19 ವರ್ಷದ ಯುವತಿ ಮೂರು ಮಕ್ಕಳ ತಂದೆಯೊಬ್ಬನ ಜೊತೆಗೆ ಲವ್ : ಅಂಕಲ್ ಪ್ರೇಮ ಪಾಶಕ್ಕೆ ಬಿದ್ದು ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ-ಮಗಳು

Spread the love

ಆಕೆಗಿನ್ನು 19 ವರ್ಷ. ಓದಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕಾದ ವಯಸ್ಸು. ಆದ್ರೆ ಈಕೆ ಮಾತ್ರ ಮೂರು ಮಕ್ಕಳ ತಂದೆಯೊಬ್ಬನ ಜೊತೆಗೆ ಪ್ರೇಮ ಪಾಷದಲ್ಲಿ ಬಿದ್ದಿದ್ಲು. ಈ ವಿಚಾರ ಬಹಿರಂಗವಾಗ್ತಿದ್ದಂತೆ, ಮರ್ಯಾದೆಗೆ ಹಂಜಿ ಯುವತಿ ಹಾಗೂ ಆಕೆಯ ತಾಯಿ ನೇಣಿಗೆ ಕೊರಳೊಡ್ಡಿದ್ದಾಳೆ. ಅತ್ತ ಯುವತಿ ಜೊತೆಗೆ ಲವ್ವಿ ಡವ್ವಿ ನಡೆಸಿದ ಅಂಕಲ್ ಕೂಡ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾನೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ಇಂತಹದ್ದೊಂದು ದುರ್ಘಟನೆ ನಡೆದಿರೋದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ. 19 ವರ್ಷದ ಯುವತಿ ಪ್ರಿಯಾಂಕ ಹಾಗೂ ಈಕೆಯ ತಾಯಿ ಶಕುಂತಲಾ‌ದೇವಿ ಬೆಳಗ್ಗೆ ಮನೆಯಲ್ಲೆ ನೇಣು ಬಿಗಿದುಕೊಂಡು ರೀತಿ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣ ಪ್ರೀಯಾಂಕ ಮತ್ತು ಮತ್ತುರಾಜ್ ಎಂಬ ವಿವಾಹಿತನ ನಡುವಿನ ಪ್ರೇಮ ಪ್ರಕರಣವಾಗಿದೆ.ಅಂದಹಾಗೆ 19 ವರ್ಷದ ಪ್ರಿಯಾಂಕ ಹಾಗೂ ಈಕೆಯ ಸಂಬಂಧಿ ಮೂರು ಮಕ್ಕಳ ತಂದೆ ಮುತ್ತುರಾಜನ ನಡುವೆ ಪ್ರೇಮಾಂಕುರವಾಗಿತ್ತು. 

ಇನ್ನೂ ಈ ವಿಚಾರ ಕಳೆದ ಶುಕ್ರವಾರ ಪ್ರಿಯಾಂಕ ಕುಟುಂಬಕ್ಕೆ ಗೊತ್ತಾಗಿತ್ತು. ಬಳಿಕ ಪ್ರಿಯಾಂಕ ತಂದೆ ಮಹೇಶ್ ಮಗಳಿಗೆ ಬೈದು ಬುದ್ದಿಮಾತು ಹೇಳಿದ್ದ. ಇತ್ತ ವಿಚಾರ ಗೊತ್ತಾಗ್ತಿದ್ದಂಗೆ ಅಂಕಲ್ ಮುತ್ತುರಾಜ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದ. ನಂತರ ಅತ್ತ ಪ್ರಿಯಾಂಕ ತಂದೆ ಇನ್ನು ತಡ ಮಾಡೋದು ಬೇಡ ಅಂತ ತರಾತುರಿಯಲ್ಲಿ ಮಗಳಿಗೆ ಸಂಬಂಧವೊಂದನ್ನ ನಿಶ್ಚಯ ಮಾಡಲು ತಯಾರಿ ನಡೆಸಿದ್ದರು. ಆದ್ರೆ ಈ ನಡುವೆ ಏನಾಯ್ತೋ ಗೊತ್ತಿಲ್ಲ ಪ್ರಿಯಾಂಕ ಮತ್ತು ಈಕೆಯ ತಾಯಿ ಶಕುಂತಲಾ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾರೆ.

ಸದ್ಯ ಪ್ರಿಯಾಂಕ ಹಾಗೂ ಶಕುಂತಲಾ ಮರಣೋತ್ತರ ಪರೀಕ್ಷೆ ಮಂಡ್ಯ ಮಿಮ್ಸ್ ನಲ್ಲಿ ನಡೆಸಿ ಮೃತದೇಹಗಳನ್ನ ಪೋಷಕರಿಗೆ  ಹಸ್ತಾಂತರಿಸಲಾಗಿದೆ. ಇನ್ನು ಮಗಳು ಮತ್ತು ಹೆಂಡತಿ ಸಾವಿನ ಬಳಿಕ ಮಹೇಶ್ ಹಲಗೂರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ ಓದಿ ಭವಿಷ್ಯ ಕಟ್ಟಿಕೊಳ್ಳುವ ವಯಸ್ಸಿನಲ್ಲಿ ಪ್ರೀಯಾಂಕ ಆಂಕಲ್ ಪ್ರೇಮ ಪಾಷಕ್ಕೆ ಬಿದ್ದು, ತಾಯಿಯೊಂದಿಗೆ ತಾನೂ ಜೀವ ಕಳೆದುಕೊಂಡಿದ್ದು ಮಾತ್ರ ದುರಂತವೇ ಸರಿ.

WhatsApp Group Join Now

Spread the love

Leave a Reply