Loan Interest Waiver : ರೈತರ ಸಾಲದ ಮೇಲಿನ ಬಡ್ಡಿ ಮನ್ನಾ.! ಯಾರೆಲ್ಲಾ ಅರ್ಹರು.? ಬೇಕಾಗುವ ದಾಖಲೆಗಳೇನು.?

Loan Interest Waiver : ನಮಸ್ಕಾರ ಸ್ನೇಹಿತರೇ, ರಾಜ್ಯದ ರೈತರು ಬ್ಯಾಂಕುಗಳಲ್ಲಿ ಪಡೆದಿರುವಂತಹ ಸಾಲದ ಬಡ್ಡಿ ಮನ್ನಾ ಮಾಡಲು ಸರ್ಕಾರವು ರೈತರಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯದ ಪಶುಪಾಲನಾ ಇಲಾಖೆಯಿಂದ ರೈತರು ಹೈನುಗಾರಿಕೆ ಮಾಡಲು ಬ್ಯಾಂಕುಗಳಲ್ಲಿ ಪಡೆದಿರುವಂತಹ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡಲು ಅರ್ಹ ಫಲಾನುಭವಿ ರೈತ ಅಭ್ಯರ್ಥಿಗಳಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ.

ಪಶುಪಾಲನಾ ಇಲಾಖೆಯ ಈ ಯೋಜನೆಗೆ ಯಾರೆಲ್ಲಾ ಅರ್ಜಿಯನ್ನ ಸಲ್ಲಿಸಬಹುದು.? ಹೇಗೆ ಅರ್ಜಿ ಸಲ್ಲಿಸಬೇಕು.? ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳೇನು.?ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.

WhatsApp Group Join Now

ಇದನ್ನೂ ಕೂಡ ಓದಿ : Anganwadi Recruitment 2024 : ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ! ಈ ಡೈರೆಕ್ಟ್ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ

ಸಾಲದ ಮೇಲಿನ ಬಡ್ಡಿ ಸಹಾಯಧನ :-

ರಾಜ್ಯದ ಪಶುಪಾಲನಾ ಇಲಾಖೆಯು ರೈತರು ಹೈನುಗಾರಿಕೆ ಮಾಡಿ ಉತ್ತಮ ಆದಾಯ ಗಳಿಸಲಿ ಎನ್ನುವ ಉದ್ದೇಶದಿಂದಾಗಿ ಸಾಲದ ಸೌಲಭ್ಯವನ್ನು ನೀಡುತ್ತಿದ್ದು, ಅದರ ಜೊತೆಗೆ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರವನ್ನು ಮನ್ನಾ ಮಾಡುವ ಅಥವಾ ಬಡ್ಡಿ ಸಹಾಯಧನವನ್ನು ನೀಡುತ್ತಿದೆ. ಈ ಯೋಜನೆಯ ಅಡಿಯಲ್ಲಿ ರೈತ ಮಹಿಳೆಯರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೈನುರಾಸುಗಳನ್ನು ಖರೀದಿಸಲು ತೆಗೆದುಕೊಂಡಿರುವಂತಹ ಸಾಲದ ಮೇಲಿನ ಬಡ್ಡಿ ಸಹಾಯಧನ ನೀಡುತ್ತಿದೆ.

WhatsApp Group Join Now

ಸಾಲದ ಮೇಲಿನ ಬಡ್ಡಿ ಎಷ್ಟು ಮನ್ನಾ ಆಗಲಿದೆ.?

ರೈತರು ಹೈನುಗಾರಿಕೆ ಮಾಡಲು ಖರೀದಿಸಿರುವಂತಹ ಹಸು ಹಾಗು ಎಮ್ಮೆಗಳ ಮೇಲೆ ಸಾಲವನ್ನು ಮಾಡಿ, ನಿಗದಿತ ಅವಧಿಯ ಒಳಗೆ ಮರುಪಾವತಿ ಮಾಡಿದ್ದರೆ ರಾಜ್ಯ ಸರ್ಕಾರದ ಪಶುಪಾಲನೆ ಇಲಾಖೆಯಿಂದ ಶೇ. 6% ರಷ್ಟು ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.

ಇದನ್ನೂ ಕೂಡ ಓದಿ : KSRTC Recruitment 2024 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಇಲಾಖೆಯಲ್ಲಿ 3000ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ.! 10ನೇ ತರಗತಿ ಪಾಸಾಗಿದ್ದರೂ ಸಾಕಂತೆ.!

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು.!

ಸಾಲದ ಮೇಲಿನ ಬಡ್ಡಿಮನ್ನಾಗೆ ಅರ್ಜಿ ಸಲ್ಲಿಸಲು ಹೈನುಗಾರಿಕೆ ಮಾಡುವ ಸಲುವಾಗಿ ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಅರ್ಹ ರೈತ ಫಲಾನುಭವಿ ಮಹಿಳೆಯರು ಮಾಡಿರುವ ಸಾಲಕ್ಕೆ, ಬಡ್ಡಿಮನ್ನಾ ಮಾಡುವ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

WhatsApp Group Join Now

ಪ್ರಮುಖವಾಗಿ ನಿಗದಿತ ಅವಧಿಯ ಒಳಗಾಗಿ ಸಾಲ ಮರುಪಾವತಿ ಮಾಡಿರುವ ಅರ್ಹ ಫಲಾನುಭವಿ ರೈತ ಮಹಿಳೆಯರು ಮಾತ್ರ ಈ ಸಾಲದ ಮೇಲಿನ ಬಡ್ಡಿಮನ್ನಾಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಬೇಕಾಗುವ ದಾಖಲೆಗಳೇನು.?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ಪಾಸ್ ಬುಕ್
  • ಉತಾರ
  • ಭಾವಚಿತ್ರ

ಇದನ್ನೂ ಕೂಡ ಓದಿ : Lineman Recruitment : 2000 ಲೈನ್ ಮ್ಯಾನ್ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ. ಎಸ್ಎಸ್ಎಲ್ ಸಿ ಪಾಸಾದವರು ಅರ್ಜಿ ಸಲ್ಲಿಸಿ.

ಎಲ್ಲಿ ಅರ್ಜಿ ಸಲ್ಲಿಸುವುದು.?

ಸಾಲದ ಮೇಲಿನ ಬಡ್ಡಿಮನ್ನಾ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅರ್ಹ ಫಲಾನುಭವಿ ಮಹಿಳಾ ರೈತರು ನಿಮ್ಮ ತಾಲೂಕಿನ ಪಶು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿಯನ್ನ ಪಡೆದುಕೊಂಡು, ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಕನ್ನಡ ನ್ಯೂಸ್ ಟೈಮ್’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

Leave a Reply