನ್ಯಾಶನಲ್ ಓಲ್ಡ್ ಏಜ್ ಪೆನ್ಶನ್, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರ ಯೋಜನೆ, ವಿಧವೆಯರ ಪೆನ್ಶನ್, ಮನಸ್ವಿನಿ ಯೋಜನೆ ಸೇರಿದಂತೆ ಇತರ ಯೋಜನೆಗಳ ಮೂಲಕ ನೀಡಲಾಗುವ ಪಿಂಚಣಿಗಳು(Pension) ಎಷ್ಟು ಕಂತುಗಳು ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆ ಅಥವಾ ಅಂಚೆ ಕಚೇರಿ ಖಾತೆಗೆ ಜಮೆಯಾಗಿದೆ ಎಂಬುದನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ.? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಯಾವುದು.? ಹಾಗು ಪಿಂಚಣಿ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ.? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

ಇದನ್ನೂ ಕೂಡ ಓದಿ : Anganawadi Jobs : ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಹೇಗೆ ಅರ್ಜಿ ಸಲ್ಲಿಸುವುದು.? ಬೇಕಾಗುವ ದಾಖಲೆಗಳೇನು.?

ಬಡವರಿಗೆ ಪ್ರತಿ ತಿಂಗಳು ಕೇಂದ್ರ ಹಾಗು ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ಪಿಂಚಣಿಯ ಮಾಹಿತಿಯನ್ನು ಅಂದರೆ ಅವರು ಪಿಂಚಣಿಗೆ ನೋಂದಣಿಯನ್ನು ಮಾಡಿಸಿದಾಗಿನಿಂದ ಇಲ್ಲಿಯವರೆಗೆ ಎಷ್ಟು ಕಂತುಗಳು ಯಾವ ಯಾವ ತಿಂಗಳಲ್ಲಿ ಹಣ ಅರ್ಹ ಫಲಾನುಭವಿಗಳ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ಜಮೆಯಾಗಿದೆ. ಹಾಗು ಇದುವರೆಗೆ ಎಷ್ಟು ಹಣ ಖಾತೆಗೆ ಜಮೆಯಾಗಿದೆ ಎನ್ನುವುದನ್ನು ಮೊಬೈಲ್ ನಲ್ಲಿಯೇ ಹೇಗೆ ನೋಡಬಹುದು ಎನ್ನುವುದನ್ನ ಕೆಳಗೆ ತಿಳಿಸಲಾಗಿದೆ.

ವೃದ್ಧರು, ಅಂಗವಿಕಲರು, ವಿಧವೆಯರು ಮೊಬೈಲ್ ನಲ್ಲೇ ಪಿಂಚಣಿ ಸ್ಟೇಟಸ್ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ :- ಮಾಹಿತಿ ಕಣಜ (ಸಾರ್ವಜನಿಕ ಮಾಹಿತಿ ವ್ಯವಸ್ಥೆ)

ಮೇಲೆ ನೀಡಿರುವ ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಇಲಾಖೆಯ ಅಧೀಕೃತ ಎಬ್ ಸೈಟ್ ತೆರೆದುಕೊಳ್ಳುತ್ತದೆ. ಅಲ್ಲಿ ತಿಳಿಸಲಾದಂತೆ ಗ್ರಾಮೀಣ ಪ್ರದೇಶದವರಾಗಿದ್ದರೆ, ಗ್ರಾಮೀಣ ಹಾಗೂ ನಗರ ಪ್ರದೇಶದವರಾಗಿದ್ದರೆ, ನಗರ ಎಂದು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಿ. ಬಳಿಕ ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಿ. ನಂತರ ಸಲ್ಲಿಸಿ ಒಪ್ಶನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಗ್ರಾಮದಲ್ಲಿ ಪಿಂಚಣಿ ಪಡೆಯುವ ಎಲ್ಲಾ ಫಲಾನುಭವಿಗಳ ಹೆಸರು ಕಾಣುತ್ತದೆ.

ಇದನ್ನೂ ಕೂಡ ಓದಿ : Gruhalakshmi Scheme : ಮಹಿಳೆಯರಿಗೆ ಸಿಹಿಸುದ್ಧಿ.!ಗೃಹಲಕ್ಷ್ಮಿ ಹಣ ಜಮಾ ಆಗುವುದು ಯಾವಾಗ.? ಸಚಿವರಿಂದ ಬಿಗ್ ಅಪ್ಡೇಟ್.!

ನಿಮ್ಮೂರಿನಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ. ನಿಮ್ಮ ಹೆಸರು ಮುಂದೆ ನಿಮ್ಮ ತಂದೆ ಅಥವಾ ಪತಿಯ ಹೆಸರು ಇರುತ್ತದೆ. ವಿಳಾಸ, ಹುಟ್ಟಿದ ದಿನಾಂಕ, ಯಾವ ಪಿಂಚಣಿ ಪಡೆಯುತ್ತಿದ್ದೀರಿ, ಪಿಂಚಣಿ ಅನುಮತಿ ಸಂಖ್ಯೆ, ಪಿಂಚಣಿ ಅನುಮತಿ ದಿನಾಂಕ ಹಾಗೂ ಪಿಂಚಣಿ ಮೊತ್ತ, ಇಲ್ಲಿಯವರೆಗೆ ಪಡೆದ ಪಿಂಚಣಿಯ ವಿವರ, ಪಿಂಚಣಿ ಐಡಿ ಹಾಗೂ ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಅಂಕೆಗಳು, ಪಿಂಚಣಿ ಮೊತ್ತ ಹಾಗೂ ಪಾವತಿ ಮಾಡಿದ ದಿನಾಂಕಗಳ ಪಟ್ಟಿ ಕಾಣುತ್ತದೆ. ಯಾವ ತಿಂಗಳಿಂದ ನಿಮಗೆ ಪಿಂಚಣಿ ಬರುತ್ತಿದೆ? ಸೇರಿದಂತೆ ಎಲ್ಲಾ ಮಾಹಿತಿಗಳು ನಿಮಗೆ ಸಿಗುತ್ತದೆ. ವಿತರಣಾ ವಿಧಾನ ಪಿಂಚಣಿಯನ್ನು ಖಾತಾ ಪುಸ್ತಕದ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ಪಿಂಚಣಿ ಪಡೆಯಲು ಬೇಕಾಗುವ ದಾಖಲೆಗಳೇನು.?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಚುನಾವಣಾ ಗುರುತಿನ ಚೀಟಿ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ
  • ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿ ನೀಡಬೇಕಾಗುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply