ದೇಶದ ಎಲ್ಲಾ ಬ್ಯಾಂಕ್ ನೌಕರರಿಗೆ ಇದೀಗ ಹೊಸ ರೂಲ್ಸ್ | ಸ್ಥಳೀಯ ಭಾಷೆ ಬಳಕೆ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ.!

Spread the love

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಸ್ಥಳೀಯ ಗ್ರಾಹಕರು ಮತ್ತು ಬ್ಯಾಂಕ್ ನ ಅನ್ಯ ಭಾಷಿಕ ಸಿಬ್ಬಂದಿಯ ನಡುವೆ ಭಾಷಾ ವಿಚಾರವಾಗಿ ಸಂಘರ್ಷಗಳು ಹೆಚ್ಚಾಗ್ತಾ ಇದೆ. ಇದೀಗ ಈ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನವರು ಬ್ಯಾಂಕುಗಳ ನೇಮಕಾತಿ ನೀತಿಯಲ್ಲಿ ಮಹತ್ವದ ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದಾರೆ. 

ಬ್ಯಾಂಕ್ ಗಳು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳಬೇಕು. ಅಲ್ಲದೇ ಅವರ ಸ್ಥಳೀಯ ಭಾಷಾ ಜ್ಞಾನದ ಆಧಾರದಲ್ಲಿ ಅವರ ವೃತ್ತಿ ಪರಿಧಿಯನ್ನ ಅಳೀಬೇಕು ಎಂದು ಅವರು ಸ್ಪಷ್ಟ ಸೂಚನೆಯನ್ನ ನೀಡಿದ್ದಾರೆ. ಈ ಸಂಬಂಧ ನೇಮಕಾತಿ ಮತ್ತು ಮಾನವ ಸಂಪನ್ಮೂಲ ನೀತಿಗಳಲ್ಲಿ ಬದಲಾವಣೆ ತರಲು ಅವರು ಬ್ಯಾಂಕಿಂಗ್ ವಲಯಕ್ಕೆ ನಿರ್ದೇಶನ ನೀಡಿದ್ದಾರೆ.

12ನೇ ಎಸ್ ಬಿಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸನ್ನಿವೇಶವನ್ನ ಉದ್ದೇಶಿಸಿ ಮಾತನಾಡಿದವರು ಪ್ರಾದೇಶಿಕ ಭಾಷೆಯ ಮಹತ್ವವನ್ನ ಒತ್ತಿ ಹೇಳಿದ್ದಾರೆ. ಪ್ರತಿಯೊಂದು ಶಾಖೆಯಲ್ಲಿ ನೇಮಿಸಲಾಗುವ ಎಲ್ಲಾ ಸಿಬ್ಬಂದಿಗೆ ಅಲ್ಲಿನ ಜನ ಮತ್ತು ಹೋರಾಡುವ ಭಾಷೆಯನ್ನ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು.

ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಗೊತ್ತಿಲ್ಲದಿದ್ದರೂ ಪರವಾಗಿಲ್ಲ ಆದರೆ ಶಾಖೆಯ ಪಟ್ಟದಲ್ಲಿರುವಂತಹ ಉನ್ನತ ಹುದ್ದೆಯ ಸಿಬ್ಬಂದಿ ರಾಜ್ಯದ ಭಾಷೆಯನ್ನು ತಿಳಿದಿರುವುದು ಕಡ್ಡಾಯ ಎಂದು ಅವರು ಇದೀಗ ಸ್ಪಷ್ಟನೆ ಪಡಿಸಿದ್ದಾರೆ. ಇನ್ನು ಬ್ಯಾಂಕುಗಳು ಅನುಸರಿಸುತ್ತಾ ಇದ್ದ ಉತ್ತಮ ಗ್ರಾಹಕ ಸಂಪರ್ಕದ ಕ್ರಮಗಳನ್ನ ಪುನಃ ಅಳವಡಿಸಿಕೊಳ್ಳುವಂತೆ ಅವರು ಸಲಹೆಯನ್ನು ಕೂಡ ನೀಡಿದ್ದಾರೆ.

WhatsApp Group Join Now

Spread the love

Leave a Reply