PAN Card New Rules : ಪಾನ್ ಕಾರ್ಡ್ ಇದ್ದವರು ತಪ್ಪದೆ ನೋಡಿ – ರಾತ್ರೋರಾತ್ರಿ ಹೊಸ ರೂಲ್ಸ್ ಜಾರಿ

Spread the love

PAN Card New Rules : ಪಾನ್ ಕಾರ್ಡ್ ಹೊಂದಿದವರಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟ ಕೇಂದ್ರ ಆದಾಯ ಮತ್ತು ತೆರಿಗೆ ಇಲಾಖೆ. ಪಾನ್ ಕಾರ್ಡ್ ಇದ್ದವರಿಗೆ ಇದೇ ಆಗಸ್ಟ್ ಒಂದರಿಂದ ಜಾರಿಗೆ ಬಂದಿವೆ ಹೊಸ ರೂಲ್ಸ್. ಪಾನ್ ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್ ಲಿಂಕ್‌ ಮಾಡಬೇಕು ಅಂತ ಸರ್ಕಾರ ಸಾಕಷ್ಟು ಕಾಲಾವಕಾಶ ಕೊಟ್ಟಿತ್ತು. ಅದಾಗಿಯೂ ಲಿಂಕ್ ಮಾಡದವರು ಈಗ ಆದಾಯ ತೆರಿಗೆ ಇಲಾಖೆಯಿಂದ ಟ್ಯಾಕ್ಸ್ ಡಿಮ್ಯಾಂಡ್ ನೋಟಿಸ್ ಪಡೆಯಬೇಕಾಗಬಹುದು.

WhatsApp Group Join Now

ಇದನ್ನೂ ಕೂಡ ಓದಿ : Anganwadi Recruitment 2024 : ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ! ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಇನ್ ಆಪರೇಟಿವ್ ಪಾನ್ ಕಾರ್ಡ್ ಹೊಂದಿದ್ದರೆ, ಶೇಕಡಾ 20% ರಷ್ಟು ಟಿಡಿಎಸ್ ಕಡಿತ ಕಾಣಬೇಕಾಗುತ್ತದೆ. ಪಾನ್ ಕಾರ್ಡ್ ನಂಬರ್ ಮತ್ತು ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡದ ತೆರಿಗೆ ಪಾವತಿದಾರರು, ಹೆಚ್ಚಿನ ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ಮೇ 31 ರೊಳಗೆ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗದ ಪಾನ್ ಕಾರ್ಡ್ ನಂಬರ್ ನಿಷ್ಕ್ರೀಯಗೊಂಡಿರುತ್ತದೆ.

WhatsApp Group Join Now

ಇಂತಹ ಪಾನ್ ಕಾರ್ಡ್ ನಂಬರ್ ಬಳಸಿದರೂ ಅಥವಾ ಬಳಸದೇ ಇದ್ದರೂ ಎರಡು ಒಂದೇ. ಪಾನ್ ಕಾರ್ಡ್ ಇಲ್ಲದೇ ಐಟಿಆರ್ ಸಲ್ಲಿಕೆ ಮಾಡಿದರೆ ಹೆಚ್ಚಿನ ತೆರಿಗೆ ಅನ್ವಯ ಆಗುತ್ತದೆ. 2023ರ ಮಾರ್ಚ್ 28 ಹಾಗು 2024 ಏಪ್ರಿಲ್ 23 ರಂದು ಸಿಬಿಡಿಟಿ (Central Board of Direct Taxes – CBDT) ಈ ಸಂಬಂಧ ಒಂದು ಸುತ್ತೋಲೆ ಹೊರಡಿಸಿದ್ದು, ಅದರ ಪ್ರಕಾರ ಸೆಕ್ಷನ್ 206AA ಅಡಿಯಲ್ಲಿ ಇನ್ ಆಪರೇಟಿವ್ ಪಾನ್ ಕಾರ್ಡ್ ಬಳಸಿದ ತೆರಿಗೆ ಪಾವತಿದಾರರಿಗೆ ಟ್ಯಾಕ್ಸ್ ಡಿಮ್ಯಾಂಡ್ ನೋಟಿಸ್ ಕೊಡಲಾಗುತ್ತಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ.

ಇದನ್ನೂ ಕೂಡ ಓದಿ : ಕಾರ್ಮಿಕರಿಗೆ ಸಿಹಿಸುದ್ಧಿ.! ಉಚಿತ ಟೂಲ್ ಕಿಟ್ ಪಡೆಯಲು ಕಾರ್ಮಿಕರಿಂದ ಅರ್ಜಿ ಆಹ್ವಾನ.! Labour Card Free Tool Kit Scheme

WhatsApp Group Join Now

ವರ್ಷಕ್ಕೆ ₹2.5 ಲಕ್ಷ ರೂಪಾಯಿ ಒಳಗೆ ಸಂಬಳ ಇರುವವರಿಗೆ ವಿನಾಯಿತಿ ಇದೆ. ಅವರ ಪಾನ್ ಕಾರ್ಡ್ ನಿಷ್ಕ್ರೀಯಗೊಂಡಿದ್ದರೂ, ಅವರನ್ನ ಟ್ಯಾಕ್ಸ್ ಡಿಮ್ಯಾಂಡ್ ಗೆ ಪರಿಗಣಿಸಲಾಗುವುದಿಲ್ಲ. ಆದರೆ ವಿನಾಯಿತಿ ಮಿತಿಗಿಂತ ಹೆಚ್ಚಿನ ಆದಾಯ ಇರುವವರು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ ಕ್ರಮ ಎದುರಿಸಬೇಕಾಗುತ್ತದೆ. ನಿಷ್ಕ್ರೀಯ ಪಾನ್ ಕಾರ್ಡ್ ಇದ್ದರೆ, ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತದೆ. 2024 ರ ಮಾರ್ಚ್ 31 ರೊಳಗೆ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಗಡುವು ನೀಡಲಾಗಿತ್ತು. ಲಿಂಕ್ ಆಗದ ಇನ್ ಆಪರೇಟಿವ್ ಪಾನ್ ಕಾರ್ಡ್ ಗೆ ಮೇ 31ಕ್ಕೆ ಮತ್ತೊಂದು ಗಡುವು ಕೊಡಲಾಗಿತ್ತು. ಅಷ್ಟಾಗಿಯೂ ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಲಿಂಕ್ ಮಾಡದವರು ಈಗ ಹೆಚ್ಚುವರಿ ತೆರಿಗೆ ಕಟ್ಟುವುದು ಅನಿವಾರ್ಯವಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.


Spread the love

Leave a Reply