ಹಣಕಾಸಿನ ಅಗತ್ಯಕ್ಕೆ ವೈಯಕ್ತಿಕ ಸಾಲವನ್ನ ಹೆಚ್ಚಾಗಿ ತೆಗೆದುಕೊಳ್ಳುವವರು ಇದ್ದಾರೆ. ಆದರೆ ಒಂದೇ ಒಂದು ಮಾಸಿಕ ಕಂತು ಅಂದ್ರೆ ಇಎಂಐ(EMI) ನೀವು ತಪ್ಪಿಸಿದರೆ ಆಗುವ ಭಾರಿ ನಷ್ಟದ ಬಗ್ಗೆ ನೀವು ಎಚ್ಚರ ವಹಿಸಬೇಕು. ಕೇವಲ ಒಂದು ಇಎಂಐ ತಡವಾದರೂ ಅದು ನಿಮ್ಮ ಇಡೀ ಆರ್ಥಿಕ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಸಾಲದ ಕಂತು ಪಾವತಿಯಲ್ಲಿ ವಿಳಂಬವಾದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಅಂದ್ರೆ ಎನ್ಬಿಎಫ್ಸಿ(NBFC) ತಕ್ಷಣ ಕ್ಷಣವೇ ಈ ಮಾಹಿತಿಯನ್ನ ಕ್ರೆಡಿಟ್ ಬ್ಯೂರೋಗೆ ರವಾನಿಸುತ್ತದೆ ಇದರ ಪರಿಣಾಮವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ ತಕ್ಷಣವೇ ಕುಸಿತ ಆಗುತ್ತದೆ. ಕಡಿಮೆ ಕ್ರೆಡಿಟ್ ಸ್ಕೋರ್ ಇದ್ದರೆ ಭವಿಷ್ಯದಲ್ಲಿ ಗೃಹಸಾಲ, ವಾಹನ ಸಾಲ ಅಥವಾ ಕ್ರೆಡಿಟ್ ಕಾರ್ಡ್ನಂತಹ ಯಾವುದೇ ಹೊಸ ಸಾಲಗಳನ್ನ ಪಡೆಯುವುದು ಅಸಾಧ್ಯ.
ಇದರಿಂದ ಸಾಲ ಪಾವತಿ ವಿಳಂಬ, ಆರ್ಥಿಕ ಒತ್ತಡವನ್ನ ಮಾತ್ರವಲ್ಲದೆ ಮಾನಸಿಕ ತೊಂದರೆ ಕೂಡ ಉಂಟುಮಾಡುತ್ತದೆ. ಇಎಂಐ ಬಾಕಿ ಉಳಿದ ತಕ್ಷಣ ಬ್ಯಾಂಕ್ ಅಥವಾ ರಿಕವರಿ ಏಜೆಂಟರ್ಗಳು ಪದೇ ಪದೇ ಕರೆಗಳನ್ನ ಮಾಡಿ ಕಿರಿಕಿರಿ ಉಂಟು ಮಾಡ್ತಾರೆ. ಇದರಿಂದ ನಿಮ್ಮ ನೆಮ್ಮದಿ ಕೂಡ ಹಾಳಾಗಬಹುದು.
ಹಣಕಾಸು ಸಂಸ್ಥೆಗಳೊಂದಿಗೆ ನೇರವಾಗಿ ಮಾತುಕತೆ ನಡೆಸಿ ಸಮಸ್ಯೆ ಬಂದಾಗ ಅದನ್ನ ನಿರ್ಲಕ್ಷಿಸದೆ ತಕ್ಷಣ ನಿಮ್ಮ ಬ್ಯಾಂಕ್ ಅಥವಾ ಎನ್ಬಿಎಫ್ಸಿ(NBFC) ಜೊತೆಗೆ ಮಾತನಾಡಿ ಪರಿಸ್ಥಿತಿಯನ್ನ ವಿವರಿಸಿ. ಅದೇ ರೀತಿ ಸಾಲದ ಅವಧಿಯನ್ನ ಹೆಚ್ಚಿಸಿ ಮಾಸಿಕ ಇಎಂಐ ಮೊತ್ತವನ್ನ ಕಡಿಮೆ ಮಾಡುವ ಕುರಿತು ನೀವು ಮನವಿ ಕೂಡ ಮಾಡಬಹುದು. ಆದರೆ ಹಳೆಯ ಸಾಲ ತೀರಿಸಲು ಮತ್ತೊಂದು ಹೊಸ ಸಾಲ ತೆಗೆದುಕೊಳ್ಳುವ ತಪ್ಪನ್ನ ನೀವು ಮಾಡಬೇಡಿ. ಇದು ಸಾಲದ ಹೊರೆಯನ್ನ ಮತ್ತಷ್ಟು ಹೆಚ್ಚಿಸುತ್ತದೆ.
ಅದೇ ರೀತಿ ನಿಮ್ಮ ಹಣಕಾಸು ನಿರ್ವಹಣೆಯಲ್ಲಿ ಬದಲಾವಣೆ ತಂದು ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಿ. ಬಜೆಟ್ ನಿಗದಿ ಮಾಡಿ ಇನ್ನು ಸಾಧ್ಯ ಆದರೆ ಹೆಚ್ಚು ಬಡ್ಡಿ ಇರುವ ಸಾಲಗಳನ್ನ ಮೊದಲು ಪಾವತಿಸಿ ಮುಗಿಸಲು ಆಧ್ಯತೆಯನ್ನ ನೀಡಿ. ಅದೇ ರೀತಿ ಸಮಯಕ್ಕೆ ಸರಿಯಾಗಿ ಇಎಂಐ ಪಾವತಿಸುವ ಅಭ್ಯಾಸದಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನ ರಕ್ಷಿಸಿ ಭವಿಷ್ಯದ ಸಾಲದ ಅವಕಾಶಗಳನ್ನ ಕೂಡ ಸುರಕ್ಷಿತವಾಗಿರುತ್ತದೆ.
ಒಂದು EMI ಮಿಸ್ ಆದವರಿಗೆ ಇನ್ಮೇಲೆ ಹೊಸ ರೂಲ್ಸ್ | Missed EMI & CIBIL Score
WhatsApp Group
Join Now