RSSನ ಚಿಂತನಾ ಕ್ರಮಗಳಿಂದಲೇ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ : ಸಚಿವ ಪ್ರಿಯಾಂಕ್ ಖರ್ಗೆ

Spread the love

ನಾನು 10 ವರ್ಷ ಪ್ರಧಾನಿಯಾದರೆ, ಭಾರತದಲ್ಲಿರುವ ಮೀಸಲಾತಿಯನ್ನು ತೆಗೆದು, ಬೇರೆ ದೇಶದವರು ಬಂದು ನಮಗೂ ಭಾರತೀಯ ಪೌರತ್ವ ನೀಡಿ ಎನ್ನುವಂತೆ ಮಾಡುತ್ತೇನೆ ಎಂದು ಓರ್ವ ಬಿಜೆಪಿ ಕಾರ್ಯಕರ್ತ ವೀಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ವ್ಯಕ್ತಿಯ ಈ ವೀಡಿಯೋದಲ್ಲಿ ನನಗೆ 10 ವರ್ಷಗಳ ಕಾಲ ಪ್ರಧಾನಿಯಾಗುವ ಅವಕಾಶ ನೀಡಿ, ನಾನು ಅಭಿವೃದ್ಧಿ ಯಾಗಿರುವ ದೇಶಗಳು ಅಂದ್ರೆ, ಅಮೆರಿಕ, ದುಬೈ ಅಂಥ ದೇಶದ ಜನ ನಮ್ಮ ಬಳಿ ಬಂದು, ನಮಗೂ ಭಾರತೀಯ ಪೌರತ್ವ ನೀಡಿ ಅಂತಾ ಕೇಳುವ ಹಾಗೆ ಮಾಡುತ್ತೇನೆ. ಏಕೆಂದರೆ, ನಾನು ಆ ಅವಧಿಯಲ್ಲಿ ಮೀಸಲಾತಿಗಳನ್ನು ತೆಗೆಯುತ್ತೇನೆ. ಸತ್ಯವಾಗಿಯೂ ಬಡವರಾಗಿದ್ದವರಿಗೆ ಮಾತ್ರ ಮೀಸಲಾತಿ ನೀಡುತ್ತೇನೆ. ಜಾತಿ ವಿಷಯದಲ್ಲಿ ಇರುವ ಮೀಸಲಾತಿಯನ್ನು ತೆಗೆಯುತ್ತೇನೆ ಎಂದಿದ್ದಾನೆ.

ಈ ಕೆಲಸ ಮಾಡಿದರೆ, ನನ್ನ ಭಾರತ ದೇಶ ಇಡೀ ವಿಶ್ವವನ್ನೇ ಆಳ್ವಿಕೆ ಮಾಡಬಹುದು. ಆಗ ನಮ್ಮ ಭಾರತದ ರೂಪಾಯಿ ಡಾಲರ್‌ನ್ನು ಮೀರಿ ಬೆಳೆಯುತ್ತದೆ. ಹೀಗಾಗಿ ನನ್ನ ದೇಶದ ಜನರೇ ಇದಕ್ಕಾಗಿ ನಿಮ್ಮ ಆಶೀರ್ವಾದ ನನ್ನ ಮೇಲೆ ಬೇಕು. ಮುಂಬರುವ ದಿನಗಳಲ್ಲಿ ಇಂಥ ಚಮತ್ಕಾರಗಳನ್ನು ನಾನು ಮಾಡಿ ತೋರಿಸುತ್ತೇನೆ. ಅಲ್ಲದೇ, ನಾನು ಭಾರತೀಯ, ಹಿಂದೂಸ್ಥಾನಿ ಅನ್ನುವವರಿಗೆ ಮಾತ್ರ ನನ್ನ ದೇಶದಲ್ಲಿ ಪೌರತ್ವ ಸಿಗುತ್ತದೆ. ಜಾತಿ ಆಧಾರಾದ ಮೇಲೆ ಮೀಸಲಾತಿ ಕೇಳುವವರಿಗೆ ನಾನು ಜೈಲಿಗೆ ಕಳುಹಿಸುತ್ತೇನೆ ಎಂದು ಆ ಯುವಕ ಹೇಳಿದ್ದಾನೆ.

ಈ ಬಗ್ಗೆ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನಸಭೆ ಚುನಾವಣೆಯ ಬಿಜೆಪಿ ಅಭ್ಯರ್ಥಿ ಈಗ ಪ್ರಧಾನಿ ನರೇಂದ್ರ ಮೋದಿ ಹುದ್ದೆಯನ್ನೇ ಕೇಳುತ್ತಿದ್ದಾರೆ! ಮೋದಿಯವರ ಕುರ್ಚಿಗೆ ಕಣ್ಣು ಹಾಕಿರುವ ಈ ವ್ಯಕ್ತಿಯ ಪರವಹಿಸಿ ಬಿಜೆಪಿಯ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಇಡೀ ಬಿಜೆಪಿ ತಂಡ ಕಲಬುರ್ಗಿಯಲ್ಲಿ “ಸದಾರಮೆ ನಾಟಕ” ಪ್ರದರ್ಶಿಸಿದ್ದರು.

ಅದೇ ವ್ಯಕ್ತಿ ಈಗ ಹಲವು ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ, ಇದಕ್ಕೆ ಬಿಜೆಪಿ ನಾಯಕರು ಉತ್ತರ ಹೇಳಲೇಬೇಕಾಗಿದೆ. ಶೋಷಿತ ಸಮುದಾಯಗಳ ಮೀಸಲಾತಿ ರದ್ದುಗೊಳಿಸಬೇಕು, ಸಮುದಾಯ ಆಧಾರಿತ ಮೀಸಲಾತಿ ಕೇಳುವವರನ್ನು ಜೈಲಿಗಟ್ಟಬೇಕು ಎಂಬ ಮಾತುಗಳನ್ನು ಆಡಿದ್ದಾನೆ. ಈ ಬಗ್ಗೆ ಬಿಜೆಪಿಯವರು ಮೌನವಹಿಸಿರುವುದೇಕೆ? ಇದು ಬಿಜೆಪಿಯ ಒಳಮನಸಿನ ಮಾತುಗಳೇ? ಈ ಮಾತುಗಳನ್ನು ಬಿಜೆಪಿ ಅನುಮೋದಿಸುತ್ತದೆಯೇ? ಎಂದು ಪ್ರಿಯಾಂಕ್ ಪ್ರಶ್ನಿಸಿದ್ದಾರೆ.

ಈ ವ್ಯಕ್ತಿಯ ಪರವಹಿಸಿ, ದಂಡೆತ್ತಿ ಬಂದು ‘ದಂಡ’ಯಾತ್ರೆ ಮಾಡಿದ್ದ ಆರ್.ಅಶೋಕ್, ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಅವರೇ, ಈತನ ಮಾತುಗಳಿಗೆ ನಿಮ್ಮ ಉತ್ತರವೇನು? ಈತನ ಅಭಿಪ್ರಾಯ ನಿಮ್ಮ ಅಭಿಪ್ರಾಯವೂ ಆಗಿದೆಯೇ? RSSನ ಚಿಂತನಾ ಕ್ರಮಗಳಿಂದಲೇ ಇಂತಹ ಮೂರ್ಖತನಗಳು ಸೃಷ್ಟಿಯಾಗುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

WhatsApp Group Join Now

Spread the love

Leave a Reply