ತುಮಕೂರಿನ ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಗುಜರಿ ವ್ಯಾಪಾರಿಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪತ್ನಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಫರ್ಜಾನ (31), ಧನರಾಜ್ (24), ವೆಂಕಟೇಶ್ (24) ಹಾಗೂ ದರ್ಶನ್ (24) ಎಂದು ಗುರುತಿಸಲಾಗಿದೆ.
ಮಾರ್ಚ್ 4ರಂದು ಗುಜರಿ ಸಾಮಾನು ತರಲು ಹೊರಟಿದ್ದ ಗುಜರಿ ವ್ಯಾಪಾರಿ ಮನ್ಸೂರ್ ಪಾಷ (31) ನಾಪತ್ತೆಯಾಗಿದ್ದ. ಬಳಿಕ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ಸಮೀಪದ ತೋಟವೊಂದರಲ್ಲಿ ಅವರ ಶವ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಅದರಂತೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದರು.
ಪೊಲೀಸರ ತನಿಖೆಯಲ್ಲಿ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್ ದೊರಕಿದೆ. ಮೃತನ ಪತ್ನಿ ಫರ್ಜಾನ ಮತ್ತು ಆರೋಪಿ ಧನರಾಜ್ ನಡುವೆ ಕಳೆದ ಏಳು ತಿಂಗಳಿಂದ ಪ್ರೇಮ ಸಂಬಂಧವಿದ್ದುದಾಗಿ ತಿಳಿದುಬಂದಿದೆ. ಫರ್ಜಾನ ಈ ವರ್ಷದ ಜನವರಿಯಲ್ಲಿ ಕುಟುಂಬದ ನಿರ್ಧಾರದಂತೆ ಮನ್ಸೂರ್ ಪಾಷ ಅವರನ್ನು ವಿವಾಹವಾಗಿದ್ದರು.
ಆದರೆ ಮದುವೆಯಾದ ಬಳಿಕವೂ ಫರ್ಜಾನ ಮತ್ತು ಧನರಾಜ್ ನಡುವೆ ಸಂಪರ್ಕ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರೂ ಮತ್ತೆ ಒಂದಾಗಲು ಮನ್ಸೂರ್ ಪಾಷ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರೆಂದು ತಿಳಿದು ಬಂದಿದೆ.
ಯೋಜನೆಯಂತೆ ದರ್ಶನ್ ಮೂಲಕ ಮನ್ಸೂರ್ ಪಾಷ ಅವರಿಗೆ ಗುಜರಿ ವಸ್ತುಗಳಿವೆ ಎಂದು ಕರೆ ಮಾಡಲಾಗಿತ್ತು. ಮಾರ್ಚ್ 4ರಂದು ಅವರನ್ನು ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟದ ಬಳಿ ಕರೆಸಿಕೊಂಡು ಗಾಡಿಯ ಶಾಕ್ ಅಬ್ಸಾರ್ಬರ್‌ನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಕೊಲೆ ಬಳಿಕ ಆರೋಪಿಗಳು ಬೇರೆ ಬೇರೆ ಕಡೆ ಪರಾರಿಯಾಗಿದ್ದರು. ಆದರೆ ದರ್ಶನ್ ಮಾಡಿದ ಫೋನ್ ಕರೆ ಹಾಗೂ ಟೆಕ್ನಿಕಲ್ ಮಾಹಿತಿ ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಬಳಿಕ ವಿಚಾರಣೆ ವೇಳೆ ಪ್ರಕರಣದಲ್ಲಿ ಫರ್ಜಾನ ಪಾತ್ರವೂ ಬೆಳಕಿಗೆ ಬಂದಿದೆ. ಸದ್ಯ ಮದುವೆಯಾಗಿ ಕೇವಲ 60 ದಿನಗಳಲ್ಲೇ ಪತಿಯನ್ನು ಹತ್ಯೆ ಮಾಡಿಸಿದ ಆರೋಪದಲ್ಲಿ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಮದುವೆಯಾದ ಎರಡೇ ತಿಂಗಳಲ್ಲಿ ಹ*ತ್ಯೆ – ಪತ್ನಿ, ಪ್ರಿಯಕರನ ಸಂಚು ಬಯಲು.!
WhatsApp Group
Join Now