ರಜೆ ಬಳಿಕ ಇದೀಗ 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ರೂಲ್ಸ್.! ಏನಿದು ಹೊಸ ನಿಯಮ!

Spread the love

ಕರ್ನಾಟಕ ಶಾಲಾ ಮಕ್ಕಳು ಹೆಚ್ಚುವರಿಯಾಗಿ ದಸರಾ ಹಬ್ಬದ ರಜೆಯನ್ನ ಪಡೆದುಕೊಂಡ ಕಾರಣ ಈಗ ಎಂಟರಿಂದ 10ನೇ ತರಗತಿ ಮಕ್ಕಳಿಗೆ ರಾಜ್ಯಾದ್ಯಂತ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಎಂಟರಿಂದ 10ನೇ ತರಗತಿ ಮಕ್ಕಳಿಗೆ ಹೊಸ ನಿಯಮವನ್ನ ಜಾರಿಗೆ ತರುವುದರ ಮೂಲಕ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈಗ ಅಧಿಕೃತ ಆದೇಶವನ್ನ ಹೊರಡಿಸಿದೆ.

ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಹೆಚ್ಚುವರಿಯಾಗಿ 10 ದಿನಗಳ ಕಾಲ ದಸರಾ ರಜೆಯನ್ನ ವಿಸ್ತರಣೆ ಮಾಡಲಾಗಿತ್ತು. ಸದ್ಯ ಎಂಟರಿಂದ 10ನೇ ತರಗತಿ ಮಕ್ಕಳ ಸಾಕಷ್ಟು ಪಠ್ಯಕ್ರಮಗಳು ಈ ರಜೆಯಿಂದಾಗಿ ಬಾಕಿ ಉಳಿದುಕೊಂಡಿದೆ. ಈ ಕಾರಣಗಳಿಂದ ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈಗ ಬಹು ದೊಡ್ಡ ತೀರ್ಮಾನವನ್ನು ತೆಗೆದುಕೊಂಡಿದ್ದು, ಮಕ್ಕಳಿಗೆ ಹೆಚ್ಚುವರಿ ಅವಧಿಗಳ ಪಾಠವನ್ನ ಮಾಡಲು ಮುಂದಾಗಿದೆ. ಇನ್ನು ಮುಂದೆ ಎಂಟರಿಂದ 10ನೇ ತರಗತಿ ಮಕ್ಕಳು ಜನವರಿ 24ರವರೆಗೆ ಹೆಚ್ಚುವರಿ ಅವಧಿ ಪಾಠವನ್ನ ಕೇಳಬೇಕಾಗುತ್ತದೆ.

ಜನವರಿ 24ರವರೆಗೆ ಎಂಟರಿಂದ 10ನೇ ತರಗತಿ ಮಕ್ಕಳಿಗೆ ಹೆಚ್ಚುವರಿ ಅವಧಿ ಪಾಠವನ್ನ ಮಾಡಲು ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆ ಈಗ ಆದೇಶವನ್ನು ಹೊರಡಿಸಿದೆ. ಹೆಚ್ಚುವರಿ ರಜೆಯ ಕಾರಣದಿಂದಾಗಿ 66 ಅವಧಿಗಳು ಬಾಕಿ ಉಳಿದುಕೊಂಡಿದ್ದು ಆ ರಜೆಯನ್ನ ಸರಿದೂಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿದೆ. ಅಷ್ಟೇ ಮಾತ್ರವಲ್ಲದೆ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷವಾದ ತರಗತಿಗಳನ್ನು ನಡೆಸಲು ಆದೇಶವನ್ನು ಹೊರಡಿಸಲಾಗಿದೆ.

WhatsApp Group Join Now

Spread the love

Leave a Reply