ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಣೆಯೆಂದರೆ ಆರಂಭದಿಂದಲೂ 11 ಸೀಸನ್ ಸತತವಾಗಿ ನಿರೂಪಣೆ ಮಾಡಿದ ಕಿಚ್ಚ ಸುದೀಪ್ ಬಿಟ್ಟು ಬೇರಾವ ನಟನನ್ನೂ ಸಹ ಊಹಿಸಿಕೊಳ್ಳುವುದು ಸಾಧ್ಯವಿಲ್ಲ.
ಅಷ್ಟರ ಮಟ್ಟಿಗೆ ಬಿಗ್‌ಬಾಸ್ ಕನ್ನಡ ನಿರೂಪಣೆಯನ್ನು ನಿರ್ವಹಿಸಿ ಜನರ ಮನ ಗೆದ್ದಿರುವ ಸುದೀಪ್ ಕಳೆದ ಆವೃತ್ತಿಯ ಬಿಗ್‌ಬಾಸ್ ತಮ್ಮ ಕೊನೆಯ ಬಿಗ್‌ಬಾಸ್ ಎಂದು ತಿಳಿಸಿದ್ದರು.
ಇನ್ನು ಮುಂದೆ ಬಿಗ್‌ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಸುದೀಪ್ ಖಚಿತಪಡಿಸಿದ್ದರು.
ಆದರೆ ನಿನ್ನೆ ( ಜೂನ್ 30 ) ನಡೆದ ಸುದ್ದಿಗೋಷ್ಟಿಯಲ್ಲಿ ಕಲರ್ಸ್ ಕನ್ನಡ ಕಿಚ್ಚ ಸುದೀಪ್ ಅವರನ್ನು ಮತ್ತೆ ನಿರೂಪಕನನ್ನಾಗಿ ಘೋಷಿಸಿತು. ಸುದೀಪ್ ಅವರು ನಿರೂಪಣೆಗೆ ಒಪ್ಪಿಕೊಂಡಿದ್ದಾರೆ, ಅವರಲ್ಲದೇ ಬೇರೆ ಯಾರನ್ನೂ ಸಹ ಈ ಜಾಗದಲ್ಲಿ ಊಹಿಸಿಕೊಳ್ಳಲಾಗಲ್ಲ ಎಂದು ಹೇಳಿತು.
ಹೀಗೆ ಸುದೀಪ್ ಈ ಬಾರಿಯ ಬಿಗ್‌ಬಾಸ್ ಕನ್ನಡ ನಿರೂಪಣೆಯನ್ನೂ ಮಾಡಲಿದ್ದು ಸದ್ಯ ಸುದೀಪ್ ನಿರ್ಧಾರ ಕೆಲ ನೆಟ್ಟಿಗರ ಪಾಲಿಗೆ ಟ್ರೋಲ್ ವಿಷಯವಾಗಿಬಿಟ್ಟಿದೆ. ಇನ್ನುಮುಂದೆ ನಿರೂಪಕನಾಗಿ ಕೆಲಸ ನಿರ್ವಹಿಸುವುದಿಲ್ಲ ಎಂದು ಘೋಷಿಸಿದ ನಂತರ ಪುನಃ ಯೂಟರ್ನ್ ಹೊಡೆದದ್ದನ್ನು ಎಂಎಸ್ ಧೋನಿ ಎಪಿಎಲ್ ನಿವೃತ್ತಿ ಜೊತೆಗೆ ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದಾರೆ.
ಎಂಎಸ್ ಧೋನಿ ಕಳೆದ ಮೂರು ಐಪಿಎಲ್‌ಗಳಿಂದಲೂ ನಿವೃತ್ತಿ ಘೋಷಿಸುತ್ತೇನೆ ಎನ್ನುತ್ತಲೇ ಇದ್ದಾರೆ ಹೊರತು ನಿವೃತ್ತಿ ತೆಗೆದುಕೊಳ್ಳುತ್ತಿಲ್ಲ. ಅದೇ ರೀತಿ ಸುದೀಪ್ ಸಹ ಇನ್ನುಮುಂದೆ ಬಿಗ್‌ಬಾಸ್ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿ ಪದೇ ಪದೇ ನಿರೂಪಣೆ ಮಾಡುತ್ತಲೇ ಇದ್ದಾರೆ ಎಂದು ಕಾಲೆಳೆದಿದ್ದಾರೆ.

ಮತ್ತೆ ಬಿಗ್‌ಬಾಸ್ ನಿರೂಪಕನಾದ ಕಿಚ್ಚನನ್ನು ಕಂಡು ಇದು ಧೋನಿ ಕಥೆಯಾಯ್ತು ಎಂದು ನಕ್ಕ ನೆಟ್ಟಿಗರು!
WhatsApp Group
Join Now