ನವೆಂಬರ್ 1 ರಿಂದ ಬ್ಯಾಂಕ್ ಖಾತೆಗೆ ಹೊಸ ರೂಲ್ಸ್ | ಬ್ಯಾಂಕ್ ಖಾತೆಯನ್ನ ಹೊಂದಿರುವವರು ತಪ್ಪದೇ ನೋಡಿ

Spread the love

ಯಾವುದೇ ಬ್ಯಾಂಕಿನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ನವೆಂಬರ್ ಒಂದನೇ ತಾರೀಕಿನಿಂದ ಹೊಸ ನಿಯಮ ಜಾರಿಗೆ ಬರಲಿದೆ. ಆರ್ ಬಿಐ ಮತ್ತು ಕೇಂದ್ರ ಸರ್ಕಾರ ಈಗ ಉಳಿತಾಯ ಖಾತೆಯನ್ನು ಹೊಂದಿರುವವರಿಗೆ ಹೊಸ ನಿಯಮವನ್ನ ಜಾರಿಗೆ ತಂದಿದೆ. ಬ್ಯಾಂಕ್ ಉಳಿತಾಯ ಖಾತೆಗಳ ನಾಮಿನಿಗಳಿಗೆ ಸಂಬಂಧಪಟ್ಟಂತೆ ಆರ್ ಬಿಐ ಈಗ ನವೆಂಬರ್ ಒಂದನೇ ತಾರೀಕಿನಿಂದ ದೇಶಾದ್ಯಂತ ಹೊಸ ನಿಯಮವನ್ನ ಜಾರಿಗೆ ತಂದಿದೆ.

ನವೆಂಬರ್ ಒಂದನೇ ತಾರೀಕಿನಿಂದ ಬ್ಯಾಂಕ್ ಖಾತೆಯನ್ನು ಹೊಂದಿರುವವರು ನಾಲ್ಕು ಬಾರಿ ನಾಮಿನಿಯನ್ನ ಬದಲಾಯಿಸಬಹುದು. ಯಾವುದೇ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ಏಕಕಾಲದಲ್ಲಿ ಅಥವಾ ಅನುಕ್ರಮವಾಗಿ ನಾಲ್ಕು ವ್ಯಕ್ತಿಗಳನ್ನ ನಾಮ ನಿರ್ದೇಶಕರು ಅಂದರೆ ನಾಮಿನಿಯಾಗಿ ಆಯ್ಕೆ ಮಾಡಬಹುದು. ಭಾರತೀಯ ರಿಸರ್ವ್ ಬ್ಯಾಂಕಿನ ಈ ಹೊಸ ನಿಯಮ ಠೇವಣಿಯನ್ನು ಇಟ್ಟವರು ಮತ್ತು ನಾಮ ನಿರ್ದೇಶಕರಿಗೆ ಕ್ಲೈಮ್ ಮಾಡಿಕೊಳ್ಳಲು ಸಹಕಾರಿಯಾಗಲಿದೆ.

ಬ್ಯಾಂಕಿನಲ್ಲಿ ಹಣವಿಟ್ಟವರು ಆದ್ಯತೆಯ ಪ್ರಕಾರ ಏಕಕಾಲದಲ್ಲಿ ಅಥವಾ ಅನುಕ್ರಮವಾಗಿ ನಾಮಿನಿಗಳನ್ನ ಆಯ್ಕೆ ಮಾಡಬಹುದು. ನಾಲ್ಕು ನಾಮಿನಿಗಳನ್ನ ಆಯ್ಕೆ ಮಾಡುವ ಅಧಿಕಾರವನ್ನ ಇನ್ನು ಮುಂದೆ ಬ್ಯಾಂಕ್ ಖಾತೆಯನ್ನು ಹೊಂದಿರುವವರು ಪಡೆದುಕೊಳ್ಳುತ್ತಾರೆ. ಕೇವಲ ಬ್ಯಾಂಕ್ ಖಾತೆ ಹೊಂದಿರುವವರಿಗೆ ಮಾತ್ರವಲ್ಲದೆ ಬ್ಯಾಂಕಿನಲ್ಲಿ ಲಾಕರ್ ಇದ್ದವರಿಗೂ ಕೂಡ ಈ ಸೇವೆ ಅನ್ವಯವಾಗುತ್ತದೆ. ಬ್ಯಾಂಕ್ ಲಾಕರ್ ನಲ್ಲಿ ಅಗತ್ಯ ವಸ್ತುಗಳು ಅಥವಾ ಬೆಲೆಬಾಳುವ ವಸ್ತುಗಳನ್ನ ಇಟ್ಟವರು ನಾಮಿನಿಯನ್ನ ಆಯ್ಕೆ ಮಾಡಿಕೊಳ್ಳಬಹುದು.

ನಾಮ ನಿರ್ದೇಶಕರನ್ನ ನಾಲ್ಕು ಬಾರಿ ಆಯ್ಕೆ ಮಾಡುವ ಅಧಿಕಾರವನ್ನ ಇನ್ನು ಮುಂದೆ ಬ್ಯಾಂಕಿನ ಗ್ರಾಹಕರು ಪಡೆದುಕೊಳ್ಳುತ್ತಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಈಗ ಕ್ಲೈಮ್ ಇತ್ಯರ್ಥಗಳನ್ನ ಸರಳೀಕರಣ ಗೊಳಿಸುವ ಉದ್ದೇಶದಿಂದ ಈ ನಿಯಮವನ್ನ ಜಾರಿಗೆ ತಂದಿದೆ.

WhatsApp Group Join Now

Spread the love

Leave a Reply