New Rules for 15 Years Old Vehicles 2025 : ದೇಶದಲ್ಲಿ ವಾಯು ಮಾಲಿನ್ಯ ನಿಯಂತ್ರಿಸುವ ಪ್ರಯತ್ನಗಳ ನಡುವೆ ಕೇಂದ್ರ ಸರ್ಕಾರವು ಇದೀಗ ಹಳೆಯ ವಾಹನಗಳಿಗೆ ಸಂಬಂಧಿಸಿದಂತೆ ನಿಯಮಗಳಲ್ಲಿ ದೊಡ್ಡ ಬದಲಾವಣೆಯನ್ನು ಮಾಡಿದೆ. ಈ ಹೊಸ ನಿಯಮಗಳ ಪ್ರಕಾರ ಹಳೆಯ ವಾಹನಗಳ ಜೀವಿತಾವಧಿಯನ್ನ 15 ವರ್ಷದಿಂದ 20 ವರ್ಷಕ್ಕೆ ಹೆಚ್ಚು ಮಾಡಲಾಗಿದೆ. ಇದು ವಾಹನ ಮಾಲೀಕರಿಗೆ ಒಂದು ರೀತಿಯಲ್ಲಿ ನೆಮ್ಮದಿ ನೀಡಿತ್ತು.
ಹೊಸ ನಿಯಮಗಳ ಪ್ರಕಾರ 15 ವರ್ಷ ಹಳೆಯ ವಾಹನಗಳ ನೊಂದಣಿ ಅವಧಿಯನ್ನ ಈಗ 20 ವರ್ಷಗಳಿಗೆ ವಿಸ್ತಾರ ಮಾಡಿಸುವಂತಹದ್ದು, ಈ ನಿರ್ಧಾರದಿಂದ ವಾಹನ ಮಾಲೀಕರಿಗೆ ತಮ್ಮ ಹಳೆಯ ವಾಹನಗಳನ್ನು ಇನ್ನು ಹೆಚ್ಚು ಕಾಲ ಬಳಸಲು ಕೂಡ ಅವಕಾಶ ಸಿಕ್ಕಿದೆ. ಆದರೆ ಈ ಸೌಲಭ್ಯ ಪಡೆಯಲು ವಿಧಿಸಿರುವಂತಹ ಭಾರೀ ಪ್ರಮಾಣದ ಶುಲ್ಕ ವಾಹನ ಮಾಲೀಕರಿಗೆ ಮಾತ್ರ ಆರ್ಥಿಕ ಹೊರೆಯಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಹಳೆಯ ವಾಹನಗಳ ಬಳಕೆಯನ್ನ ಕಾನೂನು ಬದ್ಧಗೊಳಿಸುವುದರ ಜೊತೆಗೆ ಅವುಗಳ ಮರುನೊಂದಣಿಗೆ ಹೊಸ ದರಗಳನ್ನ ನಿಗದಿ ಪಡಿಸಿದೆ.
20 ವರ್ಷಕ್ಕಿಂತ ಹಳೆಯ ವಾಹನಗಳನ್ನ ಪುನಃ ನೊಂದಣಿ ಮಾಡಿಸುವಾಗ ಈ ಹೊಸ ದರಗಳು ಕೂಡ ಅನ್ವಯವಾಗುತ್ತದೆ. ಮೋಟಾರ್ ಸೈಕಲ್ ಗೆ ಸುಮಾರು 2000, ಅದೇ ರೀತಿ ಲಘು ಮೋಟಾರ್ ವಾಹನ ಕಾರುಗಳಿಗೆ 10 ಸಾವಿರ, ಅದೇ ರೀತಿ ತ್ರಿಚಕ್ರ ವಾಹನಗಳಿಗೆ 5000, ಇನ್ನು ಅಮದು ಮಾಡಿದ ವಾಹನಗಳು ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಚಕ್ರದ ವಾಹನಗಳಿಗೆ 80ಸಾವಿರ, ಈ ಎಲ್ಲಾ ಶುಲ್ಕಗಳಿಗೆ ಜಿಎಸ್ಟಿ ಕೂಡ ಅನ್ವಯವಾಗಲಿದೆ. ಈ ಹೊಸ ನಿಯಮ ದೇಶದಂತೆ ಜಾರಿಗೆ ಬರಲಿದೆ. ಆದರೆ ದೆಹಲಿ ಮತ್ತೆ ಎನ್ಸಿಆರ್ ಪ್ರದೇಶಗಳಿಗೆ ಇದು ಅನ್ವಯ ಆಗುವುದಿಲ್ಲ.
ದೆಹಲಿಯಲ್ಲಿ ಈಗಾಗಲೇ 10 ವರ್ಷ ಹಳೆಯ ಡೀಸೆಲ್ ವಾಹನಗಳು ಮತ್ತೆ 15 ವರ್ಷ ಹಳೆಯ ಪೆಟ್ರೋಲ್ ವಾಹನಗಳ ಬಳಕೆಯನ್ನ ಮಾಲಿನ್ಯದ ಕಾರಣಕ್ಕಾಗಿ ನಿಷೇಧ ಕೂಡ ಮಾಡಲಾಗಿದೆ. ಆದ್ದರಿಂದ ಈ ಹೊಸ ನಿಯಮದಿಂದ ದೆಹಲಿ ಎನ್ಸಿಆರ್ ನ ವಾಹನ ಮಾಲಿಕರಿಗೆ ಯಾವುದೇ ಲಾಭ ಸಿಗುವುದಿಲ್ಲ. ಒಟ್ಟಿನಲ್ಲಿ ವಾಹನಗಳ ಜೀವಿತಾವಧಿ ಹೆಚ್ಚಳ ಒಂದು ಉತ್ತಮ ನಿರ್ಧಾರವಾದರೂ ಕೂಡ ನೊಂದಣಿ ಶುಲ್ಕದಲ್ಲಿನ ಭಾರಿ ಏರಿಕೆಯು ವಾಹನ ಮಾಲೀಕರನ್ನು ಕೂಡ ಚಿಂತೆಗೀಡು ಮಾಡಿದೆ.