ಕಳೆದ ಆರು ತಿಂಗಳಿಂದ ಒಂದೇ ಕಂಪನಿಯಲ್ಲಿ ಕೆಲಸವನ್ನ ಮಾಡುತ್ತಿರುವ ಎಲ್ಲಾ ನೌಕರರಿಗೆ ಕೇಂದ್ರ ಸರ್ಕಾರ ಈಗ ಗುಡ್ ನ್ಯೂಸ್ ನೀಡಿದೆ. ಯಾವುದೇ ಖಾಸಗಿ ಕಂಪನಿಯಲ್ಲಿ ಕೆಲಸವನ್ನ ಮಾಡುತ್ತಿರುವವರಿಗಾಗಿ ಕೇಂದ್ರ ಸರ್ಕಾರ ಈಗ ಹೊಸ ಯೋಜನೆಯನ್ನ ದೇಶಾದ್ಯಂತ ಜಾರಿಗೆ ತಂದಿದೆ. ಕಳೆದ ಆರು ತಿಂಗಳಿಂದ ಒಂದೇ ಕಂಪನಿಯಲ್ಲಿ ಕೆಲಸವನ್ನ ಮಾಡುತ್ತಿರುವವರು ಈ ಯೋಜನೆಯ ಸಂಪೂರ್ಣ ಲಾಭವನ್ನ ಪಡೆದುಕೊಳ್ಳಬಹುದು.
ಕೇಂದ್ರ ಸರ್ಕಾರ ಈಗ ದೇಶದಲ್ಲಿ ಉದ್ಯೋಗಾವಕಾಶವನ್ನ ಹೆಚ್ಚಳ ಮಾಡಲು ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಯನ್ನ ದೇಶಾದ್ಯಂತ ಆರಂಭಿಸಿದೆ. ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಇದೇ ಮೊದಲ ಬಾರಿಗೆ ಕೆಲಸಕ್ಕೆ ಸೇರುವವರ ಖಾತೆಗೆ ನೇರವಾಗಿ 15000 ರೂಪಾಯ ಹಣವನ್ನ ಜಮಾ ಮಾಡಲಾಗುತ್ತದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ಅಂದರೆ ಪಿಎಫ್ ಖಾತೆಯನ್ನು ಹೊಂದಿರುವವರು ಈ ಯೋಜನೆಗೆ ಅರ್ಹತೆಯನ್ನು ಪಡೆದುಕೊಳ್ಳಬಹುದು.
ಪಿಎಫ್ ಖಾತೆಯನ್ನು ಹೊಂದಿರುವವರು ಪ್ರತ್ಯೇಕವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಇಪಿಎಫ್ ನೊಂದಾಯಿತ ಉದ್ಯೋಗಿಯ ಖಾತೆಗೆ ನೇರವಾಗಿ ಹಣವನ್ನ ವರ್ಗಾವಣೆ ಮಾಡಲಾಗುತ್ತದೆ. ಅಷ್ಟೇ ಮಾತ್ರವಲ್ಲದೆ ಉದ್ಯೋಗವನ್ನ ನೀಡುವ ಕಂಪನಿಗಳಿಗೆ ಕೂಡ ಪ್ರೋತ್ಸಾಹವನ್ನ ಕೊಡಲಾಗುತ್ತದೆ. ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಪ್ರತಿ ಉದ್ಯೋಗಿಯು ಪ್ರತಿ ತಿಂಗಳು ಸುಮಾರು 3000 ರೂಪಾಯ ಹಣವನ್ನ ಸಹಾಯದ ರೂಪದಲ್ಲಿ ಪಡೆದುಕೊಳ್ಳಬಹುದು.
ಒಬ್ಬ ಉದ್ಯೋಗಿಗೆ ಸುಮಾರು ಎರಡು ವರ್ಷಗಳವರೆಗೆ ಈ ಯೋಜನೆ ಲಭ್ಯವಿರುತ್ತದೆ. ಯುವಕರಿಗೆ ಹೊಸ ಉದ್ಯೋಗಾವಕಾಶವನ್ನು ಸೃಷ್ಟಿಸುವುದು ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗವನ್ನು ವೃದ್ಧಿಸುವುದು ಈ ಯೋಜನೆಯ ಪ್ರಮುಖವಾದ ಉದ್ದೇಶವಾಗಿದೆ. ಒಂದು ತಿಂಗಳಿಗೆ 1 ಲಕ್ಷ ರೂಪಾಯಿಗಿಂತ ಕಡಿಮೆ ವೇತನವನ್ನ ಪಡೆದುಕೊಳ್ಳುವವರು ಮಾತ್ರ ಈ ಯೋಜನೆಗೆ ಅರ್ಹತೆಯನ್ನ ಪಡೆದುಕೊಳ್ಳುತ್ತಾರೆ.
ಅಷ್ಟೇ ಮಾತ್ರವಲ್ಲದೆ ಇದೇ ಮೊದಲ ಬಾರಿಗೆ ಉದ್ಯೋಗಕ್ಕೆ ಹೋಗುವವರು ಮಾತ್ರ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದು. ಉದ್ಯೋಗಿಯು ಇಪಿಎಫ್ ಖಾತೆಯನ್ನು ಹೊಂದಿರುವುದು ಅತಿ ಕಡ್ಡಾಯವಾಗಿದೆ. ಕನಿಷ್ಠ ಆರು ತಿಂಗಳು ಒಂದೇ ಸಂಸ್ಥೆಯಲ್ಲಿ ಕೆಲಸವನ್ನ ಮಾಡಬೇಕು. ಈ ನಿಯಮವನ್ನ ಪಾಲನೆ ಮಾಡಿದರೆ ಒಬ್ಬ ಉದ್ಯೋಗಿಯು ಕನಿಷ್ಠ 15000 ರೂಪಾಯವರೆಗೆ ಕೇಂದ್ರ ಸರ್ಕಾರದಿಂದ ಸಹಾಯಧನವನ್ನ ಪಡೆದುಕೊಳ್ಳಬಹುದು.

6 ತಿಂಗಳು ಒಂದೇ ಕಂಪನಿಯಲ್ಲಿ ಇದ್ದವರಿಗೆ ದೊಡ್ಡ ರೂಲ್ಸ್ | ಐತಿಹಾಸಿಕ ನಿರ್ಧಾರ
WhatsApp Group
Join Now