Santhosh Lad : ಶಿವಾಜಿ ಸೇನೆಯಲ್ಲಿ ಮುಸ್ಲಿಮರಿದ್ದರು.! ಸಂತೋಷ್ ಲಾಡ್ ಹೇಳಿಕೆಗೆ ಮರಾಠ ಯುವಕರ ಆಕ್ರೋಶ.!

Spread the love

ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಮರಾಠಾ ಸಮುದಾಯದ ಯುವಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕಾರ್ಯಕ್ರಮದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಭಾಷಣದ ಬಳಿಕ ಮಾತನಾಡಿದ ಸಂತೋಷ್ ಲಾಡ್, ನಾನೂ ಕೂಡ ಶಿವಾಜಿ ಮಹಾರಾಜರ ವಂಶಸ್ಥನೇ. ಆದರೆ ಇತಿಹಾಸ ತಿರುಚಲಾಗಿದೆ. ಮರಾಠರು ಮುಸ್ಲಿಂ ವಿರೋಧಿಗಳಾಗಿರಲಿಲ್ಲ, ಮೊಘಲರ ವಿರೋಧಿಗಳಾಗಿದ್ದು ಎಂದಿದ್ದಾರೆ. ಶಿವಾಜಿ ಮಹಾರಾಜರಿಗೆ ಸಿಂಹದ ಉಗುರು ಪ್ಲಾನ್ ನೀಡಿದ್ದು ಒಬ್ಬ ಮುಸ್ಲಿಂ ಸೇವಕ ಅಂತ ಲಾಡ್ ಹೇಳಿದ್ರು. ಇದಕ್ಕೆ ಸಿಟ್ಟಿಗೆದ್ದ ಮರಾಠ ಯುವಕರು ಆಕ್ರೋಶ ವ್ಯಕ್ತಪಡಿಸಿದ್ರು.

ಸಚಿವ ಸಂತೋಷ್ ಲಾಡ್ ಮಾತಿಗೆ ಕೆರಳಿ ಕೆಂಡ

ಶಿವಾಜಿ ಮಹಾರಾಜರ ಪುತ್ಥಳಿ ಅನಾವರಣ ಕಾರ್ಯಕ್ರದಲ್ಲಿ ಸಚಿವ ಸಂತೋಷ ಲಾಡ್ ವಿರುದ್ಧ ಮರಾಠ ಸಮುದಾಯದ ಯುವಕರು ಆಕ್ರೋಶಗೊಂಡರು. ಸಂತೋಷ್ ಲಾಡ್ ಹೇಳಿಕೆಗೆ ಮರಾಠಾ ಸಮುದಾಯದ ಜನ ಕೆರಳಿ ಕೆಂಡವಾದ ಘಟನೆ ಕೂಡ ನಡೆಯಿತು.

ಶಿವಾಜಿ ಸೇನೆಯಲ್ಲಿ ಮುಸ್ಲಿಂ ಸೇವಕರು

ನಾನೂ ಕೂಡ ಶಿವಾಜಿ ಮಹಾರಾಜರ ವಂಶಸ್ಥನೇ. ಇತಿಹಾಸ ತಿರುಚಲಾಗಿದೆ. ಮರಾಠರು ಮೊಘಲರ ವಿರೋಧಿಗಳಾಗಿದ್ದರು. ಆದರೆ ಎಂದಿಗೂ ಮುಸ್ಲಿಂ ವಿರೋಧಿಗಳಲ್ಲ ಅಂತ ಸಂತೋಷ್ ಲಾಡ್ ಹೇಳಿದ್ರು. ಅಲ್ಲದೇ ಶಿವಾಜಿ ಮಹಾರಾಜರ ಸೇನೆಯಲ್ಲಿ ಮುಸ್ಲಿಂ ಸೇವಕರೂ ಇದ್ದರು. ಶಿವಾಜಿ ಮಹಾರಾಜರಿಗೆ ಸಿಂಹದ ಉಗುರು ಪ್ಲಾನ್ ನೀಡಿದ್ದು ಒಬ್ಬ ಮುಸ್ಲಿಂ ಸೇವಕ ಅಂತ ಸಂತೋಷ್ ಲಾಡ್ ಹೇಳಿದ್ರು. ಭಾಷಣದ ವೇಳೆ ಮುಸ್ಲಿಂಮರ ವೈಭವಿಕರಣ ಮಾಡಿದ್ದಾರೆಂದು ಸಂತೋಷ್ ಲಾಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಸಂತೋಷ್ ಲಾಡ್ ಮುಂದೆ ಜೈಶ್ರೀರಾಮ್ ಘೋಷಣೆ

ಸಂತೋಷ್ ಲಾಡ್ ಭಾಷಣದ ವೇಳೆ ಅಲ್ಲೇ ವೇದಿಕೆ ಬಳಿಯಿದ್ದ ಕೆಲವರು ಜೈ ಶ್ರೀರಾಮ್ ಘೋಷಣೆ ಕೂಗಿದ್ರು. ಈ ವೇಳೆ ಸಂತೋಷ್ ಲಾಡ್ ಕೂಡ ತಾವೂ ಜೈಶ್ರೀರಾಮ್ ಘೋಷಣೆ ಕೂಗಿದ್ರು. ಬಳಿಕ ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಭಾಷಣ ಮುಗಿಸಿ, ವೇದಿಕೆಯಿಂದ ಕೆಳಕ್ಕೆ ಇಳಿದ್ರು. ಬಳಿಕ ಕಾರ್ಯಕ್ರಮಕ್ಕೆ ಬಂದಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾರಲ್ಲೇ ತೆರಳಿದ್ರು.

ಕಾರ್ಯಕ್ರಮದಲ್ಲಿ ಶಿವಾಜಿ ವಂಶಸ್ಥರು ಭಾಗಿ

ಇದಕ್ಕೂ ಮುನ್ನ ಅಥಣಿಯಲ್ಲಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಮಾಡಲಾಯ್ತು. ಆಥಣಿ ಪಟ್ಟಣದ ಮಧಬಾವಿ ರಸ್ತೆಯಲ್ಲಿ 25 ಅಡಿ ಎತ್ತರ ಇರುವ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅನಾವರಣ ಮಾಡಿದ್ರು. ಈ ವೇಳೆ ಕೇಂದ್ರ ಸಚಿವರಿಗೆ ಸಚಿವ ಸತೀಶ್ ಜಾರಕಿಹೊಳಿ, ಸಚಿವ ಸಂತೋಷ್ ಲಾಡ್, ಶಾಸಕ ಲಕ್ಷ್ಮಣ್ ಸವದಿ, ಶ್ರೀಮಂತ ಪಾಟೀಲ್, ಸಚಿವ ಮಧು ಬಂಗಾರಪ್ಪ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೋಳಿ ಸಾಥ್ ನೀಡಿದ್ರು. ಈ ಕಾರ್ಯಕ್ರಮದಲ್ಲಿ ಶಿವಾಜಿ ಮಹಾರಾಜರ ವಂಶಸ್ಥರು ಭಾಗಿಯಾಗಿದ್ದು ವಿಶೇಷವಾಗಿತ್ತು.

ಕಾರ್ಯಕ್ರಮದ ಬಗ್ಗೆ ಸಂತೋಷ್ ಲಾಡ್ ಟ್ವೀಟ್

ಇನ್ನು ಕಾರ್ಯಕ್ರಮದ ಕುರಿತಂತೆ ಸಚಿವ ಸಂತೋಷ್ ಲಾಡ್ ಟ್ವೀಟ್ ಮಾಡಿದ್ದಾರೆ. ಅಥಣಿಯ ಶ್ರೀ ಭೋಜರಾಜ ಪವಾರ ದೇಸಾಯಿ ಕ್ರೀಡಾಂಗಣದಲ್ಲಿ ಮರಾಠ ಸಮುದಾಯ ಹಾಗೂ ನಮ್ಮ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಸ್ಥಾಪಿಸಲಾದ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಅನಾವರಣ ಸಮಾರಂಭದಲ್ಲಿ ಭಾಗವಹಿಸಲಾಯಿತು. ಈ ಸಮಾರಂಭದಲ್ಲಿ ಮರಾಠಾ ಜಗದ್ಗುರು ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರು, ಸಂಪುಟ ಸಹೋದ್ಯೋಗಿಗಳಾದ ಶ್ರೀ ಸತೀಶ್ ಜಾರಕಿಹೊಳಿ, ಕೊಲ್ಹಾಪುರ ಸಂಸದರಾದ ಡಾ. ಶ್ರೀಮಂತ ಸಾಹು ಛತ್ರಪತಿ ಮಹಾರಾಜರು, ಶಾಸಕರಾದ ಶ್ರೀ ಲಕ್ಷ್ಮಣ ಸವದಿ, ಶ್ರೀ ರಮೇಶ್ ಜಾರಕಿಹೊಳಿ, ಅಥಣಿ ಮತ್ತು ಕಾಗವಾಡ ತಾಲೂಕಿನ ಮರಾಠ ಸಮುದಾಯದ ಮುಖಂಡರು ಉಪಸ್ಥಿತರಿದ್ದರು ಅಂತ ಸಂತೋಷ್ ಲಾಡ್ ಟ್ವೀಟ್ ಮಾಡಿದ್ದಾರೆ.

WhatsApp Group Join Now

Spread the love

Leave a Reply