ರಾಜ್ಯದಲ್ಲಿ ಕುದುರೆ ವ್ಯಾಪಾರ ಜೋರಾಗಿದ್ದು, ಓಬ್ಬೊಬ್ಬ ಶಾಸಕರಿಗೆ ₹50 ರಿಂದ 100 ಕೋಟಿ ಆಫರ್ ಕೊಡಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ನನಗೆ ₹100 ಕೋಟಿ ಕೊಟ್ರೆ ನಾನೇ ಹೋಗೋಕೆ ಸಿದ್ಧನಿದ್ದೇನೆ ಎಂದು ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಏನ್ ಗುರು ನೂರು ಕೋಟಿ ಕೊಟ್ರೆ ನೀನು ಹೋಗಲ್ವ? ಎಂದು ಕ್ಯಾಮರಾದ ಮುಂದೆ ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವರು ಕೇಳಿದ್ದಕ್ಕೆ ನೂರು ಕೋಟಿ ಅಲ್ಲ 200 ಕೋಟಿ ದುಡ್ಡು ಕೊಟ್ರು ನಾನು ಎಲ್ಲಿಗೂ ಹೋಗಲ್ಲ ಎಂದರು.
ಸುಮ್ನೆ ಹೇಳಿದ್ಪಪ್ಪ ಇವೆಲ್ಲಾ ಎಂದು ನಕ್ಕ ಸಚಿವರು, ಕುದುರೆ ವ್ಯಾಪಾರ ಮಾಡೋದು ಬರಿ ಬಿಜೆಪಿಯವರ ಕೆಲಸ, ಸಿಎಂ ಬದಲಾವಣೆ ಎಲ್ಲಾ ಹೈ ಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಅವರು ಹೇಳಿದಂಗೆ ನಾವು ಕೇಳ್ತೀವಿ. ಏನ್ ಏನು ಮಾತುಕಥೆ ಆಗಿದೆ ಅಂತ ನಮಿಗೇನು ಗೊತ್ತಿಲ್ಲ. ಸಿದ್ದರಾಮಯ್ಯ ಕೂಡ ನಮಗೆ ಹೇಳಿಲ್ಲ, ಇದು ಅವರಿಗೆ ಬಿಟ್ಟ ವಿಚಾರ ಎಂದರು. ಡಿಸಿಎಂ ಡಿಕೆಶಿಯಿಂದ ಶಾಸಕರ ಸಹಿ ಸಂಗ್ರಹ ವಿಚಾರಕ್ಕೆ ಮಾತನಾಡಿ, ಈ ಬಗ್ಗೆ ನನಗೇನು ಗೊತ್ತಿಲ್ಲ, ನನ್ನನ್ನು ಡಿಕೆಶಿ ಏನು ಕರೆದು ಮಾತನಾಡಿಲ್ಲ, ನಮ್ಮನ್ನು ಇನ್ನು ಯಾರು ಸಂಪರ್ಕ ಮಾಡಿಲ್ಲ, ಮಾಡಿದಾಗ ನೋಡೋಣ ಎಂದರು.
ದೆಹಲಿ ಪರೇಡ್ ನಡೆಸುತ್ತಿರುವ ಶಾಸಕರ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲವರು ಅವರ ಪರ ಇರೋರು ತಮ್ಮ ನಾಯಕನನ್ನು ಮುಖ್ಯಮಂತ್ರಿ ಮಾಡಿ ಅಂತಾರೆ ಅದರಲ್ಲಿ ತಪ್ಪೇನು ಇಲ್ಲಾ, ದಲಿತರಾದ್ರು ಆಗ್ಲಿ ಹಿಂದುಳಿದವರಾದ್ರು ಯಾರೇ ಸಿಎಂ ಆಗ್ಬೇಕಂದ್ರು ಹೈ ಕಮಾಂಡ್ ನದ್ದೆ ತೀರ್ಮಾನ, ಏನೇ ಆದ್ರು ನಾವು ಸಿಎಂ ಸಿದ್ದರಾಮಯ್ಯ ಪರ ನಿಲ್ಲುತ್ತೇವೆ ಎಂದು ವೆಂಕಟೇಶ್ ನೇರವಾಗಿ ಹೇಳಿದರು.
ನಿವೇಶನಕ್ಕೆ ಭೂಮಿ ಕಾಯ್ದಿರಿಸಲಾಗಿದೆ
ಕಳೆದ 30 ವರ್ಷಗಳ ನಂತರ ಇಲ್ಲಿವರೆಗೂ ಪ.ಪಂ ನಿವಾಸಿಗಳಿಗೆ ನಿವೇಶನ ಕೊಡಲು ಸಾಧ್ಯವಾಗಿರಲಿಲ್ಲ. ಆದರೆ, ಈಗ ಶಾಸಕರ ಮತ್ತು ಪ.ಪಂ.ಯ ಸದಸ್ಯರ ಪ್ರಯತ್ನದಿಂದ ಹೆಸಗಲ್ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.102 ರಲ್ಲಿ 5 ಎಕರೆ ಪ್ರದೇಶವನ್ನು ನಿವೇಶನಕ್ಕೆ ಕಾಯ್ದಿರಿಸಲಾಗಿದೆ ಎಂದು ಪ.ಪಂ. ಅಧ್ಯಕ್ಷ ಕೆ.ವೆಂಕಟೇಶ್ ಹೇಳಿದರು. ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿವೆ.
ಆದರೆ, ಈಗ ಕಾಯ್ದಿರಿಸಿರುವ 5 ಎಕರೆಯಲ್ಲಿ ಕನಿಷ್ಠ 200 ನಿವೇಶನ ನೀಡಲು ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿ ನಿವೇಶನ ಹಂಚಿಕೆಗೆ ಕ್ರಮ ವಹಿಸಲಾಗುವುದು. ಉಳಿದ ಫಲಾನುಭವಿಗಳಿಗೆ ಪಪಂ ವ್ಯಾಪ್ತಿಯ 3 ಕಿ.ಮೀ ಅಂತರದ ಬೀಜವಳ್ಳಿ, ಲೋಕವಳ್ಳಿ, ಬಿದರಹಳ್ಳಿ, ಕೊಲ್ಲಿಬೈಲ್ ಭಾಗದಲ್ಲಿ ನೂರಾರು ಎಕರೆ ಗೋಮಾಳ ಪ್ರದೇಶವಿದ್ದು, ಇದನ್ನು ನಿವೇಶನಕ್ಕಾಗಿ ಕಾಯ್ದಿರಿಸಲು ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.