ಬೆಂಗಳೂರಿನಲ್ಲಿ ಘೋರ ದುರಂತ! ಬೆಟ್ಟಿಂಗ್ ಚಟಕ್ಕೆ ಹೋಂ ಗಾರ್ಡ್ ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿ.! ಕೊಲೆಗೂ ಮುನ್ನ ವಿಡಿಯೋ ಶಾಕ್!

ಆನ್‌ಲೈನ್ ಬೆಟ್ಟಿಂಗ್ ಎಂಬ ಹೆಮ್ಮಾರಿ ಮತ್ತೊಂದು ಸಂಸಾರವನ್ನು ಬೀದಿಗೆ ತಳ್ಳಿದೆ. ಬೆಟ್ಟಿಂಗ್ ಚಟಕ್ಕೆ ಬಿದ್ದ ಪತಿಯೊಬ್ಬ ತನ್ನ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಐಟಿ ನಗರಿ ಬೆಂಗಳೂರಿನ ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. WhatsApp Group Join Now ಕೊಲೆಯಾದ ದುರ್ದೈವಿ ಯಾರು? ಮಹಾದೇವಪುರ ಪೊಲೀಸ್ ಠಾಣೆಯಲ್ಲಿಯೇ ಹೋಂ ಗಾರ್ಡ್ (Home Guard) ಆಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುಳಾ (32) ಕೊಲೆಯಾದ ದುರ್ದೈವಿ. ಈಕೆಯ ಪತಿ ಪ್ರದೀಪ್ ಎಂಬಾತನೇ ಈ ಭೀಕರ … Read more

ಹತ್ತು ರೂಪಾಯಿ ಲಂಚವೂ ಕೊಡಬೇಡಿ: ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಸಿಎಂ ಡಿಕೆಶಿ ಖಡಕ್ ವಾರ್ನಿಂಗ್

ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ ಪಾರದರ್ಶಕ ಆಡಳಿತ ನೀಡಲು ಮುಖ್ಯಮಂತ್ರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ಕಿರುಕುಳ ನೀಡುವ ಮತ್ತು ಲಂಚ ಕೇಳುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. WhatsApp Group Join Now ಲಂಚ ಕೇಳಿದರೆ ನೇರ ದೂರು ನೀಡಿ ಇನ್ನು ಮುಂದೆ ಯಾವುದೇ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡಿಕೊಡಲು ಅಧಿಕಾರಿಗಳು ಅಥವಾ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟರೆ ಸಾರ್ವಜನಿಕರು ತಕ್ಷಣ … Read more

ತಿರುವು ಪಡೆದ ಬ್ಯಾಡರಹಳ್ಳಿ ಹತ್ಯಾಕಾಂಡಕ : ಮೊದಲ ಹೆಂಡತಿ ವಿಷಯ ಗೊತ್ತಾಗಿ ಭವಾನಿ ಬೇರೆ ಮದುವೆಗೆ ಒಪ್ಪಿದ್ದಕ್ಕೇ ಕೊಲೆ ಮಾಡಿದ್ನಾ ವಂಚಕ ಪ್ರಿಯಕರ?!

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತುಳಸಿನಗರದಲ್ಲಿ ನಡೆದ ಯುವತಿ ಭವಾನಿ ಭೀಕರ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ! WhatsApp Group Join Now ಮೊಬೈಲ್ ಶೋ ರೂಂ ಉದ್ಯೋಗಿ ಭವಾನಿ ಮತ್ತು ಚಂದ್ರಶೇಖರ್ ಕೇವಲ ಲಿವ್-ಇನ್‌ನಲ್ಲಷ್ಟೇ ಅಲ್ಲ, ಒಂದು ವರ್ಷದ ಹಿಂದೆಯೇ ಯಾರಿಗೂ ತಿಳಿಯದಂತೆ ಕದ್ದುಮುಚ್ಚಿ ಮದುವೆಯಾಗಿದ್ದರು ಎಂಬ ಸತ್ಯದ ಜೊತೆಗೆ, ಈ ಹತ್ಯೆಯ ಹಿಂದಿನ ಅಸಲಿ ಕಾರಣ ಈಗ ಸಾರ್ವಜನಿಕವಾಗಿ ತಲ್ಲಣ ಸೃಷ್ಟಿಸಿದೆ. ಮಾಗಡಿ ಸಮೀಪದ ಗೆಜ್ಜರಗುಪ್ಪೆ ಗ್ರಾಮದ ನಿವಾಸಿ ಭವಾನಿ … Read more

10 ಸ್ನೇಹಿತರ ಟ್ರಿಪ್… ಮನೆಗೆ ವಾಪಸ್ ಬಂದದ್ದು 7 ಜನ ಮಾತ್ರ! ಗೂಗಲ್ ಮ್ಯಾಪ್ ತೋರಿಸಿದ ದಾರಿ ಕೊನೆಗೆ ಸಾವಿನ ಬಾಗಿಲಿಗೆ!

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಪ್ರವಾಸಿಗರಲ್ಲಿ ತೀವ್ರ ಸದ್ದು ಮಾಡುತ್ತಿರುವ ಹಾಸನದ ಶೆಟ್ಟಿಹಳ್ಳಿ ರೋಸರಿ ಚರ್ಚ್ ಬಳಿ ಇಂದು ಒಂದು ಅತ್ಯಂತ ಕರುಣಾಜನಕ ದುರಂತ ಸಂಭವಿಸಿದೆ. ಬೆಂಗಳೂರಿನಿಂದ ಪ್ರವಾಸಕ್ಕೆಂದು ಹೊರಟಿದ್ದ ಮೂವರು ಯುವಕರು ಹೇಮಾವತಿ ನದಿಯ ಹಿನ್ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ. WhatsApp Group Join Now ಗೂಗಲ್ ಮ್ಯಾಪ್‌ನಲ್ಲಿ ಪ್ರವಾಸಿ ತಾಣ ಹುಡುಕುತ್ತಾ ಹೋದ ಈ ಯುವಕರ ಪಾಲಿಗೆ ಅದೇ ಕೊನೆಯ ಪಯಣವಾಗಿದ್ದಾದರೂ ಹೇಗೆ? ಇಲ್ಲಿದೆ ವೈರಲ್ ಆಗುತ್ತಿರುವ ಆ ಭೀಕರ ಘಟನೆಯ ಕಂಪ್ಲೀಟ್ ಡಿಟೇಲ್ಸ್. ಧರ್ಮಸ್ಥಳದಿಂದ … Read more

3 ಎಕರೆ ಇದ್ದ ಜಮೀನು 1400 ಕೋಟಿ ಆಗಿದ್ದು ಹೇಗೆ? ಡಿಕೆಶಿ ರಿಯಲ್ ಎಸ್ಟೇಟ್ ದೊರೆ ಎಂದು ಕುಮಾರಸ್ವಾಮಿ ಕಿಡಿ

ಬಿಡದಿ ಟೌನ್‌ಶಿಪ್ ಜಟಾಪಟಿ ತೀವ್ರಗೊಂಡಿದೆ. ಯೀಜನೆಯ ಅಂತಿಮ ಅಧಿಸೂಚನೆ ಪ್ರಕಟ ಬೆನ್ನಲ್ಲೇ ರೈತರ ಆಕ್ರೋಶ ಜೋರಾಗಿದ್ದು, ಸರ್ಕಾರದ ವಿರುದ್ಧ ಬೃಹತ್ ಹೋರಾಟಕ್ಕೆ ರೈತರು ಸಿದ್ಧತೆ ನಡೆಸಿದ್ದಾರೆ. WhatsApp Group Join Now ಇದರ ನಡುವೆಯೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಗುಡುಗಿದ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್ ಸರ್ಕಾರದ ರಿಯಲ್ ಎಸ್ಟೇಟ್, ಡಿಕೆಶಿಯೇ ರಿಯಲ್ ಎಸ್ಟೇಟ್ ದೊರೆ ಎಂದು ಗುಡುಗಿದ್ದಾರೆ. ಡಿಕೆಶಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ! ಟೌನ್ಶಿಪ್ ಹೆಸರಲ್ಲಿ ರೈತರ ಜಮೀನು ಕಬಳಿಸಲು ನಾವು ಬಿಡೋದಿಲ್ಲ ಎಂದು ಕುಮಾರಸ್ವಾಮಿ … Read more

ಜೈಪುರದಲ್ಲಿ ಮಾನ ಹರಾಜು ಹಾಕಿದ ಬೆಂಗಳೂರು ಪೊಲೀಸರು.! ಲೇಡಿ ಪಿಎಸ್‌ಐ ಸೇರಿ ಮೂವರು ಅರೆಸ್ಟ್

ನ್ಯಾಯ ಕೊಡಿಸುವಲ್ಲಿ ಕರ್ನಾಟಕ (Karnataka) ಪೊಲೀಸ್ ದೇಶದಲ್ಲೇ ನಂಬರ್ ಒನ್. ಆದರೆ ಬೆಂಗಳೂರಿನ ಮೂವರು ಪೊಲೀಸರು ಜೈಪುರದಲ್ಲಿ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿ‌ಯನ್ನು ಬಂಧಿಸಲು ಹೋಗಿದ್ದವರು ಲಂಚ ಸ್ವೀಕರಿಸುತ್ತಿದ್ದಾಗ ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾರೆ. WhatsApp Group Join Now ವರದಕ್ಷಿಣೆ ಪ್ರಕರಣದ ತನಿಖೆಗಾಗಿ ಜೈಪುರಕ್ಕೆ ತೆರಳಿದ್ದ ಪೊಲೀಸರು ದೊಡ್ಡ ದೊಡ್ಡ ಪ್ರಕರಣದಲ್ಲಿ ಸುಮ್ಮನಾಗುವ ಪೊಲೀಸರು ವರದಕ್ಷಿಣೆ ಪ್ರಕರಣದಲ್ಲಿ ರಾಜಸ್ಥಾನಕ್ಕೆ ಹೋಗಿದ್ದರು. ಆರೋಪಿಯನ್ನ ಬಂಧಿಸಿ … Read more

ಮಿಸ್ಟರ್ ಭಗವಾನ್, ನಿನ್ನ ಕೊಡುಗೆ ಏನು? ನಾಲಿಗೆ ಹರಿಬಿಟ್ಟಿದ್ದ ಪ್ರೊಫೆಸರ್‌ಗೆ ಮಾಜಿ ಸಂಸದ ಉಗ್ರಪ್ಪ ತರಾಟೆ

ಹಿಂದೂ ದೇವರು, ಅದರಲ್ಲೂ ಶ್ರೀರಾಮ, ರಾಮಾಯಣದ ಬಗ್ಗೆ ನಾಲಿಗೆ ಹರಿಬಿಟ್ಟು, ವಿವಾದಾತ್ಮಕ ಹೇಳಿಕೆ ನೀಡುವ ಕೆಎಸ್ ಭಗವಾನ್ ವಿರುದ್ಧ ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿಎಸ್ ಉಗ್ರಪ್ಪ ಗರಂ ಆಗಿದ್ದಾರೆ. WhatsApp Group Join Now ಬಾಗಲಕೋಟೆಯಲ್ಲಿ ಮಾತನಾಡಿದ ವಿಎಸ್ ಉಗ್ರಪ್ಪ, ಮಿಸ್ಟರ್ ಭಗವಾನ್, ರಾಮಾಯಣ ಎಷ್ಟು ಬಾರಿ ಓದಿದ್ದಿಯಾ? ಅಂತ ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ಮಿಸ್ಟರ್ ಭಗವಾನ್ ಈ ದೇಶಕ್ಕೆ ಮತ್ತು ರಾಜ್ಯಕ್ಕೆ ನಿನ್ನ ಕೊಡುಗೆ ಏನು? ಅಂತ ಖಾರವಾಗಿ ಪ್ರಶ್ನಿಸಿದ್ದಾರೆ. ಭಗವಾನ್ ವಿರುದ್ಧ ಉಗ್ರಪ್ಪ ಕಿಡಿ … Read more

ಕರ್ನಾಟಕಕ್ಕೆ ಅಗತ್ಯಕ್ಕಿಂತ ಹೆಚ್ಚಿನ ರಸಗೊಬ್ಬರ ಪೂರೈಕೆ: ಅಭಾವ ಆರೋಪಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆ

ಕರ್ನಾಟಕದಲ್ಲಿ ಮುಂಗಾರು ಚಟುವಟಿಕೆ ಆರಂಭವಾಗುತ್ತಿದ್ದಂತೆ ರಸಗೊಬ್ಬರ ಕೊರತೆಯಾಗಿದೆ ಎಂದು ಬಿಂಬಿಸಿ, ಸುಖಾಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಸುರಿಸುವುದು ರಾಜ್ಯ ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ರಾಜ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರಮಾಣ ರಸಗೊಬ್ಬರ ಪೂರೈಸಿದೆ. WhatsApp Group Join Now ಆದರೆ ಕರ್ನಾಟಕ ಸರ್ಕಾರವೇ ಸರಿಯಾಗಿ ರಸಗೊಬ್ಬರ ವಿತರಣೆ ಮಾಡಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್​​ ಜೋಶಿ ಆರೋಪಿಸಿದ್ದಾರೆ. ‘ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿ’ ರಾಜ್ಯದ ಹಲವೆಡೆ ರಸಗೊಬ್ಬರಕ್ಕಾಗಿ ರೈತರ ಪರದಾಟ ವಿಚಾರ … Read more

ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಶಾಸಕ ಜಮೀರ್ ಅಹ್ಮದ್ ನಾನಾ ರೀತಿಯ ಸರ್ಕಸ್, ಕ್ಯಾರೆ ಎನ್ನದ ಸಿಎಂ ಡಿಕೆಶಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಮಾಪ್ತ ಎಂಬ ಕಾರಣಕ್ಕಾಗಿ ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘಿಸುತ್ತಿದ್ದ ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌, ಈಗ ಹಿರಿಯ ನಾಯಕರ ಮನೆ ಮನೆ ಸುತ್ತುವ ಪರಿಸ್ಥಿತಿ ಬಂದಿದೆ. WhatsApp Group Join Now ಜೂನ್‌ 18ರ ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ವದಂತಿಗಳಿವೆ. ಅದರಲ್ಲಿ ಅವಕಾಶ ಗಿಟ್ಟಿಸಲು ಬಹಳಷ್ಟು ಶಾಸಕರು ನಾನಾ ರೀತಿಯ ಕಸರತ್ತು ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಸಚಿವರಾಗಿದ್ದವರ ಪೈಕಿ ಜಮೀರ್‌ ಅಹಮದ್‌ ಖಾನ್‌ ಮತ್ತು ಎಚ್‌.ಸಿ.ಮಹದೇವಪ್ಪ … Read more

ಗಡಿ ಪ್ರದೇಶಗಳಿಗೆ ಭೇಟಿನೀಡಿ ಜನಸಂಖ್ಯಾ ಬದಲು ಪರಿಶೀಲಿಸಲು ಅಮಿತ್ ಶಾ ಮಹತ್ವದ ಆದೇಶ!

ಭಾರತದ ಗಡಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯಾ ಬದಲಾವಣೆಗಳ ಕುರಿತು ಕ್ಷೇತ್ರಕಾರ್ಯ ನಡೆಸಿ ವಿವರವಾದ ಅಧ್ಯಯನ ಕೈಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಮಿತಿಗೆ ಶನಿವಾರ ನಿರ್ದೇಶಿಸಿದ್ದಾರೆ. WhatsApp Group Join Now ಗೃಹ ವ್ಯವಹಾರಗಳ ಸಚಿವಾಲಯ ಸ್ಥಾಪಿಸಿದ ಉನ್ನತ ಮಟ್ಟದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿ ಜಿಲ್ಲೆಗಳು, ಮಹಾನಗರ ಕೇಂದ್ರಗಳು ಹಾಗೂ ಕೈಗಾರಿಕಾ ನಗರಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜನಸಂಖ್ಯಾ … Read more