ಇದೇ ಅಕ್ಟೋಬರ್ ಒಂದನೇ ತಾರೀಕಿನಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಆಗಲಿದ್ದು, ಕೆಲವು ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಅಕ್ಟೋಬರ್ ಒಂದರಿಂದ ಜಾರಿಗೆ ಬರುತ್ತಿರುವ ಕೆಲವು ಹೊಸ ನಿಯಮಗಳು ಬ್ಯಾಂಕಿನಲ್ಲಿ ಖಾತೆ ಹೊಂದಿರುವವರ ಮೇಲೆ ನೇರವಾಗಿ ಪರಿಣಾಮವನ್ನು ಬೀರಲಿದೆ. ಎಟಿಎಂ, ಚೆಕ್ ಮೂಲಕ ಮತ್ತು ಯುಪಿಐ ಗೆ ಸಂಬಂಧಿಸಿದ ಕೆಲವು ವಹಿವಾಟುಗಳ ಮೇಲೆ ಹೊಸ ನಿಯಮಗಳು ಜಾರಿಗೆ ಬರುತ್ತಿದೆ.
ಅಕ್ಟೋಬರ್ ಒಂದನೇ ತಾರೀಕಿನಿಂದ ಕೆಲವು ಖಾಸಗಿ ಬ್ಯಾಂಕುಗಳ ಕನಿಷ್ಠ ಬ್ಯಾಲೆನ್ಸ್ ನಿಯಮದಲ್ಲಿ ಕೆಲವು ಬದಲಾವಣೆಗಳು ಆಗಲಿದೆ. ಹೊಸ ನಿಯಮದ ಪ್ರಕಾರ ಅಕ್ಟೋಬರ್ ಒಂದರಿಂದ ಮೆಟ್ರೋ ಮತ್ತು ನಗರ ಪ್ರದೇಶದಲ್ಲಿ ವಾಸ ಮಾಡುವ ಗ್ರಾಹಕರು ಕನಿಷ್ಠ 5,000/- ರೂಪಾಯಿ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು.
ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುವ ಜನರು ಕನಿಷ್ಠ 2,000/- ರೂಪಾಯಿ ಹಣವನ್ನ ಮಿನಿಮಮ್ ಬ್ಯಾಲೆನ್ಸ್ ಆಗಿ ಕಾಯ್ದುಕೊಳ್ಳಬೇಕಾಗಿದೆ. ಖಾಸಗಿ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ಕನಿಷ್ಠ 5,000/- ಮತ್ತು 2,000 ರೂಪಾಯಿ ಮಿನಿಮಮ್ ಬ್ಯಾಲೆನ್ಸ್ ಮೇಂಟೈನ್ ಮಾಡಬೇಕಾಗುತ್ತದೆ.
ಅಕ್ಟೋಬರ್ ಒಂದನೇ ತಾರೀಕಿನಿಂದ ಎಟಿಎಂ ನಿಯಮದಲ್ಲಿ ಕೂಡ ಕೆಲವು ಬದಲಾವಣೆಗಳು ಆಗಲಿದೆ. ಹೊಸ ನಿಯಮದ ಪ್ರಕಾರ ಮೆಟ್ರೋ ಮತ್ತು ನಗರ ಪ್ರದೇಶದಲ್ಲಿ ವಾಸ ಮಾಡುವವರು ತಿಂಗಳಿಗೆ ಮೂರು ಬಾರಿ ಮಾತ್ರ ಉಚಿತವಾಗಿ ವಹಿವಾಟುಗಳನ್ನ ಮಾಡಬಹುದು. ಮಿತಿಗಿಂತ ಹೆಚ್ಚು ಬಾರಿ ಎಟಿಎಂ ವಹಿವಾಟು ಮಾಡಿದರೆ ಅವರು ಪ್ರತಿ ವಹಿವಾಟಿಗೆ ಶುಲ್ಕವನ್ನ ಪಾವತಿ ಮಾಡಬೇಕು. ಈ ಶುಲ್ಕವು 18 ರೂಪಾಯಿಂದ 25 ರೂಪಾಯವರೆಗೆ ಆಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮತ್ತು ಹಳ್ಳಿ ಪ್ರದೇಶದಲ್ಲಿ ವಾಸ ಮಾಡುವವರು ತಿಂಗಳಿಗೆ ಐದು ಬಾರಿ ಉಚಿತವಾಗಿ ವಹಿವಾಟುಗಳನ್ನ ಮಾಡಬಹುದು.
ಬ್ಯಾಂಕುಗಳು ಗ್ರಾಹಕರಿಗೆ ನೀಡುವ ಚೆಕ್ ನಿಯಮದಲ್ಲಿ ಕೂಡ ಕೆಲವು ಬದಲಾವಣೆಗಳನ್ನ ಕಾಣಬಹುದು. ಈ ಹಿಂದೆ ಬ್ಯಾಂಕುಗಳು ಗ್ರಾಹಕರಿಗೆ 10 ಪುಟಗಳ ಚೆಕ್ ಬುಕ್ ನೀಡುತ್ತಿತ್ತು. ಆದರೆ ಇನ್ನು ಮುಂದೆ ಬ್ಯಾಂಕುಗಳು 20 ಪುಟಗಳ ಚೆಕ್ ಬುಕ್ ನ್ನ ಗ್ರಾಹಕರಿಗೆ ಕೊಡುತ್ತದೆ. 20 ಪುಟಗಳ ಚೆಕ್ ಬುಕ್ ಪಡೆದುಕೊಳ್ಳುವವರು ಶುಲ್ಕವನ್ನ ಕಡ್ಡಾಯವಾಗಿ ಪಾವತಿ ಮಾಡಬೇಕು. ಈ ಎಲ್ಲಾ ಹೊಸ ನಿಯಮಗಳು ಅಕ್ಟೋಬರ್ 1, 2025 ರಿಂದಲೇ ದೇಶಾದ್ಯಂತ ಜಾರಿಗೆ ಬರುತ್ತಿದೆ.