ತಾಯಿ ಸಮಾಧಿ ಪಕ್ಕದಲ್ಲೇ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ! ಅಪಘಾತದ ಕಾರಣ ಕುಟುಂಬಸ್ಥರಿಂದ ಅಗ್ನಿಸ್ಪರ್ಶ!

Spread the love

ತಾಯಿಗೆ ಪಿಂಚಣಿ ನೀಡಲು ಲಂಚ ಕೇಳಿದ್ದ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತಿದ್ದ ಮಹಾಂತೇಶ್ ಬೀಳಗಿ, ಕಷ್ಟಪಟ್ಟು ಓದಿ ಐಎಎಸ್ ಅಧಿಕಾರಿಯಂತಹ ಉನ್ನತ ಹುದ್ದೆಗೇರಿದ್ದರು. ಹಾಲಿ ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಬೀಳಗಿ ಅವರು ನಿನ್ನೆ ಸಂಜೆ ನಡೆದ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದರು.

ಅಪಾರ ಪ್ರೀತಿ ಹೊಂದಿದ್ದ ಅಮ್ಮನ ಸಮಾಧಿ ಪಕ್ಕದಲ್ಲಿಯೇ ಮಹಾಂತೇಶ್ ಅವರ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿದ್ದವು. ಆದರೆ, ಕೊನೇ ಕ್ಷಣದಲ್ಲಿ ಅಮ್ಮನ ಮಡಿಲು ಸೇರಿಸದೇ ಅಗ್ನಿ ಸ್ಪರ್ಶದ ಮೂಲಕ ಅಂತ್ಯಕ್ರಿಯೆ ನಡೆಸಲಾಗಿದೆ.

ಮಹಾಂತೇಶ್ ಬೀಳಗಿ ಅವರು ನಿನ್ನೆ ಕುಟುಂಬದ ಕೆಲವು ಸದಸ್ಯರೊಂದಿಗೆ ಖಾಸಗಿ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಬರುವಾಗ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಇದಾದ ನಂತರ ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಸಾವಿಗೀಡಾಗಿದ್ದ ಬಗ್ಗೆ ವೈದ್ಯರು ಖಚಿತಪಡಿಸಿದ್ದರು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಮಹಾಂತೇಶ್ ಬೀಳಗಿ ಅವರ ಹುಟ್ಟೂರು ರಾಮದುರ್ಗಕ್ಕೆ ಕೊಂಡೊಯ್ಯಲಾಗಿತ್ತು. ಮಹಾಂತೇಶ್ ಅವರಿಗೆ ಅಮ್ಮ ಎಂದರೆ ಅಪಾರ ಪ್ರೀತಿ. ಹೀಗಾಗಿ, ಅಮ್ಮನ ಸಮಾಧಿ ಪಕ್ಕದಲ್ಲಿಯೇ ಸಮಾಧಿ ಮಾಡುವುದಾಗಿ ಆರಂಭದಲ್ಲಿ ಕುಟುಂಬಸ್ಥರು ನಿರ್ಧಾರ ಮಾಡಿದ್ದರು.

ನಾಲ್ವರ ಮೃತದೇಹ ಒಂದೇ ಕಡೆ ಅಂತ್ಯಕ್ರಿಯೆ

ಆದರೆ, ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಾಗೂ ಲಿಂಗಾಯತ ಸಮುದಾಯದ ಹಿರಿಯರ ಸೂಚನೆಯಂತೆ ಅಮ್ಮನ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡದೇ, ಅವರ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರ ವಲಯದಲ್ಲಿ ಜಮೀನಿನಲ್ಲಿ ನಡೆದ ಅಂತ್ಯಕ್ರಿಯೆ ಮಾಡಲಾಗಿದೆ. ಇನ್ನು ಅಪಘಾತದಲ್ಲಿ ಮೃತಪಟ್ಟ ನಾಲ್ವರ ದೇಹಗಳನ್ನು ಒಂದೇ ಕಡೆ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮಹಾಂತೇಶ್ ಬೀಳಗಿ ಅಣ್ಣ ಸಿದ್ರಾಮಪ್ಪ ಅವರಿಂದ ಅಗ್ನಿಸ್ಪರ್ಶ ಮಾಡಿದ್ದಾರೆ. ಮಹಾಂತೇಶ್ ಬೀಳಗಿ ಜಮೀನಿನಲ್ಲಿ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ಮಹಾಂತೇಶ್ ಬೀಳಗಿ, ಪಕ್ಕದಲ್ಲಿ ಶಂಕರ್ ಬೀಳಗಿ, ಈರಣ್ಣಾ ಬೀಳಗಿ, ಈರಣ್ಣಾ ಶಿರಸಂಗಿ ಅಂತ್ಯಕ್ರಿಯೆ ನಡೆಸಲಾಗಿದೆ.

ಇದಕ್ಕೂ ಮುನ್ನ ರಾಮದುರ್ಗ ಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಾಸಕ ಅಶೋಕ ಪಟ್ಟಣ, ಜಿಎಸ್ ಪಾಟೀಲ್, ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಸೇರಿ ಹಲವು ಐಎಎಸ್ ಅಧಿಕಾರಿಗಳು ಮಹಾಂತೇಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ನಂತರ ಸರ್ಕಾರಿ ಗೌರವ ಸಲ್ಲಿಸಿದ ಪೊಲೀಸ್ ಸಿಬ್ಬಂದಿ, ಗಾಳಿಯಲ್ಲಿ ‌ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಕೆ ಮಾಡಿದರು. ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಸಲಾಗಿದೆ.

ಬೈಕ್ ತಪ್ಪಿಸಲು ಹೋಗಿ ಕಾರು ಅಪಘಾತ:

ರಾಷ್ಟ್ರೀಯ ಹೆದ್ದಾರಿಗೆ ಗೌನಳ್ಳಿ ಎನ್ನುವ ಗ್ರಾಮದ ರಸ್ತೆಯಿಂದ ಬಂದ್ ಬೈಕ್‌ಗೆ ಡಿಕ್ಕಿ ತಪ್ಪಿಸಲು ಹೋಗಿ ಸಂಭವಿಸಿದ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ಮಹಾಂತೇಶ ಬೀಳಗಿ ಅವರ ಇನ್ನೋವಾ ಕಾರು ಅತಿವೇಗದಲ್ಲಿತ್ತು. ಎದುರಿಗೆ ಬಂದ ಬೈಕ್ ತಪ್ಪಿಸಲು ವೇಗವಾಗಿದ್ದ ಕಾರನ್ನು ಬೇರೆ ಲೇನ್‌ಗೆ ತಿರುಗಿಸಿದಾಗ ನಿಯಂತ್ರಣ ಸಿಗದೇ ಮೊದಲು ರಸ್ತೆಯ ಬಲಬದಿಯ ಚಿಕ್ಕ ಸೇತುವೆಗೆ ಡಿಕ್ಕಿಯಾಗಿದೆ. ಅಲ್ಲಿಂದ 20-30 ಅಡಿ ದೂರದಲ್ಲಿ ಜಂಪ್ ಮಾಡಿ ಬೀಳುವ ವಾಹನ, ಅಲ್ಲಿಂದ ರಸ್ತೆ ಬದಿಗೆ ಡಿಕ್ಕಿ ಹೊಡೆದು ಮತ್ತೆ ಪಲ್ಟಿಯಾಗಿ ಪುಟಿದು ಬೀಳುತ್ತದೆ. ಒಟ್ಟಾರೆ ನಾಲ್ಕೈದು ಬಾರಿ ಪಲ್ಟಿಯಾಗಿ ಸಂಪೂರ್ಣ ನುಜ್ಜು ನುಜ್ಜಾಗಿದೆ. ವಾಹನದ ಡಿಕ್ಕಿ ರಭಸಕ್ಕೆ ಸಣ್ಣ ಮರವೊಂದು ಮುರಿದು ಬಿದ್ದಿದೆ. ವಾಹನ ಸಂಪೂರ್ಣ ನುಜ್ಜು ಗುಜ್ಜು, ವಾಹನದ ಭಾಗಗಳು ಅಲ್ಲಲ್ಲಿ ಕಿತ್ತು ಬಿದ್ದಿದ್ದು ಅಪಘಾತದ ತೀವ್ರತೆಗೆ ಸಾಕ್ಷಿಯಾಗಿವೆ. ಘಟನಾ ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು ಭೇಟಿ ಪರಿಶೀಲನೆ ಮಾಡಿದ್ದಾರೆ.

WhatsApp Group Join Now

Spread the love

Leave a Reply