ಮೈಸೂರು: ಇಲ್ಲಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಇ ಆಸಿಫ್ ಇಕ್ಬಾಲ್ ಖಲೀಲ್ ಅವರಿಗೆ ಸೇರಿದ ಆಸ್ತಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ₹1.03 ಕೋಟಿ ಮೌಲ್ಯದ 5 ನಿವೇಶನ ಹಾಗೂ ₹4.28 ಕೋಟಿ ಮೌಲ್ಯದ ಏಳು ಮನೆಗಳನ್ನು ಪತ್ತೆ ಹಚ್ಚಿದ್ದಾರೆ.
ಲೋಕಾಯುಕ್ತ ಎಸ್‌ಪಿ ಉದೇಶ್ ಮಾರ್ಗದರ್ಶನದಲ್ಲಿ ಪೊಲೀಸರ ತಂಡವು ಎನ್.ಆರ್ ಮೊಹಲ್ಲಾದಲ್ಲಿರುವ ಆಸಿಫ್ ಅವರಿಗೆ ಸೇರಿದ 2 ಮನೆ, ಸರಸ್ವತಿಪುರಂನಲ್ಲಿರುವ ಕಚೇರಿಗೆ ಏಕಕಾಲದಲ್ಲಿ ದಾಳಿ ನಡೆಸಿದೆ. ಈ ವೇಳೆ ಅವರ ಆಸ್ತಿ ಕಂಡು ಅಚ್ಚರಿಗೆ ಒಳಗಾದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ, ಮೈಸೂರಿನ ವಿಜಯನಗರ, ಎನ್.ಆರ್ ಮೊಹಲ್ಲಾ, ಮಂಡಿ ಮೊಹಲ್ಲಾ, ಪಿರಿಯಾಪಟ್ಟಣ, ಬನ್ನಿಮಂಟಪದಲ್ಲಿ ಅವರಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ನಿವೇಶನ ಹಾಗೂ ಮನೆಗಳಿವೆ. ಅವರಿಗೆ ₹ 49 ಲಕ್ಷ ಮೌಲ್ಯದ 38 ಗುಂಟೆ ಕೃಷಿ ಜಮೀನು ಕೂಡ ಇರುವುದನ್ನು ಪತ್ತೆ ಹಚ್ಚಲಾಗಿದೆ.
₹6.13 ಕೋಟಿ ಸ್ಥಿರಾಸ್ತಿ ಹಾಗೂ ₹3 ಕೋಟಿ ಚರಾಸ್ತಿಯನ್ನು ಅವರು ಹೊಂದಿದ್ದಾರೆ. ₹2.78 ಕೋಟಿ ಮೌಲ್ಯದ ಚಿನ್ನಾಭರಣ, ₹22.50 ಲಕ್ಷ ಮೌಲ್ಯದ ವಾಹನಗಳೂ ಪತ್ತೆಯಾಗಿವೆ’ ಎಂದು ಉದೇಶ್ ಮಾಧ್ಯಮಗಳಿಗೆ ತಿಳಿಸಿದರು.
ಲೋಕಾಯುಕ್ತ ದಾಳಿ: ಕಾರ್ಯನಿರ್ವಾಹಕ ಎಂಜಿನಿಯರ್ ಖಲೀಲ್ ಬಳಿ 7 ಮನೆ, 5 ನಿವೇಶನ
WhatsApp Group
Join Now